ಲೋಕಸಭಾ ಚುನಾವಣಾ ರೋಡ್ ಶೋ ವೇಳೆ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಅವರ ಮೇಲೆ ದುಷ್ಕರ್ಮಿಗಳು ಕಲ್ಲೆಸೆದಿದ್ದಾರೆ. ಈ ಘಟನೆ ವಿಜಯವಾಡದಲ್ಲಿ ನಡೆದಿದ್ದು, ಜಗನ್ ಎಡಗಣ್ಣಿನ ಮೇಲ್ಭಾಗದಲ್ಲಿ ತೀವ್ರ ಗಾಯವಾಗಿದೆ. ಆಂಧ್ರದಲ್ಲಿ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳು ಒಟ್ಟೊಟ್ಟಿಗೆ ನಡೆಯುತ್ತಿದ್ದು, ವೈಎಸ್ ಆರ್ ಸಿಪಿಯಿಂದ “ಮೇಮಂತಾ ಸಿದ್ಧಂ” ಎಂಬ ಚುನಾವಣಾ ಯಾತ್ರೆಯ ವೇಳೆ ಬಸ್ ಮೇಲೆ ನಿಂತು ಜನರನ್ನು ಉದ್ದೇಶಿ ಭಾಷಣ ಮಾಡುತ್ತಿದ್ದಾಗ ಜಗನ್ರತ್ತ ಎಸೆದ ಹೂಗಳೊಂದಿಗೆ ಕಲ್ಲುಗಳನ್ನೂ ಎಸೆದಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.