ಹಿಂಗಾರು ಹಂಗಾಮಿನ ಋತುವಿನಲ್ಲಿ ಪ್ರತಿ ವರ್ಷದಂತೆ ಈ ಬಾರಿಯು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ”ಹವಾಮಾನ ಚತುರ ಡಿಜಿಟಲ್ ಕೃಷಿ” ಎಂಬ ಘೋಷವಾಕ್ಯದಡಿ ಬೃಹತ್ ‘ಕೃಷಿ ಮೇಳ 2024’ ಹಮ್ಮಿಕೊಳ್ಳಲಾಗಿದೆ. ಈ ಮೇಳವು ಇಂದು ನವೆಂಬರ್ 14ರಿಂದ ನವೆಂಬರ್ 17 ರ ತನಕ ನಾಲ್ಕು ದಿನಗಳ ಕಾಲ ನಡೆಯುವ ಕೃಷಿ ಮೇಳದಲ್ಲಿ ನಾಲ್ಕು ನೂತನ ತಳಿಗಳನ್ನು ಬಿಡುಗಡೆ ಮಾಡಲಾಗಿದ್ದು, ಈ ತಳಿಗಳ ಪ್ರಾತ್ಯಕ್ಷಿಕೆಗಳು ವಿಶ್ವವಿದ್ಯಾಲಯದ ಆವರಣದಲ್ಲಿ ಬೆಳೆಯಲಾಗಿದೆ. ಅಲ್ಲದೆ, ತಂತ್ರಜ್ಞಾನ ಆವಿಷ್ಕಾರ, ಹೊಸ ಸಲಕರಣೆಗಳನ್ನು ಅನಾವರಣ ಮಾಡಲಾಗಿದೆ.
ಸೂರ್ಯಕಾಂತಿ ಕೆಬಿಎಸ್ಎಚ್-90
ಬಾಜ್ರ ನೇಪಿಯರ್ ಪಿಬಿಎನ್-242
ಹವಾಮಾನಕ್ಕೆ ಹೊಂದಿಕೊಂಡು ಕೃಷಿಗೆ ಅನುಕೂಲವಾಗುವ ತಾಂತ್ರಿಕತೆ ಪರಿಚಯಿಸಲಾಗಿದೆ. ಇದಕ್ಕಾಗಿ ವಿಶ್ವವಿದ್ಯಾಲಯದಿಂದ ಅಭಿವೃದ್ಧಿಪಡಿಸಿರುವ ಸೆನ್ಸಾರ್ ಆಧಾರಿತ ತಂತ್ರಜ್ಞಾನಗಳನ್ನು ಪ್ರದರ್ಶಿಸಲಾಗಿದೆ. ಮೇಳದಲ್ಲಿ 700ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿದೆ. ಸಿರಿಧಾನ್ಯ ಆಹಾರಕ್ಕೆ ಸಂಬಂಧಿಸಿ ವಿಶೇಷ ಮಳಿಗೆಗಳು ಇವೆ. ಮೇಳಕ್ಕೆ ಆಗಮಿಸುವ ರೈತರಿಗೆ ಹಾಗೂ ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ಮುದ್ದೆ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಇದರ ಜೊತೆಗೆ ಉಪಹಾರ ಮಳಿಗೆಗಳು ಇವೆ.’
ಕೃಷಿ ಮೇಳಕ್ಕೆ ಬರುವವರಿಗೆ ಪ್ರವೇಶ ಉಚಿತ ಇದೆ. ಜಿಕೆವಿಕೆ ಗೇಟ್ನಿಂದ ಮೇಳ ನಡೆಯುವ ಸ್ಥಳಕ್ಕೆ ಕರೆದೊಯ್ಯಲು ವಿಶ್ವವಿದ್ಯಾಲಯದ ಬಸ್ಗಳ ಅವಕಾಶ ಕಲ್ಪಿಸಲಾಗಿದೆ. ಕಾರು, ಬೈಕ್ ಹಾಗೂ ಇತರೆ ವಾಹನಗಳಲ್ಲಿ ಬರುವವರಿಗೆ ಪಾರ್ಕಿಂಗ್ ವ್ಯವಸ್ಥೆಯೂ ಇದೆ.
ತಂತ್ರಜ್ಞಾನಗಳ ಪ್ರದರ್ಶನ
* ಕೃಷಿ ಡ್ರೋನ್
* ರೊಬೊಟ್ ಕೃಷಿ ಯಂತ್ರ
* ಮಲ್ಟಿಸ್ಪೆಕ್ಟ್ರಲ್ ಡ್ರೋನ್
* ಸ್ವಯಂಚಾಲಿತ ಬೂಮ್ ಸ್ಪ್ರೇಯರ್
* ಹಣ್ಣಿನ ವರ್ಗೀಕರಣಗೊಳಿಸುವ ಯಂತ್ರ
* ಸ್ವಯಂಚಾಲಿತ ರಸಗೊಬ್ಬರ ಹರಡುವ ಯಂತ್ರ
* ಆಳ ನಿಯಂತ್ರಕ ರೋಟವೇಟರ್
2024ರ ವರ್ಷದಲ್ಲಿ ಕೃಷಿಯಲ್ಲಿ ಸಾಧನೆಗೈದ ಯುವ ರೈತ ಹಾಗೂ ಯುವ ರೈತ ಮಹಿಳೆಯರಿಗೆ ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಹೊಸ ನೂತನ ತಂತ್ರ ಜ್ಞಾನ, ಕೃಷಿ ಸಮಸ್ಯೆಗಳಿಗೆ ತಜ್ಞರಿಂದ ವೈಜ್ಞಾನಿಕ ಸಲಹೆ, ಪರಿಹಾರ, ಸಮಗ್ರ ಕೃಷಿ, ಕೃಷಿ ಪದ್ಧತಿ, ರೇಷ್ಮೆ ಕೃಷಿ, ತೋಟಗಾರಿಕೆ, ಸಿರಿಧಾನ್ಯ, ಸಾವಯವ ಕೃಷಿ, ಜಲಾನಯನ ನಿರ್ವಹಣೆ, ಮಣ್ಣು ರಹಿತ ಕೃಷಿ ಪದ್ಧತಿಯಂತಹ ಅನೇಕ ಪ್ರಾತ್ಯಕ್ಷಿಕೆಗಳು ನೋಡುಗರ ಗಮನಸೆಳೆದವು. ಕೃಷಿ ಮೇಳದ ಮೊದಲ ದಿನವೇ ಮಳೆಯ ಸಿಂಚನವಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ರೈತರು ಈ ಮೇಳದಲ್ಲಿ ಪಾಲ್ಗೊಂಡಿದ್ದರು. ಬೆಳಿಗ್ಗೆ ಮತ್ತು ಮಧ್ಯಾಹ್ನದ ಹೊತ್ತಲ್ಲಿ ಮಳೆಯ ಆಗಮನವಾಯಿತು.