ಸ್ವೀಟಿ ಅನುಷ್ಕಾ ಶೆಟ್ಟಿ, ತೆಲುಗು ಖ್ಯಾತಿಯ ವಿಷ್ಣು ಮಂಚು ಅಭಿನಯದ ಕಣ್ಣಪ್ಪ ಚಿತ್ರದಲ್ಲಿ ನಟಿಸಲಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೆಸರು ಮಾಡಿರೋ ಅನುಷ್ಕಾ ಶೆಟ್ಟಿ, ಬಾಹುಬಲಿ ನಂತರ Mr. ಅಂಡ್ Mrs. ಪೋಲಿಶೆಟ್ಟಿ ನಲ್ಲಿ ಕಾಣಿಸಿಕೊಂಡಿದ್ರು. ಈಗ ಕಣ್ಣಪ್ಪ (Kannappa) ಚಿತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ. ಈ ಚಿತ್ರದ ಕುರಿತು ಯಾವಗಲು ಹೊಸ ಸುದ್ದಿ ಕೇಳಿಬರುತಲ್ಲೇ ಇರುತ್ತೆ.
ಅನುಷ್ಕಾ ಈ ಚಿತ್ರದಲ್ಲಿ ಪಾರ್ವತಿ ಪಾತ್ರ ಮಾಡಲಿದ್ದಾರೆ. ಇನ್ನು ಸ್ಯಾಂಡಲ್ ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್.. ಶಿವನ ಪಾತ್ರ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಫಿಲ್ಮ್ನಲ್ಲಿ ಬಾಲಿವುಡ್ ನ ಅಕ್ಷಯ್ ಕುಮಾರ್ ಮೊದಲ ಬಾರಿ ಟಾಲಿವುಡ್ನಲ್ಲಿ ನಟಿಸಲಿದ್ದಾರೆ. ಪ್ರಭಾಸ್, ಮೋಹನ್ ಲಾಲ್, ಶರತ್ ಕುಮಾರ್ ಈಗಾಗಲೇ ಚಿತ್ರತಂಡವನ್ನು ಸೇರಿದ್ದಾರೆ.