ಸಂಗೀತ ಸಂಯೋಜಕ, ಗಾಯಕ ಎ.ಆರ್.ರೆಹಮಾನ್ ಅವರು ಪತ್ನಿ ಸೈರಾ ಬಾನು ಜೊತೆ ವಿಚ್ಛೇದನ ಘೋಷಣೆ ಮಾಡಿದ್ದಾರೆ. ಇದು ಅನೇಕರಿಗೆ ಶಾಕಿಂಗ್ ಎನಿಸಿದೆ. ಇವರ ವಿಚ್ಛೇದನಕ್ಕೆ ಸ್ಪಷ್ಟ ಕಾರಣ ತಿಳಿದಿಲ್ಲ. ಇದರ ಬೆನ್ನಲ್ಲೇ ಇದೀಗ ಎ.ಆರ್.ರೆಹಮಾನ್ ಅವರ ತಂಡದ ಸದಸ್ಯರಾದ ಬಾಸಿಸ್ಟ್ ವಾದಕಿ ಮೋಹಿನಿ ಡೇ ಅವರು ತಮ್ಮ ಪತಿ, ಸಂಯೋಜಕ ಮಾರ್ಕ್ ಹಾರ್ಟ್ಸುಚ್ನಿಂದ ಬೇರ್ಪಡುವುದಾಗಿ ಘೋಷಿಸಿದ್ದಾರೆ. ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ಸುದ್ದಿಯನ್ನು ಹಂಚಿಕೊಂಡಿದೆ ಜೋಡಿ. ರೆಹಮಾನ್ ಅವರು ತಮ್ಮದೇ ಟ್ರೂಫ್ ಹೊಂದಿದ್ದಾರೆ. ಈ ಟ್ರೂಫ್ನಲ್ಲಿ ಮೋಹಿನಿ ಅವರು ಬಾಸಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು.
ಮೋಹಿನಿ ಮ್ಯೂಸಿಕ್ ಕಂಪೋಸರ್ ಮಾರ್ಕ್ ಎಂಬುವವರ ಜೊತೆ ವಿವಾಹ ಆಗಿದ್ದರು. ಈಗ ಇಬ್ಬರೂ ವಿಚ್ಛೇದನ ಘೋಷಣೆ ಮಾಡಿದ್ದಾರೆ. ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ, ಮೋಹಿನಿ ಹೀಗೆ ಬರೆದಿದ್ದಾರೆ, “ಭಾರವಾದ ಹೃದಯದಿಂದ, ಮಾರ್ಕ್ ಮತ್ತು ನಾನು ನಾವು ಬೇರ್ಪಟ್ಟಿದ್ದೇವೆ ಎಂದು ಘೋಷಿಸುತ್ತೇವೆ. ಮೊದಲನೆಯದಾಗಿ, ನಮ್ಮ ಸ್ನೇಹಿತರು ಮತ್ತು ಕುಟುಂಬಕ್ಕೆ, ಇದು ನಮ್ಮ ನಡುವಿನ ಪರಸ್ಪರ ನಿರ್ಧಾರ. ನಾವು ಉತ್ತಮ ಸ್ನೇಹಿತರಾಗಿದ್ದರೂ, ನಮ್ಮ ಜೀವನದಲ್ಲಿ ಇಬ್ಬರಿಗೂ ಬೇರೆ ಬೇರೆ ಅಂಶಗಳು ಬೇಕಾಗಿವೆ. ಪರಸ್ಪರ ಒಪ್ಪಂದ ಪಡೆದು ಬೇರೆ ಆಗುತ್ತಿದ್ದೇವೆ. ಖಾಸಗಿತನಕ್ಕೆ ಆದ್ಯತೆ ನೀಡಿ ಎಂದುಕೋರಿದ್ದಾರೆ.
ಮೋಹಿನಿ, 29, ಕೋಲ್ಕತ್ತಾದ ಬಾಸಿಸ್ಟ್ ಪ್ಲೇಯರ್ ಆಗಿದ್ದು, ಗಾನ್ ಬಾಂಗ್ಲಾ ಅವರ ವಿಂಡ್ ಆಫ್ ಚೇಂಜ್ನಲ್ಲಿನ ಅಭಿನಯಕ್ಕಾಗಿ ಹೆಸರುವಾಸಿಯಾಗಿದ್ದಾರೆ. ಅವರು ವಿಶ್ವಾದ್ಯಂತ 40 ಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ ರೆಹಮಾನ್ ಅವರೊಂದಿಗೆ ನೀಡಿದ್ದಾರೆ. ಮತ್ತು ಆಗಸ್ಟ್ 2023 ರಲ್ಲಿ ಅವರ ಚೊಚ್ಚಲ ಆಲ್ಬಂ ಅನ್ನು ಬಿಡುಗಡೆ ಮಾಡಿದ್ದಾರೆ. ಅವರು ಕೋಲ್ಕತ್ತಾ ಮೂಲದವರು. ಅವರಿಗೆ ಈಗಿನ್ನೂ 29 ವರ್ಷ. ಸದ್ಯ ವಿಚ್ಛೇದನ ಘೋಷಣೆ ಮಾಡಿರುವ ಪೋಸ್ಟ್ಗೆ ಕಮೆಂಟ್ ಆಯ್ಕೆಯನ್ನು ಅವರು ನೀಡಿಲ್ಲ.
ರೆಹಮಾನ್ ವಿಚ್ಛೇದನ ಘೋಷಣೆಯ ಬೆನ್ನಲ್ಲೇ ಮೋಹಿನಿ ಈ ಘೋಷಣೆ ಮಾಡಿದ್ದಾರೆ. ಒಂದೇ ದಿನ ಇಬ್ಬರೂ ಡಿವೋರ್ಸ್ ಘೋಷಣೆ ಮಾಡಿರುವುದು ಕಾಕತಾಳೀಯವೂ ಆಗಿರಬಹುದು ಎಂದು ಕೆಲವರು ಊಹಿಸಿದ್ದಾರೆ.