- ತೀವ್ರ ಆರೋಗ್ಯ ಸಮಸ್ಯೆಗೆ ಒಳಗಾದ ಅಡ್ವಾಣಿ
- ತಡರಾತ್ರಿ ದೆಹಲಿ ಆಸ್ಪತ್ರೆಗೆ ಅಡ್ವಾಣಿ ದಾಖಲು
ಬಿಜೆಪಿ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರು ವೃದ್ಧಾಪ್ಯ ಸಂಬಂಧಿ ಸಮಸ್ಯೆಗಳಿಗೆ ಸಣ್ಣ ವಿಧಾನದ ಚಿಕಿತ್ಸೆಯ ನಂತರ ಏಮ್ಸ್ನಿಂದ ಡಿಸ್ಚಾರ್ಜ್ ಆಗಿದ್ದಾರೆ. ಜೂನ್ 26 ರಂದು ರಾತ್ರಿ ನವದೆಹಲಿಯ ಏಮ್ಸ್ಗೆ ದಾಖಲಾಗಿದ್ದ ಹಿರಿಯ ಬಿಜೆಪಿ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರನ್ನು ಜೂನ್ 27 ರಂದು ಡಿಸ್ಚಾರ್ಜ್ ಮಾಡಲಾಗಿದೆ ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
96 ವರ್ಷದ ಮಾಜಿ ಉಪಪ್ರಧಾನಿ ಅವರನ್ನು ಮೂತ್ರಶಾಸ್ತ್ರ ಮತ್ತು ಜೆರಿಯಾಟ್ರಿಕ್ ಮೆಡಿಸಿನ್ ಸೇರಿದಂತೆ ವಿವಿಧ ವಿಶೇಷತೆಗಳ ವೈದ್ಯರ ತಂಡವು ತಪಾಸನೆ ಮಾಡಿದೆ ಮತ್ತು ಚಿಕೆತ್ಸೆಯಿಂದ ಚೇತರಿಕೆ ಆಗಿದೆ ಎಂದು ತಿಳಿದುಬಂದಿದೆ. ವೃದ್ಧಾಪ್ಯ ಸಂಬಂಧಿ ಸಮಸ್ಯೆಗಳಿಗಾಗಿ ಅಡ್ವಾಣಿ ಅವರನ್ನು ದಾಖಲಿಸಲಾಗಿತ್ತು ಮತ್ತು ಡಿಸ್ಚಾರ್ಜ್ ಮಾಡಲಾಗಿದೆ” ಎಂದು ಏಮ್ಸ್ ಅಧಿಕಾರಿ ತಿಳಿಸಿದ್ದಾರೆ. ಅಡ್ವಾಣಿ ಅವರನ್ನು ಜೂನ್ 26 ರಂದು ರಾತ್ರಿ 10.30 ರ ಸುಮಾರಿಗೆ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ನ ಹಳೆಯ ಖಾಸಗಿ ವಾರ್ಡ್ಗೆ ದಾಖಲಿಸಲಾಯಿತು.