‘ಗೋಲ್ಡ್’ ಸುರೇಶ್ ಅವರು ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಲಿದ್ದಾರೆ ಎಂಬ ಮಾಹಿತಿಯು ಕಲರ್ಸ್ ಕನ್ನಡ ವಾಹಿನಿಯು ಭಾನುವಾರ ರಿಲೀಸ್ ಮಾಡಿದ್ದ ಪ್ರೋಮೋ ಮೂಲಕ ಗೊತ್ತಾಗಿತ್ತು. ಇದೀಗ ನಿನ್ನೆ ‘ಬಿಗ್ ಬಾಸ್’ ಸಂಚಿಕೆಯಲ್ಲಿ ಸುರೇಶ್ ಅವರನ್ನು ಮನೆಯಿಂದ ಹೊರಗೆ ಕಳುಹಿಸಲಾಗಿದೆ.
ಬಿಗ್ ಬಾಸ್ ಸೀಸನ್ 11 ಸ್ಪರ್ಧಿ ಗೋಲ್ಡ್ ಸುರೇಶ್ ಅವರು ಬಿಗ್ ಬಾಸ್ ಮನೆಯಿಂದ ದಿಢೀರ್ ಹೊರ ಬಂದು ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಗೋಲ್ಡ್ ಸುರೇಶ್ ಅವರಿಗೆ ಬಿಗ್ ಬಾಸ್ ನಿಮ್ಮ ಕುಟುಂಬದ ಸದಸ್ಯರಲ್ಲಿ ತುರ್ತು ಪರಿಸ್ಥಿತಿ ಇದೆ. ಬಿಗ್ ಬಾಸ್ಗಿಂದ ನಿಮ್ಮ ಅಗತ್ಯತೆ ನಿಮ್ಮ ಕುಟುಂಬಸ್ಥರಿಗೆ ಹೆಚ್ಚಿದೆ. ಹೀಗಾಗಿ ತಡ ಮಾಡದೇ ಮನೆಯಿಂದ ಹೊರಡಬೇಕು ಎಂದು ಆದೇಶಿಸಿದರು.
ನಂತರ ಬಿಗ್ ಬಾಸ್ ಮನೆಯ ಟಿವಿ ಪರದೆ ಮೇಲೆ ಸುದೀಪ್ ಅವರು ಕಾಣಿಸಿಕೊಂಡರು. “ಸುರೇಶ್, ಗಾಬರಿ ಆಗುವಂತಹದ್ದು ಏನಿಲ್ಲ. ಆದರೆ ತಾವು ಮನೆಗೆ ಹೋಗಲೇಬೇಕಾದ ಸಂದರ್ಭ. ನಿಮ್ಮನ್ನು ಕಳುಹಿಸಿಕೊಡಬೇಕು ನಾವು. ನಿಮ್ಮ ಫ್ಯಾಮಿಲಿಗೆ ನಿಮ್ಮ ಅವಶ್ಯಕತೆ ಇದೆ. ನೀವು ಇಲ್ಲಿದ್ದಷ್ಟು ವಾರಗಳು ತುಂಬ ಮನರಂಜನೆ ನೀಡಿದ್ದೀರಿ. ನಿಮ್ಮ ಇನ್ನೊಂದು ಸೈಡ್ ಏನು ಅಂತ ಜನರಿಗೆ ತೋರಿಸಿಕೊಟ್ಟಿದ್ದೀರಿ. ಒಂದು ಕ್ಯಾಪ್ಟನ್ ಆಗಿ ಮನೆಯಿಂದ ಆಚೆ ಹೋಗುತ್ತಿದ್ದೀರಿ. ಸೋತು ಹೊಗುತ್ತಿಲ್ಲ, ಗೆದ್ದು ಹೋಗುತ್ತಿದ್ದೀರಿ ಎಂದು ಹೇಳುತ್ತಾ, ಬಿಗ್ ಬಾಸ್ ಮನೆಯಲ್ಲಿ ಖಂಡಿತ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇವೆ ಸುರೇಶ್. ನಿಮಗೆ ಧನ್ಯವಾದಗಳು, ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇವೆ” ಎಂದು ಸುದೀಪ್ ಹೇಳಿದ್ದಾರೆ.
ಬಿಗ್ ಬಾಸ್ ಕೊಟ್ಟ ತುರ್ತು ಮಾಹಿತಿಯಂತೆ ಗೋಲ್ಡ್ ಸುರೇಶ್ ಅವರು ಬಿಗ್ ಬಾಸ್ ಮನೆಯಿಂದ ಕಣ್ಣೀರು ಹಾಕುತ್ತಾ ಹೊರ ನಡೆದಿದ್ದಾರೆ. ಇದೀಗ ಗೋಲ್ಡ್ ಸುರೇಶ್ ಅವರು ಹೊರ ಬಂದ ಕಾರಣ ಏನು ಅನ್ನೋದರ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ.
ಗೋಲ್ಡ್ ಸುರೇಶ್ ಅವರು ಬಿಗ್ ಬಾಸ್ ಮನೆಯಿಂದ ಹೊರ ಬಂದ ಕೂಡಲೇ ಸೋಷಿಯಲ್ ಮೀಡಿಯಾದಲ್ಲಿ ನಾನಾ ಪೋಸ್ಟ್ಗಳು ಹರಿದಾಡಿದೆ. ಗೋಲ್ಡ್ ಸುರೇಶ್ ಅವರ ತಂದೆಗೆ ಅನಾರೋಗ್ಯವಾಗಿದೆ. ತಂದೆ ಅವರ ಆರೋಗ್ಯದ ಕಾರಣಕ್ಕೆ ಗೋಲ್ಡ್ ಸುರೇಶ್ ಅವರು ಬಿಗ್ ಬಾಸ್ ಮನೆಯಿಂದ ಆಚೆ ಬಂದಿದ್ದಾರೆ ಅನ್ನೋ ಸುಳ್ಳು ಸುದ್ದಿಯನ್ನ ಹಬ್ಬಿಸಲಾಗಿತ್ತು. ಆದರೆ ಗೋಲ್ಡ್ ಸುರೇಶ್ ಅವರ ತಂದೆ ಆರೋಗ್ಯವಾಗಿದ್ದು, ಅವರಿಗೆ ಯಾವುದೇ ತೊಂದರೆ ಆಗಿಲ್ಲ ಎಂದು ತಿಳಿದು ಬಂದಿದೆ.
ಆದರೂ ಗೋಲ್ಡ್ ಸುರೇಶ್ ಅವರು ಯಾವ ಕಾರಣಕ್ಕೆ ಹೊರ ಬಂದಿದ್ದಾರೆ ಅನ್ನೋದು ತಿಳಿದು ಬಂದಿಲ್ಲ.