ಹಿರಿಯ ನಟ, ನಿರ್ದೇಶಕ & ನಿರ್ಮಾಪಕ ದ್ವಾರಕೀಶ್ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ. ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಚಿತ್ರರಂಗಕ್ಕೆ ದ್ವಾರಕೀಶ್ ನೀಡಿರುವ ಕೊಡುಗೆ ಅಪಾರವಾದದ್ದು, ಇದನ್ನ ಪದಗಳಿಂದ ಬಣ್ಣಿಸಲು ಸಾಧ್ಯವಿಲ್ಲ. ಸದಾ ನೆನಪಿನಲ್ಲಿ ಉಳಿಯುವ ನಟನೆ ಚಿತ್ರಗಳನ್ನ ದ್ವಾರಕೀಶ್ ಕೊಟ್ಟಿದ್ದಾರೆ. ವೀಕ್ಷಕರನ್ನ ಸೆಳೆಯುವ ಮತ್ತು ಹೊಸಬರನ್ನು ಬೆಂಬಲಿಸುವ ಗುಣ ಅವರಲ್ಲಿತ್ತು. ಅವರ ನಿಧನದಿಂದ ನನಗೆ ಬಹಳ ದುಃಖವಾಗಿದೆ. ಅವರ ಕುಟುಂಬಕ್ಕೆ ಮತ್ತು ಆತ್ಮೀಯರಿಗೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ. ಓಂ ಶಾಂತಿ” ಅಂತ ಪೋಸ್ಟ್ ಮಾಡಿದ್ದಾರೆ.