ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ನಾಮಿನೇಷನ್ ಕುರಿತು ಓಪನ್ ಆಗಿ ಡೀಲ್ ಮಾಡಿಕೊಂಡ ಪರಿಣಾಮ ಕ್ಯಾಪ್ಟನ್ ತ್ರಿವಿಕ್ರಮ್ಗೆ ‘ಬಿಗ್ ಬಾಸ್’ ಶಿಕ್ಷೆ ಕೊಟ್ಟಿದ್ದಾರೆ. ಕ್ಯಾಪ್ಟನ್ ಬಳಿ ಇದ್ದ ನೇರವಾಗಿ ನಾಮಿನೇಟ್ ಮಾಡುವ ಅಧಿಕಾರವನ್ನ ‘ಬಿಗ್ ಬಾಸ್’ ಕಿತ್ತುಕೊಂಡಿದ್ದಾರೆ. ಅದೇ ಅಧಿಕಾರದ ಭಾರವನ್ನ ಮಿಕ್ಕೆಲ್ಲಾ ಸ್ಪರ್ಧಿಗಳಿಗೆ ‘ಬಿಗ್ ಬಾಸ್’ ಕೊಟ್ಟಿದ್ದಾರೆ. ಇದರ ಅನುಸಾರ.. ಎಲ್ಲರೂ ಚರ್ಚಿಸಿ, ಸಹಮತದಿಂದ ಒಂದು ಜೋಡಿಯನ್ನ ನೇರವಾಗಿ ನಾಮಿನೇಟ್ ಮಾಡಬೇಕಿದೆ. ನಾಮಿನೇಷನ್ ಪ್ರಕ್ರಿಯೆಯಲ್ಲಿ ಬಹುತೇಕರು ಅನುಷಾ ರೈ – ಗೋಲ್ಡ್ ಸುರೇಶ್ ಅವರನ್ನೇ ಟಾರ್ಗೆಟ್ ಮಾಡಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಗೋಲ್ಡ್ ಸುರೇಶ್ ಅವರು ಸುಲಭ ಟಾರ್ಗೆಟ್ ಎನಿಸಿಕೊಂಡಿದ್ದಾರೆ. ಅವರನ್ನು ಪದೇ ಪದೇ ಟೀಕೆ ಮಾಡಾಗುತ್ತಿದೆ. ಈ ಕಾರಣಕ್ಕೆ ಪ್ರತಿ ವಾರ ಅವರನ್ನು ನಾಮಿನೇಟ್ ಮಾಡಲಾಗುತ್ತಿದೆ. ಏಳನೇ ವಾರದಲ್ಲಿ ಗೋಲ್ಡ್ ಸುರೇಶ್ ಅವರನ್ನೇ ಎಲ್ಲರೂ ನೇರ ನಾಮಿನೇಟ್ ಮಾಡಲು ಪ್ರಯತ್ನಿಸಿದ್ದಾರೆ. ಅವರು ಸುಲಭ ಟಾರ್ಗೆಟ್ ಎನಿಸಿಕೊಂಡಿದ್ದಾರೆ. ಈ ಬಗ್ಗೆ ಅವರು ಅಸಮಾಧಾನ ಹೊರ ಹಾಕಿದ್ದಾರೆ.
ಎಲ್ಲರೂ ನನ್ನನ್ನೇ ಯಾಕೆ ಟಾರ್ಗೆಟ್ ಮಾಡುತ್ತಿದ್ದೀರಿ. ಕಳೆದ ವಾರ ನಾನು ಮಾಡಿದ್ದ ತಪ್ಪಿಗೆ ಕಳಪೆ ಅಂತಾ ಕೊಟ್ಟಿದ್ದೀರಿ ಅದನ್ನ ನಾನು ಜೈಲಿನಲ್ಲಿ ಅನುಭವಿಸಿ ಬಂದಿದ್ದೇನೆ. ಪದೇ ಪದೇ ಅದೇ ತಪ್ಪನ್ನೇ ಯಾಕೆ ಹೇಳುತ್ತಿದ್ದೀರಿ, ನಿಮ್ಮ ಹತ್ತಿರಾ ಕಾರಣಾ ನೀಡೊದಕ್ಕೆ ಬೇರೆ ರೀಸನ್ಸ್ಇಲ್ಲವಾ ಎಂದು ಗೋಲ್ಡ್ ಸುರೇಶ್ ಖಾರವಾಗಿ ಪ್ರಶ್ನಿಸಿದ್ದಾರೆ.
ಇದನ್ನು ಓದಿ : ಗಮನ ಸೆಳೆದ ಚನ್ನಪಟ್ಟಣದ ಸಾಂಪ್ರದಾಯಿಕ ಗೊಂಬೆ ಮತಗಟ್ಟೆ!
ಇನ್ನು ಅನುಷಾ ಮನೆ ಮಂದಿಗೆ ಪ್ರಶ್ನೆ ಮಾಡಿದ್ದಾರೆ. ಯಾಕೆ ನನ್ನನ್ನೇ ಯಾವಾಗಲೂ ನೊಮಿನೇಟ್ ಮಾಡುತ್ತೀರಾ? ನಾನು ಗೋಲ್ಡ್ ಸುರೇಶ್ ಜೋಡಿ ಆಗಿದ್ದೀನಿ ಅನ್ನೊ ಮಾತ್ರಕ್ಕೆ ನನ್ನ ನೇರವಾಗಿ ನೊಮಿನೇಟ್ ಮಾಡ್ತಿದ್ದೀರಾ? ಈಗ ಮನೆಯವರು ಯಾರು ನನ್ನ ನೊಮಿನೇಟ್ ಮಾಡ್ಡೀದ್ದೀರಾ ಅವರಿಗೆ ನನ್ನ ಪ್ರಶ್ನೆ, ‘’ಮೋಕ್ಷಿತಾ.. ನೀವೆಷ್ಟು ಎಂಟರ್ಟೇನಿಂಗ್ ಆಗಿದ್ಧೀರಾ?’’, ‘’ಗೌತಮಿ.. ಎದುರಿಗೇ ಹೇಳ್ತಿದ್ದೀರಿ ಯು ಆರ್ ಫೇಕ್!’’, ‘’ಧರ್ಮ.. ನಿಮಗೆಷ್ಟು ಅಗ್ರೆಷನ್ ಇದೆ.? ನೀವೇನೂ ಆಟ ಆಡಲೇ ಇಲ್ಲ. ಮನೆಯಲ್ಲಿ ನೀವೆಷ್ಟು ಇನ್ವಾಲ್ವ್ ಆಗಿದ್ದೀರಾ?’’ ಅಂತ ಅನುಷಾ ರೈ ಎಲ್ಲರಿಗೂ ತಿರುಗೇಟು ಕೊಟ್ಟರು. ಆಗ ಧರ್ಮ ಕೀರ್ತಿರಾಜ್ ಸಹ ರೊಚ್ಚಿಗೆದ್ದರು. ‘’ನಾನೂ ಒಪ್ಪಿಕೊಳ್ತಿದ್ದೀನಿ. ಎಲ್ಲರೂ ಕ್ಯಾಕರಿಸಿ ಉಗಿದ್ರಲ್ಲ. ನಾಲಾಯಕ್, ಬೇ*ರ್ಸಿ ಅಂತಲೇ ಉಗಿದ್ರಲ್ಲ’’ ಅಂತ ನೊಂದುಕೊಂಡೇ ಧರ್ಮ ಕೀರ್ತಿರಾಜ್ ಹೇಳಿದರು.
ಜಗಳ ನಡೆದ ಬಳಿಕ ಅನುಷಾ ರೈ ಅವರು ಸಿಕ್ಕಾಪಟ್ಟೆ ಕೋಪ ಮಾಡಿಕೊಂಡರು. ಅವರನ್ನು ಸಮಧಾನ ಮಾಡಲು ಧರ್ಮ ಪ್ರಯತ್ನಿಸಿದರು. ತಮ್ಮ ಮಾತಿನಲ್ಲಿ ಯಾವುದೇ ಬೇರೆ ಉದ್ದೇಶ ಇರಲಿಲ್ಲ ಎಂದು ಧರ್ಮ ಅವರು ಮನವರಿಕೆ ಮಾಡಲು ಪ್ರಯತ್ನಿಸಿದರೂ ಕೂಡ ಅನುಷಾ ಒಪ್ಪಿಕೊಳ್ಳಲಿಲ್ಲ.ಇದರಿಂದಾಗಿ ಅನುಷಾ ಧರ್ಮ ಮಧ್ಯೆ ಸ್ಪಲ್ಪ ಕಿತ್ತಾಟವೂ ಆಗಿದೆ. ಇಬ್ಬರ ನಡುವೆ ವೈಮನಸ್ಸು ಉಂಟಾಗಿದೆ. ಇನ್ನು ಈ ವಾರ ಬಹುತೇಕ ಸ್ಪರ್ಧಿಗಳು ನೊಮಿನೇಟ್ ಆಗಿದ್ದಾರೆ.