ತವರಿನಲ್ಲಿ ಬಾರ್ಡರ್ ಗವಾಸ್ಕರ್ ಟ್ರೋಫಿ ಆಡಲು ಆಸ್ಟ್ರೇಲಿಯಾ ಸಕಲ ಸಿದ್ಧತೆ ಮಾಡಿಕೊಂಡಿದೆ. ಭಾರತ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿ ಆಡಲಿರುವ ಆಸೀಸ್ ಮೊದಲ ಪಂದ್ಯಕ್ಕಾಗಿ ತಂಡ ಪ್ರಕಟಿಸಿದೆ. ನವೆಂಬರ್ 22ರಂದು ಪರ್ತ್ ಮೈದಾನದಲ್ಲಿ ನಡೆಯಲಿರುವ ಮೊದಲ ಪಂದ್ಯಕ್ಕೆ ಮಾತ್ರ 13 ಸದಸ್ಯರ ತಂಡ ಪ್ರಕಟಿಸಲಾಗಿದೆ. ಅಚ್ಚರಿ ಎಂಬಂತೆ 25 ವರ್ಷ ಆಟಗಾರನನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ.
ತಂಡವನ್ನು ಪ್ಯಾಟ್ ಕಮಿನ್ಸ್ ಮುನ್ನಡೆಸಲಿದ್ದಾರೆ. ಉಳಿದಂತೆ ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಜೋಶ್ ಹ್ಯಾಜಲ್ವುಡ್, ಜೋಶ್ ಇಂಗ್ಲಿಸ್, ಟ್ರಾವಿಸ್ ಹೆಡ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಉಸ್ಮಾನ್ ಖವಾಜಾ, ಮಿಚೆಲ್ ಮಾರ್ಷ್, ನಾಥನ್ ಲಿಯಾನ್, ಸ್ಟೀವ್ ಸ್ಮಿತ್, ನಾಥನ್ ಮೆಕ್ಸ್ವೀನಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಇದನ್ನು ಓದಿ: ಕಾಂಗ್ರೆಸ್ ನವರು ಬಾಡಿಗೆ ಲೀಡರ್ಗಳನ್ನು ಕರೆತರುತ್ತಿದ್ದಾರೆ: ರಾಜುಗೌಡ
25 ವರ್ಷ ಆಟಗಾರನಿಗೆ ಅವಕಾಶ: ಭಾರತ-ಎ ವಿರುದ್ಧದ ಅನ್ ಅಫೀಶಿಯಲ್ ಟೆಸ್ಟ್ನಲ್ಲಿ ಆಸ್ಟ್ರೇಲಿಯಾ-ಎ ತಂಡದ ನಾಯಕರಾಗಿದ್ದ ನಾಥನ್ ಮೆಕ್ಸ್ವೀನಿ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಕ್ಯಾಮರೂನ್ ಗ್ರೀನ್ ಗಾಯದ ಸಮಸ್ಯೆಯಿಂದ ಹೊರ ಉಳಿದ ಕಾರಣ ಯುವ ಆಟಗಾರನಿಗೆ ಆಸೀಸ್ ಮಣೆ ಹಾಕಿದೆ. ಇನ್ನು 5 ಪಂದ್ಯಗಳ ಟೆಸ್ಟ್ ಸರಣಿಗಾಗಿ ಭಾರತ ತಂಡಡ ಇಂದು ಆಸ್ಟ್ರೇಲಿಯಾಗಿ ಪ್ರಯಾಣ ಬೆಳೆಸಲಿದೆ. ನಾಯಕ ರೋಹಿತ್ ಶರ್ಮಾ ಮೊದಲ ಟೆಸ್ಟ್ನಲ್ಲಿ ಆಡುವ ಬಗ್ಗೆ ಇನ್ನೂ ಅನುಮಾನಗಳಿವೆ.