42ನೇ ವಸಂತಕ್ಕೆ ಕಾಲಿಟ್ಟ ಅಲ್ಲು ಅರ್ಜುನ್ಗೆ ಇಂದು ಜನ್ಮದಿನ ಸಂಭ್ರಮಾಚರಣೆ. ಸ್ಟೈಲ್ ಐಕಾನ್ ಆಗಿರೋ ಅವರಿಗೆ ವಿಶ್ವದಾದ್ಯಂತ ದೊಡ್ಡ ಅಭಿಮಾನ ಬಳಗವೇ ಇದೆ. ಇನ್ಸ್ಟಾಗ್ರಾಮ್ನಲ್ಲಿ ಅವರನ್ನು 2 ಕೋಟಿಗೂ ಅಧಿಕ ಮಂದಿ ಫಾಲೋ ಮಾಡುತ್ತಿದ್ದಾರೆ. ಅಲ್ಲು ಅರ್ಜುನ್ ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ. ಚಿತ್ರರಂಗದ ಸೆಲೆಬ್ರಿಟಿಗಳು ಹಾಗೂ ಫ್ಯಾನ್ಸ್ ವಿಶ್ ಮಾಡುತ್ತಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯೋ ಸೆಲೆಬ್ರಿಟಿಗಳಲ್ಲಿ ಅರ್ಜುನ್ ಕೂಡ ಒಬ್ಬರು. ಬೃಹತ್ ಬಂಗಲೆ, ಐಷಾರಾಮಿ ಕಾರು, ಖಾಸಗಿ ಜೆಟ್ ಅವರ ಬಳಿ ಇದೆ. ಅವರ ತಂದೆ ಅಲ್ಲು ಅರವಿಂದ್ ಟಾಲಿವುಡ್ನ ಖ್ಯಾತ ನಿರ್ಮಾಪಕರಾಗಿದ್ದಾರೆ. ಗೀತಾ ಆರ್ಟ್ಸ್ ಎಂಬ ಪ್ರೊಡಕ್ಷನ್ ಹೌಸ್ನ್ನೂ ಹೊಂದಿದ್ದು, ಅನೇಕ ಬಿಗ್ ಬಜೆಟ್ ಸಿನಿಮಾಗಳಿಗೆ ಬಂಡವಾಳ ಹೂಡಿದ್ದಾರೆ.
ಏಪ್ರಿಲ್ 8 ಗಡಿಯಾರದಲ್ಲಿ 12 ಹೊಡೆಯುತ್ತಿದ್ದಂತೆ, ಅಲ್ಲು ಸ್ನೇಹಾ ರೆಡ್ಡಿ ತಮ್ಮ ಪತಿಗೆ ಅವರ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದರು. ಅವರು ಆತ್ಮೀಯ ಹುಟ್ಟುಹಬ್ಬದ ಪಾರ್ಟಿಯ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಪಾರ್ಟಿಗಾಗಿ, ಅಲ್ಲು ಅರ್ಜುನ್ ಬಣ್ಣಬಣ್ಣದ ಟಿ-ಶರ್ಟ್ ಮತ್ತು ಒಂದು ಜೋಡಿ ಬಿಳಿ ಪ್ಯಾಂಟ್ ಅನ್ನು ಧರಿಸಿದ್ದರು.
ಪುಷ್ಪ 2 ಚಿತ್ರದ ಕೆಲಸಗಳಲ್ಲಿ ಅಲ್ಲು ಅರ್ಜುನ್ ಬ್ಯುಸಿ ಇದ್ದಾರೆ. ಅವರು ಈ ಚಿತ್ರಕ್ಕಾಗಿ ಬರೋಬ್ಬರಿ 200 ಕೋಟಿ ಸಂಭಾವನೆ ಪಡೆದಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ.
ಈ ಚಿತ್ರದ ಟೀಸರ್ ಇಂದು (ಏಪ್ರಿಲ್ 8) ಬಿಡುಗಡೆ ಆಗಲಿದೆ. ಇದಕ್ಕಾಗಿ ಫ್ಯಾನ್ಸ್ ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ. ಈಗಾಗಲೇ ಪುಷ್ಪಾ ಪುಷ್ಪರಾಜ್ ಯಾವುದಕ್ಕೂ ತಗ್ಗೋದೆ ಇಲ್ಲ ಎಂಬ ಡೈಲಾಗ್ ಹೊಡೆದು ಸಿನಿಪ್ರಿಯರ ಮನಸ್ಸಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಈ ಚಿತ್ರದ ಸಂಭಾವನೆ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ.