ವಾಹನವನ್ನ ಜೋರಾಗಿ ಓಡಿಸೋದು ದೊಡ್ಡ ವಿಷಯವಲ್ಲ, ಆದರೆ ಕಂಟ್ರೋಲ್ ತಪ್ಪಿ, ಅದು ಬೇರೆಯವರ ಜೀವ ತೆಗಿಯುವಷ್ಟು ಅಪಾಯಕಾರಿಯಾಗಿ ಚಲಾಯಿಸುವುದು ಅಪರಾಧವೇ ಸರಿ. ಹೌದು ಕಂಠಪೂರ್ತಿ ಕುಡಿದು ವಾಹನ ಚಲಾಯಿಸಿ ಎರಡು ಜೀವಗಳನ್ನ ಬಲಿ ಪಡೆದ ಘಟನೆ, ಮಧ್ಯಪ್ರದೇಶದ ಗುನಾದಲ್ಲಿ ನಡೆದಿದೆ. ಬಿಜೆಪಿ ಕಾರ್ಯಕರ್ತರಿಬ್ಬರು ಬರುತ್ತಿರುವಾಗ, ಅತೀ ವೇಗವಾಗಿ ಬಂದ ಕಾರೊಂದು ಕಾರ್ಯಕರ್ತರಿಬ್ಬರ ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ರಘುವಂಶಿ ಹಾಗೂ ಕಮಲೇಶ್ ಯಾದವ್ ಸಾವನ್ನಪ್ಪಿದ್ದಾರೆ. ಇತ್ತ ಅಪಘಾತ ನಡೆಸಿದ ಕಾರ್ ಚಾಲಕ ಸೌರಭ್ ಯಾದವ್ ಟ್ರೈನಿ ಪೈಲಟ್ ಅಂತ ತಿಳಿದು ಬಂದಿದೆ. ಸಹ ಪೈಲಟ್ ಜೊತೆಗೆ ಕುಡಿದ ಮತ್ತಿನಲ್ಲಿ ಕಾರನ್ನು ವೇಗವಾಗಿ ಚಲಾಯಿಸಿದ್ದಕ್ಕೆ ಅಮಾಯಕ ಎರಡು ಜೀವಗಳು ಬಲಿಯಾದ ಭಯಾನಕ ಸಿಸಿಟಿವಿ ಪುಟೇಜ್ ವೈರಲ್ ಆಗಿದೆ.