Aishani Shetty; ಸ್ಯಾಂಡಲ್ವುಡ್ ಶಾಕುಂತಲೆ ಐಶಾನಿ ಶೆಟ್ಟಿ ಗುಡ್ ನ್ಯೂಸ್ ಕೊಟ್ಟಿದ್ದಾರೆ.. ನಟನೆಯಿಂದ ನಿರ್ದೇಶನಕ್ಕೆ ಕಾಲಿಟ್ಟಿದ್ದಾರೆ.. ಸ್ವತಃ ತಾವೇ ಬರೆದ ಕತೆಗೆ ಆ್ಯಕ್ಷನ್ ಕಟ್ ಹೇಳೋಕೆ ರೆಡಿಯಾಗಿದ್ದಾರೆ. ಮೂಲಕ ನಟಿಯಾಗಿದ್ದ ಐಶಾನಿ ಮೊದಲ ಬಾರಿಗೆ ಡೈರೆಕ್ಷನ್ ಕ್ಯಾಪ್ ತೊಡಲು ಸಜ್ಜಾಗಿದ್ದಾರೆ..
ಐಶಾನಿಗೆ ಬಹುದಿನಗಳಿಂದ ನಿರ್ದೇಶಕಿ ಆಗಬೇಕು ಅನ್ನೋ ಕನಸಿತ್ತು. ಈಗ ಆ ಕನಸಿನ್ನ ನನಸು ಮಾಡಿಕೊಳ್ಳಲು ಮೊದಲ ಹೆಜ್ಜೆಯಿಟ್ಟಾದ್ದಾರೆ… ಈ ಕನಸಿಗಾಗಿ 2 ವರ್ಷಗಳ ಕಾಲ ಶ್ರಮಿಸಿದ್ದಾರೆ. ಎರಡು ವರ್ಷಗಳ ಹಿಂದೆ ಹೊಳೆದ ಕಥೆಗೆ ಮತ್ತಷ್ಟು ಅಪ್ ಡೇಟ್ ಮಾಡಿ ಈಗ ನಟನೆಯ ಜೊತೆಗೆ ನಿರ್ದೇಶನಕ್ಕೆ ಕಿಕ್ ಸ್ಟಾರ್ಟ್ ಕೊಟ್ಟಿದ್ದಾರೆ..
ಅಂದಹಾಗೆ ಐಶಾನಿಗೆ ನಿರ್ದೇಶನ ಹೊಸದಲ್ಲ ಹಿಂದೆ ‘ಕಾಜಿ’ ಅನ್ನೋ ಕಿರುಚಿತ್ರ ನಿರ್ದೇಶನ ಮಾಡಿದ್ದರು. ಅದು ಹಲವು ಚಿತ್ಸೋತ್ಸವದಲ್ಲಿ ಆಯ್ಕೆಯಾಗಿ, ಮೆಚ್ಚುಗೆ ಕೂಡ ಪಡೆಯಿತು. ಈಗ ಮೊದಲ ಸಿನಿಮಾ ನಿರ್ದೇಶನ ಮಾಡೋಕೆ ತಯಾರಿ ಮಾಡಿಕೊಂಡಿದ್ದಾರೆ.
“ನನ್ನೂರಿನ ಭಾಗದಲ್ಲಿ ನಡೆಯುವ ಕಥೆಯಿದು. ಕಂಟೆಂಟ್ ಇರುವಂಥ ಕಮರ್ಷಿಯಲ್ ಸಿನಿಮಾ ಇದು. ಇದರಲ್ಲಿ ಹೀರೊ ಅಥವಾ ಹೀರೋಯಿನ್ ಇರುವುದಿಲ್ಲ. ಕಥೆಯೇ ಮುಖ್ಯ ಪಾತ್ರ. ಸದ್ಯಕ್ಕೆ ಈ ಸಿನಿಮಾದ ಫೈನಲ್ ಡ್ರಾಫ್ಟ್ ರೆಡಿಯಾಗಿದ್ದು, ಶೀಘ್ರದಲ್ಲೇ ಪ್ರಿ ಪ್ರೊಡಕ್ಷನ್ ಕೆಲಸ ಶುರುವಾಗಲಿದೆ ಎಂದು ಐಶಾನಿ ತಮ್ಮ ಕನಸಿನ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ
ಈಗಾಗಲೇ ಕನ್ನಡದಲ್ಲಿ ಹಲವು ಕರಾವಳಿ ಭಾಗದ ಕತೆಯ ಸಿನಿಮಾಗಳು ಸೂಪರ್ ಹಿಟ್ ಆಗಿವೆ.. ಈಗ ಐಶಾನಿ ಕೂಡ ಅದೇ ಭಾಗದ ಕಥೆಯನ್ನ ತಮ್ಮ ಸಿನಿಮಾಗೆ ಆಯ್ಕೆ ಮಾಡಿಕೊಂಡಿದ್ದಾರೆ.. ಎಲ್ಲವೂ ಅಂದುಕೊಂಡ ಹಾಗೆ ಆದ್ರೇ ಜೂನ್ ನಲ್ಲಿ ಈ ಸಿನಿಮಾ ಅಧಿಕೃತವಾಗಿ ಅನೌನ್ಸ್ ಆಗಲಿದೆ…