ಬಳ್ಳಾರಿ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತಿಯ ವಿರುದ್ಧ ದೂರು ಕೊಡಲು ಬಂದ ನೊಂದ ಮಹಿಳೆಗೆ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಇಬ್ಬರು ಪೊಲೀಸ ಪೇದೆಗಳ ವಿರುದ್ಧ ಬಳ್ಳಾರಿಯ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 35 ವರ್ಷದ ಗೃಹಿಣಿಯೊಬ್ಬರು ತನ್ನ ಪತಿ ವಿರುದ್ಧ 2023ರ ಎಪ್ರೀಲ್ 19 ರಂದು ದೂರು ನೀಡಲು ಬಳ್ಳಾರಿಯ ಕೌಲಬಜಾರ್ ಪೊಲೀಸ್ ಠಾಣೆಗೆ ತೆರಳಿದ್ದರು.
ಈ ವೇಳೆ ಠಾಣೆಯಲ್ಲಿದ್ದ ಹೆಡ್ ಕಾನ್ಸ್ಟೆಬೆಲ್ ಸೈಯದ್ ಇಮ್ರಾನ್ ನಿಮ್ಮ ದೂರು ಮಹಿಳಾ ಠಾಣೆಯ ವ್ಯಾಪ್ತಿಗೆ ಬರಲಿದ್ದು, ನಾನು ಸಹಾಯ ಮಾಡುವುದಾಗಿ ನೊಂದ ಮಹಿಳೆಯ ಮೊಬೈಲ್ ನಂಬರ್ ಪಡೆದಿದ್ದ. ನಂತರ ಎಪ್ರೀಲ್ 20ರಂದು ಗೃಹಿಣಿಯ ಮನೆ ಖಾಲಿ ಮಾಡುವಂತೆ ಗಲಾಟೆ ಮಾಡಿದ್ದ, ಈ ವೇಳೆ ನೊಂದ ಗೃಹಿಣಿ ಹೆಡ್ ಕಾನ್ಸಟೇಬಲ್ ಸೈಯದ್ ಇಮ್ರಾನ್ ಗೆ ಕರೆ ಮಾಡಿ ವಿಷಯ ತಿಳಿಸಿದ್ದರು, ಈ ವೇಳೆ ಸೈಯದ್ ಇಮ್ರಾನ್ ನೊಂದ ಮಹಿಳೆಗೆ 15 ಸಾವಿರ ಹಣ ಕೊಟ್ಟು ಸಹಾಯ ಮಾಡಿದ್ದ, ಈ ಹಣದಲ್ಲಿ ನೊಂದ ಮಹಿಳೆ ಬಾಡಿಗೆ ಮನೆ ಪಡೆದು ವಾಸವಾಗಿದ್ದರು, ನಂತರ ನೊಂದ ಗೃಹಿಣಿಯ ಜೊತೆ ಸಲುಗೆ ಬೆಳೆಸಿದ ಪೊಲೀಸ್ ಪೇದೆ ಮದುವೆಯಾಗುವುದಾಗಿ ನಂಬಿಸಿ 5 ತಿಂಗಳ ಕಾಲ ಲೈಂಗಿಕ ದೌರ್ಜನ್ಯ ಎಸಗಿದ್ದ. ನಂತರ ಬಳ್ಳಾರಿ ಸೈಯದ್ ಇಮ್ರಾನ್ ಅಕ್ಕನ ಮಗ ಸಂಚಾರಿ ಠಾಣೆಯ ಪೇದೆ ಆಜಾದ್ ಸಹ ಗೃಹಿಣಿಗೆ ತಾನೂ ಮದುವೆಯಾಗುವುದಾಗಿ ನಂಬಿಸಿ ಗೃಹಿಣಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ನೊಂದ ಗೃಹಿಣಿಗೆ ಮದುವೆಯಾಗುವುದಾಗಿ ನಂಬಿಸಿದ್ದ ಇಬ್ಬರು ಪೇದೆಗಳ ಮಧ್ಯೆ ಜಗಳವಾದ ಬಳಿಕ ಪೇದೆ ಸೈಯದ್ ಇಮ್ರಾನ್ ತನ್ನ ಜೊತೆ ಇರು ಇಲ್ಲವಾದ್ರೆ ಆಸ್ಯಿಡ್ ಹಾಕುವುದಾಗಿ ಬೆದರಿಸಿ ಸುಮಾರು 6 ತಿಂಗಳ ಕಾಲ ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ನಂತರ ಇಬ್ಬರು ಪೇದೆಗಳು ಮದುವೆಯಾಗದೇ ವಂಚಿಸಿದಕ್ಕೆ ನೊಂದ ಗೃಹಿಣಿ ಇದೀಗ ತನನ್ನು ನಂಬಿಸಿ ಲೈಂಗಿಮ ದೌರ್ಜನ್ಯ ಎಸಗಿದ ಇಬ್ಬರು ಪೇದೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರಕರಣ ದಾಖಲಿಸಿದ್ದಾರೆ.
ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಂಡ ಮಹಿಳಾ ಠಾಣೆಯ ಪೊಲೀಸರು ಸಂಚಾರ ಠಾಣೆಯ ಪೇದೆ ಆಜಾದ್ ನನ್ನ ಬಂದಿಸಿದ್ದು. ಇನ್ನೊರ್ವ ಆರೋಪಿಯಾಗಿರುವ ಕೌಲಬಜಾರ್ ಠಾಣೆಯ ಹೆಡ್ ಕಾನ್ಸಟೇಬಲ್ ಸೈಯದ್ ಇಮ್ರಾನ್ ಗೆ ಬಲೆ ಬೀಸಿದ್ದಾರೆ.
ಘಟನೆ ಬೆಳಕಿಗೆ ಬರುತ್ತಿದ್ದಂತೆ ಬಳ್ಳಾರಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿಗಳು ಇಬ್ಬರು ಪೇದೆಗಳನ್ನ ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.