ಬಿಗ್ ಬಾಸ್ ಮನೆಯ ಆಟ 80ನೇ ದಿನದತ್ತ ಮುನ್ನುಗ್ಗುತ್ತಿದೆ. ಇನ್ನೂ ಸ್ನೇಹಿತರಾಗಿದ್ದ ಉಗ್ರಂ ಮಂಜು, ಗೌತಮಿ ಜಾಧವ್ ನಡುವೆ ಬಿರುಕು ಮೂಡಿದೆ. ತ್ರಿವಿಕ್ರಮ್ ಜೊತೆ ಆಟದ ಲಾಜಿಕ್ ಮತ್ತು ಸ್ಟ್ರಾಟಜಿ ಮಾತನಾಡುವಾಗ ಮಂಜು ಮಧ್ಯೆ ಎಂಟ್ರಿ ಕೊಟ್ಟಿದ್ದಾರೆ. ಇದು ನಟಿಗೆ ಕೋಪ ತರಿಸಿದೆ. ಟೇಕ್ ಆಫ್ ಆಗಿದೆ, ಬಗ್ಗೋ ಮಾತೇ ಇಲ್ಲ ಎಂದು ಉಗ್ರಂ ಮಂಜುಗೆ ಗೌತಮಿ ಜಾಡಿಸಿದ್ದಾರೆ.
ಹೌದು, ಕಳೆದ ಮೂರು ವಾರಗಳಿಂದ ಬಿಗ್ಬಾಸ್ ಮನೆಯಲ್ಲಿ ಗೌತಮಿ, ಮಂಜು ವರ್ಷಸ್ ಮೋಕ್ಷಿತಾ ಎನ್ನುವಂತಾಗಿತ್ತು. ಮಹಾರಾಜ ಮತ್ತು ಯುವರಾಣಿ ಟಾಸ್ಕ್ನಿಂದ ಆರಂಭವಾಗಿದ್ದ ಜಿದ್ದಾಜಿದ್ದಿನ ಫೈಟ್ ಬಳಿಕ ಮತ್ತೆ ಗೌತಮಿ ಹಾಗೂ ಮಂಜು ಸ್ನೇಹದ ಮಧ್ಯೆ ಬಿರುಕು ಮೂಡುವ ಎಲ್ಲಾ ಲಕ್ಷಣಗಳು ಎದ್ದು ಕಾಣುತ್ತಿವೆ.
ಇದಕ್ಕೆ ಸಾಕ್ಷಿ ಎಂಬಂತೆ ಮತ್ತೊಂದು ಹೊಸ ಪ್ರೋಮೋ ರಿಲೀಸ್ ಆಗಿದೆ. ರಿಲೀಸ್ ಆದ ಪ್ರೋಮೋದಲ್ಲಿ, ಗೌತಮಿ ಅವರು ಟಾಸ್ಕ್ ವಿಚಾರವಾಗಿ ತ್ರಿವಿಕ್ರಮ್ ಜತೆ ಮಾತನಾಡಿದ್ದಾರೆ. ಲಾಜಿಕ್ ಹಾಗೂ ಸ್ಟ್ರಾಟಜಿ ಬಗ್ಗೆ ಮಾತನಾಡಿದ್ದಾರೆ. ಇವರ ಮಾತಿನ ನಡುವೆ ಮಂಜು ಬಂದಿದ್ದಾರೆ. ಆಗ ಮಂಜು ಅವರು ನಾನು ಚಪ್ಪಾಳೆ ಹೊಡೆದೆ ಎಂದಿದ್ದಾರೆ. ಅದಕ್ಕೆ ಗೌತಮಿ ಅವರು, ಮಂಜುಗೆ ಚೆನ್ನಾಗಿ ಮಾತಿನಲ್ಲೇ ತಿರುಗೇಟು ನೀಡಿದ್ದಾರೆ.
ನಿಮಗೆ ಚಪ್ಪಾಳೆಯ ಧ್ವನಿ ಕೇಳೆ ಇಲ್ಲ. ನಾನು ಕೇಳಿದ್ದು. ನಮ್ಮ ಕಥೆ ಜೊತೆ ನಿಮ್ಮ ಕಥೆ ಸೇರಿಸಿಕೊಂಡು ಹೇಳಿದ್ರಿ ಅಂತ. ಇದೇ ಪ್ಲಾಬ್ಲಮ್ ಇರೋದು. ಎಲ್ಲರಿಗೂ ನಿಮ್ಮ ನರೇಶನ್ ಕೊಡುತ್ತೀರಾ. ಇದಕ್ಕೆ ಎಲ್ಲರಿಗೂ ಅನ್ಸೋದು, ಮಂಜು ನಾನು ನಾನು ಅಂತ ಎನ್ನುತ್ತಾರೆ ಅಂತ. ನಾನು ಮೇಲೆ ಹೋಗಿದ್ದಾಗಿದೆ, ಬಗ್ಗೋ ಮಾತೇ ಇಲ್ಲ ಎಂದು ಗೌತಮಿ ತಿರುಗೇಟು ನೀಡಿದ್ದಾರೆ.