ಲೇಡಿ ಸೂಪರ್ ಸ್ಟಾರ್ ನಯನತಾರಾ ಹಾಗೂ ತಮಿಳಿನ ಸ್ಟಾರ್ ನಟ ಧನುಷ್ ನಡುವಿನ ಮನಸ್ತಾಪ ಬಟಾಬಯಲಾಗಿದೆ. ನೆಟ್ಫ್ಲಿಕ್ಸ್ ಸಾಕ್ಷ್ಯಚಿತ್ರ ‘ನಯನತಾರಾ: ಬಿಯಾಂಡ್ ದಿ ಫೇರಿಟೇಲ್’ ವಿವಾದದ ಕುರಿತು ನಟಿ ನಯನತಾರಾ ಪತ್ರ ಬರೆದು ಕಿಡಿಕಾರಿದ್ರು. 3 ಸೆಕೆಂಡ್ ವಿಡಿಯೋಗಾಗಿ ಧನುಷ್ 10 ಕೋಟಿ ಕೇಳಿದ್ರು ಎಂದು ನಟಿ ಆರೋಪಿಸಿದ್ದಾರೆ. ಈ ವಿವಾದ ಭಾರೀ ಸದ್ದು ಮಾಡಿತ್ತು. ಸಾಕ್ಷ್ಯ ಚಿತ್ರದ ವಿವಾದದ ಬಳಿಕ ಒಂದೇ ಕಾರ್ಯಕ್ರಮದಲ್ಲಿ ನಯನತಾರಾ ಹಾಗೂ ನಟ ಧನುಷ್ ಮುಖಾಮುಖಿ ಆಗಿದ್ದಾರೆ.
ಮದುವೆ ಕಾರ್ಯಕ್ರಮದಲ್ಲಿ ಧನುಷ್ ಹಾಗೂ ನಯನತಾರಾ ಭಾಗವಹಿಸಿದ್ದರು. ಧನುಷ್ ಹಾಗೂ ನಯನತಾರಾ ಇಬ್ರು ಒಂದೇ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನುವ ವಿಡಿಯೋ ಇದೀಗ ವೈರಲ್ ಆಗ್ತಿದೆ. ಈ ವಿಡಿಯೋದಲ್ಲಿ ನಟ ಧನುಷ್ ಪಕ್ಕದ ಸೀಟ್ನಲ್ಲಿ ನಯನತಾರಾ ಕುಳಿತ್ತಿದ್ದಾರೆ. ಇಬ್ಬರು ವಿರುದ್ಧ ದಿಕ್ಕಿಗೆ ಮುಖ ಮಾಡಿ ಕುಳಿತ್ತಿದ್ದಾರೆ. ಧನುಷ್ ನೋಡಿಯೂ ನೋಡದಂತೆ ನಯನತಾರಾ ಹೋಗಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ.
ಇನ್ನು ಈ ವಿವಾಹ ಸಮಾರಂಭದಲ್ಲಿ ಧನುಷ್, ನಯನತಾರಾ, ಶಿವಕಾರ್ತಿಕೇಯನ್, ಮ್ಯೂಸಿಕ್ ಡೈರೆಕ್ಟರ್ ಅನಿರುದ್ಧ ರವಿಚಂದ್ರನ್ ಸೇರಿದಂತೆ ಹಲವು ಸಿನಿಮಾ ನಟ, ನಟಿಯರು, ರಾಜಕೀಯ ಗಣ್ಯರು ಭಾಗಿಯಾಗಿದ್ದರು. ಆದರೆ ಧನುಷ್, ನಯನತಾರಾ ವಿಡಿಯೋ, ಫೋಟೋಸ್ ವೈರಲ್ ಆಗಿವೆ.