ಮೇಷ: ಹೂಡಿಕೆಯಲ್ಲಿ ಹಿನ್ನಡೆ ಸಾಧ್ಯತೆ. ಕೋಪವನ್ನು ಯಾರೆದುರೂ ಪ್ರಕಟಿಸುವುದು ಬೇಡ. ನಿಮ್ಮ ಉದ್ಯೋಗದ ತೊಂದರೆಗಳನ್ನು ಸರಿಮಾಡಿಕೊಂಡು ಮುನ್ನಡೆಯುವಿರಿ. ಮಕ್ಕಳಿಂದ ಆಗುವ ಅಸಮಾಧಾನವನ್ನು ಸಹಿಸಲಾರಿರಿ. ಇಂದಿನ ಧೈರ್ಯವು ಹೆಚ್ಚಿನ ಪ್ರಗತಿಗೆ ಪೂರಕ.
ವೃಷಭ: ಪ್ರಯಾಣ ಮಾಡದೇ ಬಹಳ ದಿನಗಳಾದಂತೆ ಅನ್ನಿಸುವುದು. ಪುಣ್ಯಸ್ಥಳಗಳ ದರ್ಶನವನ್ನು ಮಾಡಲು ಆಸಕ್ತಿ. ಪ್ರಭಾವಿ ವ್ಯಕ್ತಿಗಳ ಆಕಸ್ಮಿಕ ಭೇಟಿಯಿಂದ ಸಂತೋಷವಾಗಲಿದೆ. ಬೇರೆ ಸ್ಥಳದಲ್ಲಿ ನಿಮ್ಮ ವಾಸವು ಇರಬಹುದು.
ಮಿಥುನ: ಎಷ್ಟೋ ಕೆಲಸಗಳು ನಿಮ್ಮ ಬಳಿಯೇ ಬಾಕಿ ಇರುವುದು. ನೀವು ಹೇಳಬೇಕಾದ ವಿಷಯಗಳನ್ನು ಇನ್ನೊಬ್ಬರಿಗೆ ಹೇಳುವಿರಿ. ಯಾವುದೋ ಯೋಚನೆಯಲ್ಲಿ ಮುಖ್ಯ ಕಾರ್ಯಗಳು ಮರೆತುಹೋಗಬಹುದು. ಭೂಮಿಯ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವು ಕಾನೂನಾತ್ಮಕ ತೊಂದರೆ ಬರುವುದು. ಉದ್ಯಮವನ್ನು ಮಾಡುವ ಮೊದಲು ಸರಿಯಾದ ಯೋಜನೆಯನ್ನು ತಯಾರಿಸಿ.
ಕರ್ಕಾಟಕ: ಸ್ವತಂತ್ರವಾಗಿದ್ದರೂ ಏನನ್ನಾದರೂ ಕಳೆದುಕೊಳ್ಳುತ್ತೇನೆ ಎಂಬ ಭಯವು ಇರಲಿದೆ. ಯತ್ನಿಸಿದ ಕಾರ್ಯಗಳು ನಿಮಗೆ ಬಹುಪಾಲು ಉತ್ತಮ ಫಲಿತಾಂಶವು ಇರಲಿದೆ. ಸಂತೋಷವನ್ನು ಆಪ್ತರ ಜೊತೆ ಹಂಚಿಕೊಳ್ಳುವಿರಿ.. ದಾಂಪತ್ಯದ ಬಿರುಕನ್ನು ನೀವು ಸರಿ ಮಾಡಲು ಪ್ರಯತ್ನಿಸಿದರೆ ಆಗುವುದು. ಹೊಸತನ್ನು ಕಲಿಯುವ ಅವಕಾಶವನ್ನು ಹುಡುಕಿಕೊಳ್ಳುವಿರಿ. ನಿಮ್ಮ ಕುಲದಿಂದ ಗೌರವ ಸಿಗಬಹುದು.
ಸಿಂಹ: ನಿಮ್ಮ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ನೌಕರರು ಒಪ್ಪುವುದಿಲ್ಲ. ದೂರಾಲೋಚನೆ ಹಾದಿಯನ್ನು ತಪ್ಪುವುದು. ಬಂಧುಗಳು ನಿಮ್ಮನ್ನು ಅಳೆಯುವರು. ವ್ಯಾಪಾರದಲ್ಲಿ ಸ್ತ್ರೀಯರ ಸಹಾಯದಿಂದ ಲಾಭವನ್ನು ಪಡೆಯುವಿರಿ.
ಕನ್ಯಾ: ಅಧಿಕಾರಿಗಳಿಗೆ ಹೆಚ್ಚು ಒತ್ತಡ. ಅಧಿಕ ಹೂಡಿಕೆಯು ಸ್ಥಾನದ ಪ್ರಶ್ನೆಯಾಗಿ ಉಳಿಯುವುದು.ಇಂದು ಮುಜುಗರವಾದೀತು. ಸಹೋದ್ಯೋಗಿಗಳ ಜೊತೆ ಸಲುಗೆ. ಅನಿರೀಕ್ಷಿತ ದೂರ ಪ್ರಯಾಣ. ಯೋಚನೆಗಳು 100 ಇದ್ದರೂ ಪಾಲುದಾರಿಕೆಯಲ್ಲಿ ನಿರ್ಧಾರ ಒಂದೇ ಇರಲಿ. ಇಂದು ಹಣದ ವಿಚಾರದಲ್ಲಿ ನಿಮಗೆ ಹಿನ್ನಡೆಯಾಗುವುದು.