ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ರಾರಾವಿ ಗ್ರಾಮದಲ್ಲಿ ನಡೆದ ಘೋರ ಹತ್ಯೆ ಪ್ರಕರಣವು ಜಿಲ್ಲೆಯನ್ನು ಅಚ್ಚರಿಗೀಡು ಮಾಡಿದೆ. 22 ವರ್ಷದ ಮಂಜುನಾಥ ಗೌಡನ ಅರ್ಧದೇಹವನ್ನು ಹಗರಿ ನದಿಯಲ್ಲಿ ಹೂತಿಡಲಾಗಿತ್ತು. ಕಳೆದ ಡಿಸೆಂಬರ್ 28 ರ ರಾತ್ರಿ, ಪ್ರೇಮ ಸಂಬಂಧವನ್ನು ಮುಂದುವರೆಸಿದ್ದಕ್ಕಾಗಿ ಆರೋಪಿಗಳು ಅವನನ್ನು ಕ್ರೂರವಾಗಿ ಕೊಂದು ನದಿಗೆ ಎಸೆದಿದ್ದರು. ಮೃತನ ಸಹೋದರ ಹನುಮಂತಗೌಡನ ದೂರಿನಂತೆ ಪೊಲೀಸರು ತನಿಖೆ ನಡೆಸಿ, ಡಿ.ಮಲ್ಲಯ್ಯ ಸೇರಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ತನಿಖೆಯ ಪ್ರಕಾರ, ಆರೋಪಿಗಳು ತಮ್ಮ ಮಗಳೊಂದಿಗೆ ಮಂಜುನಾಥನ ಸಂಬಂಧವನ್ನು ವಿರೋಧಿಸಿದ್ದರು. ಹಲವು ಬಾರಿ ಎಚ್ಚರಿಕೆ ನೀಡಿದರೂ ಅವನು ಪ್ರೇಮವನ್ನು ಮುಂದುವರೆಸಿದ್ದು ದ್ವೇಷಕ್ಕೆ ಕಾರಣವಾಯಿತು. ರಾರಾವಿ ಗ್ರಾಮದ ಹೊರವಲಯದ ಹುಣಸೆ ಮರದ ತೋಟದಲ್ಲಿ ಅವನನ್ನು ಕರೆದು, ಟವೆಲ್ ಬಿಗಿದು, ಸಲಿಕೆಯಿಂದ ಹೊಡೆದು ಹತ್ಯೆ ಮಾಡಲಾಗಿತ್ತು. ನಂತರ ದೇಹವನ್ನು ನದಿಯಲ್ಲಿ ಮರೆಮಾಡಲಾಗಿತ್ತು.
ಎಸ್ಪಿ ಡಾ. ಶೋಭಾರಾಣಿ ವಿ.ಜೆ.ರವರ ಮಾರ್ಗದರ್ಶನದಲ್ಲಿ ಪೊಲೀಸ್ ತಂಡವು ವೈ.ಎಸ್ ಪಿ.ಎಸ್.ಐ ಪರಶುರಾಮ್, ಶಶಿಧರ್ ಹಾಗೂ ಇತರ ಸಿಬ್ಬಂದಿಗಳ ಸಹಯೋಗದಿಂದ ಪ್ರಕರಣವನ್ನು ಪತ್ತೆಹಚ್ಚಿದ್ದಾರೆ. ತನಿಖೆಯಲ್ಲಿ ಸಜಾಗವಾಗಿ ಕಾರ್ಯನಿರ್ವಹಿಸಿದ ಪೊಲೀಸ್ ತಂಡಕ್ಕೆ ಎಸ್ಪಿ ಶೋಭಾರಾಣಿ ಅವರು ಪ್ರಶಂಸೆ ಸೂಚಿಸಿದ್ದಾರೆ. ಈಗ ಆರೋಪಿಗಳ ವಿರುದ್ಧ ಕಾನೂನು ಕ್ರಮವನ್ನು ತೀವ್ರಗೊಳಿಸಲಾಗುತ್ತಿದೆ.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: https://chat.whatsapp.com/HWayJDSBf9aI06q6jplPgc