ಸ್ಯಾಂಡಲ್ವುಡ್ನ ಜೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ತಮ್ಮ ಮಗನ ಬಗ್ಗೆ ಬರೆದುಕೊಂಡಿದ್ದಾರೆ. ಮಗ ಹುಟ್ಟಿ ಹೆಚ್ಚು ಕಡಿಮೆ ಒಂದು ವಾರದ ಬಳಿಕ ಅಭಿಷೇಕ್ ಮಗನ ಆಗಮನದ ಕುರಿತು ಖುಷಿ ಹಂಚಿಕೊಂಡಿದ್ದಾರೆ. Its Baby Boy ಅಂತಲೂ ಹೇಳಿದ್ದಾರೆ. ಜೊತೆಗೆ Baby Rebel ಅನ್ನೋದನ್ನ ಕೂಡ ಒತ್ತಿ ಹೇಳಿದ್ದಾರೆ. ಇದಕ್ಕೂ ಹೆಚ್ಚಾಗಿ ಈ ಒಂದು ಪೋಸ್ಟ್ ಅಲ್ಲಿ ಅಂಬರೀಶ್ ಅವರ ಫೋಟೋ ಕೂಡ ಇದೆ. ಇದುವೇ ಇದೀಗ ಹೆಚ್ಚು ಗಮನ ಸೆಳೆಯುತ್ತಿದೆ. ವಿಶೇಷವಾಗಿ ಅಂಬರೀಶ್ ಅವರ ಫೋಟೋಗೆ ಮಗನ ವಿಷಯ ಹಂಚಿಕೊಂಡಿದ್ದಾರೆ.
ಅಭಿಷೇಕ್ ಅಂಬರೀಶ್ ತಮ್ಮ ಮಗನ ಬಗ್ಗೆ ಬರೆದುಕೊಂಡಿದ್ದಾರೆ. ಮಗ ಬಂದಿದ್ದಾನೆ. ಅಮ್ಮ ಮತ್ತು ಮಗ ಇಬ್ಬರೂ ಚೆನ್ನಾಗಿಯೇ ಇದ್ದಾರೆ. ಈತ ನಮ್ಮ ಮನೆಯ Baby Rebel ಅಂತೇ ಅಭಿಷೇಕ್ ಇಲ್ಲಿ ಹೇಳಿಕೊಂಡಿದ್ದಾರೆ. ಮಗ ಬಂದು ಒಂದು ವಾರದ ಬಳಿಕ ಅಭಿಷೇಕ್ ಮಗನ ಬಗೆಗಿನ ಈ ಒಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಅಭಿಷೇಕ್ ಅಂಬರೀಶ್ ಇಷ್ಟೇ ಅಲ್ಲದೇ ಇನ್ನೂ ಒಂದಷ್ಟು ವಿಚಾರಗಳನ್ನ ಕೂಡ ಬರೆದುಕೊಂಡಿದ್ದಾರೆ.
ಎಲ್ಲರಿಗೂ ನಮಸ್ಕಾರ
ನವೆಂಬರ್ 12 ರಂದು ನಮ್ಮ ಕುಟುಂಬಕ್ಕೆ ಅತೀವ ಸಂತಸದ ದಿನ. ರೆಬೆಲ್ ಸ್ಟಾರ್ ಅಂಬರೀಶ್ ಅಣ್ಣನ ಆಶೀರ್ವಾದ, ಗುರು-ಹಿರಿಯರ ಆಶೀರ್ವಾದದಿಂದ ಗಂಡು ಮಗು ಜನಿಸಿದ್ದು, ತಾಯಿ- ಮಗು ಆರೋಗ್ಯವಾಗಿದ್ದರೆಂದು ಈ ಮೂಲಕ ತಮ್ಮೆಲ್ಲರಿಗೂ ತಿಳಿಸಲು ಇಚ್ಛಿಸುತ್ತೇನೆ ಎಂದು ಅಭಿಷೇಕ್ ಬರೆದುಕೊಂಡಿದ್ದಾರೆ.
ಅಭಿಷೇಕ್ ಅಂಬರೀಶ್ ಹಾಕಿರೋ ಪೋಸ್ಟ್ಗೆ ಅಭಿಮಾನಿಗಳು ಕಾಂಪ್ಲಿಮೆಂಟ್ಸ್ ಹಾಕಿದ್ದಾರೆ. ಈ ಕಾಂಪ್ಲಿಮೆಂಟ್ಗಳಲ್ಲಿ ಎಲ್ಲವು ಸೂಪರ್ ಅನಿಸುತ್ತವೆ. ಅದರಲ್ಲಿ ಮಂಡ್ಯದ ಗಂಡು ಮರಿ ಅಂಬಿ ಅನ್ನೋ ಮಾತು ವಿಶೇಷ ಅನಿಸುತ್ತಿದೆ. ಅಂದ್ರೆ, ಅಂಬರೀಶ್ ಮತ್ತೆ ಬಂದಿದ್ದಾರೆ ಅನ್ನೋದನ್ನ ಅಂಬಿ ಫ್ಯಾನ್ಸ್ ಹೀಗೆ ಹೇಳಿಕೊಂಡಿದ್ದಾರೆ.
ಕನ್ನಡ ಚಿತ್ರರಂಗ ಹಿರಿಯ ನಟ ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಜ್ಯೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿದ್ದಪ್ಪ ದಂಪತಿ ತಮ್ಮ ಚೊಚ್ಚಲ ಮಗುವನ್ನು ಸ್ವಾಗತಿಸಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ (ನವೆಂಬರ್ 12) ಅವಿವಾ ಬಿದ್ದಪ್ಪ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸದ್ಯ ಅವಿವಾ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.