ಮುಂಬೈ: ಬಾಲಿವುಡ್ನ ತಾರಾ ಜೋಡಿಗಳ ವೈಯಕ್ತಿಕ ಜೀವನ ಸದಾ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೊಳಗಾಗುತ್ತದೆ. ಅದರಲ್ಲೂ ಐಶ್ವರ್ಯಾ ರೈ ಬಚ್ಚನ್ ಮತ್ತುಅಭಿಷೇಕ್ ಬಚ್ಚನ್ ದಂಪತಿಯ ದಾಂಪತ್ಯ ಜೀವನ ಹಲವು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ. ರೊಮ್ಯಾನ್ಸ್, ಗ್ಲ್ಯಾಮರ್ನಿಂದ ಗುರುತಿಸಲ್ಪಟ್ಟ ಅವರ ಸಂಬಂಧ ಕಳೆದ ಹಲವು ತಿಂಗಳುಗಳಿಂದ ತೀವ್ರ ಚರ್ಚೆಗೆ ಒಳಗಾಗಿದೆ.
ವಿಶೇಷವಾಗಿ, ಜುಲೈನಲ್ಲಿ ಅನಂತ್ ಅಂಬಾನಿ ಅವರ ಅದ್ಧೂರಿ ವಿವಾಹ ಸಮಾರಂಭದಲ್ಲಿ ಪ್ರತ್ಯೇಕವಾಗಿ ಕಾಣಿಸಿಕೊಂಡ ನಂತರ ವದಂತಿಗಳು ಹೆಚ್ಚು ಉಲ್ಬಣಗೊಂಡವು.ಸ್ಟಾರ್ ಕಪಲ್ನ ಸಂಬಂಧದ ಬಗ್ಗೆ ಅಭಿಮಾನಿಗಳು, ನೆಟ್ಟಿಗರಲ್ಲಿ ಹಲವು ಪ್ರಶ್ನೆಗಳಿವೆ. ದಾಂಪತ್ಯದಲ್ಲಿ ಬಿರುಕು ಮೂಡಿದೆಯೇ ಎಂಬ ಪಿಸುಮಾತುಗಳು ವ್ಯಾಪಕವಾಗಿ ಕೇಳಿಬಂದಿವೆ.
ತೀವ್ರ ವದಂತಿಗಳ ನಡುವೆ ಇದೀಗ ಇವರ ಸಂಬಂಧ ಸರಿ ಇಲ್ಲ ಎನ್ನುವುದಕ್ಕೆ ಮತ್ತೊಂದು ಪುರಾವೆ ಸಿಕ್ಕಿದ್ದು, ಬಚ್ಚನ್ ಕುಟುಂಬದ ಅನುಪಸ್ಥಿತಿಯಲ್ಲಿ ಐಶ್ವರ್ಯಾ ರೈ ತನ್ನ ಪ್ರೀತಿಯ ಪುತ್ರಿಯ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.
ಕಳೆದ ನವೆಂಬರ್ 16 ಐಶ್ವರ್ಯ ರೈ ಪುತ್ರಿ ಆರಾಧ್ಯಾಳ ಹುಟ್ಟುಹಬ್ಬವಿತ್ತು, ಈ ನಿಮಿತ್ತ ಬಿಲೇಟೆಡ್ ಬರ್ತಡೇ ಸೆಲೆಬ್ರೆಷನ್ ಮಾಡಿದ್ದು, ಮಗಳ ಬರ್ತ್ಡೇಯನ್ನು ವಿಶೇಷವಾಗಿ ಆಚರಿಸಿದ್ದಾರೆ. ನಟಿ ಐಶ್ವರ್ಯಾ ಹಂಚಿಕೊಂಡ ಪೋಸ್ಟ್ನಲ್ಲಿ, ಅಜ್ಜ ದಿವಂಗತ ಕೃಷ್ಣರಾಜ್ ರೈ ಫೋಟೋ ಮುಂದೆ ಗೌರವದಿಂದ ಆರಾಧ್ಯ ನಮಸ್ಕರಿಸಿದ್ದಾರೆ. ಇನ್ನೊಂದು ಫೋಟೋದಲ್ಲಿ ಬೃಂದ್ಯಾ ರೈ ಜೊತೆ ನಟಿ ಆರಾಧ್ಯ ಪೋಸ್ ಕೊಟ್ಟಿದ್ದಾರೆ. ಆರಾಧ್ಯರ ಬಾಲ್ಯದ ಫೋಟೋ, ಬರ್ತ್ಡೇ ಆಚರಣೆಯ ಫೋಟೋವನ್ನು ಹಂಚಿಕೊಂಡಿದ್ದಾರೆ.
ನನ್ನ ಮಗಳಿಗೆ ಹುಟ್ಟುಹಬ್ಬದ ಶುಭಾಶಯಗಳು. ಇಬ್ಬರೂ ನನ್ನ ಜೀವನದ ಶಾಶ್ವತ ಪ್ರೀತಿ, ಅಪ್ಪ- ಅಜ್ಜ ಮತ್ತು ನನ್ನ ಪ್ರೀತಿಯ ಆರಾಧ್ಯ. ನನ್ನ ಹೃದಯ ನೀನು ಎಂದು ಬರೆದುಕೊಂಡಿದ್ದಾರೆ. ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಐಶ್ವರ್ಯಾ ಹಂಚಿಕೊಂಡಿರುವ ಪೋಸ್ಟ್ನಲ್ಲಿ ಅಭಿಷೇಕ್ ಮತ್ತು ಬಚ್ಚನ್ ಪರಿವಾರದವರು ಇಲ್ಲದೇ ಇರೋದು ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ. ಇಲ್ಲಿ ಏನೋ ಸರಿಯಿಲ್ಲ. ಐಶ್ವರ್ಯಾ ಮತ್ತು ಅಭಿಷೇಕ್ ಜೊತೆಯಾಗಿಲ್ಲ ಎಂದೆಲ್ಲಾ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.