ಮುಂಬೈ : ಲೋಕಸಭಾ ಚುನಾವಣೆ ವೇಳೆ ಮತ್ತೊಂದು ವಿವಾದವನ್ನ ಕಾಂಗ್ರೆಸ್ ಮೈಮೇಲೆ ಎಳೆದುಕೊಂಡಿದೆ. ಕಾಂಗ್ರೆಸ್ ವಿರುದ್ಧ ಕೆಂಡಾಮಂಡಲ ಆಗಿರುವ ಅಮಿರ್ ಖಾನ್, ಹಸ್ತಪಾಳಯದ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮುಂಬೈನ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಿಸಿರುವ ಅಮಿರ್ ಖಾನ್, ಡೀಪ್ ಫೇಕ್ ವೀಡಿಯೋವನ್ನು ಕಾಂಗ್ರೆಸ್ ಪಕ್ಷ ಬಳಸಿಕೊಂಡಿದೆ ಎಂದು ಆರೋಪಿಸಿದ್ದಾರೆ. ನಟ ಅಮಿರ್ ಖಾನ್ ವಕ್ತಾರ ಮುಂಬೈ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಇದೊಂದು ಫೇಕ್ ವೀಡಿಯೋ ಆಗಿದೆ. ಈ ಹಿಂದೆ ದೂರದರ್ಶನದಲ್ಲಿ ಸತ್ಯಮೇವ ಜಯತೇ ಎಂಬ ಕಾರ್ಯಕ್ರಮ ನಡೆಸುತ್ತಿದ್ದರು. ಆ ದೃಶ್ಯವನ್ನು ಬಳಸಿಕೊಂಡು, ಕಾಂಗ್ರೆಸ್ ಬಿಜೆಪಿಯನ್ನ ಗುರಿಯಾಗಿಸಿ ಈ ಡೀಪ್ ಫೇಕ್ ವಿಡಿಯೋವನ್ನು ಹರಿ ಬಿಟ್ಟಿದೆ ಎಂದು ಕಾಂಗ್ರೆಸ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.