ನಮ್ ಸಿಲಿಕಾನ್ ಸಿಟಿಗೆ ಯಾವ್ದೆಲ್ಲಾ ಕಂಟಕ ಆಗತ್ತೋ ಗೊತ್ತಿಲ್ಲ. ಬೆಂಗಳೂರಲ್ಲಿ ಬೀದಿ ನಾಯಿ ಹಾವಳಿ ಅಂತ ಕೆಲವ್ರು..ಬೆಂಗಳೂರಿನಲ್ಲಿ ನೀರಿಲ್ಲ ಅಂತ ಹಲವ್ರು…ಜೊತೆಗೆ ಟ್ರಾಫಿಕ್ ಕಿರಿಕಿರಿ ಬೇರೆ…ಈ ಲಿಸ್ಟ್ಗೆ ಈಗ…ಗೂಳಿನೂ ಸೇರ್ಕೊಂಡ್ ಬಿಟ್ಟಿದೆ. ಇದೇನ್ರಿ ಗೂಳಿ ಕಾಟ ಅಂತ ಕೇಳ್ತೀರಾ ಇಲ್ಲಿದೆ ನೋಡಿ ಆನ್ಸರ್.
ಬೆಂಗಳೂರಿನಲ್ಲಿ ಇತ್ತೀಚಿಗೆ ಗೂಳಿಗಳ ಹಾವಳಿ ಜಾಸ್ತಿ ಆಗ್ತಿದೆ. ಸುಮ್ಮನಿದ್ರೆ ಓಕೆ ಆದರೆ ಗುಮ್ಮೋದಕ್ಕೂ ಶುರು ಮಾಡಿದ್ರೆ ಜನರ ಸ್ಥಿತಿ ಏನಾಗಬೇಡ ಹೇಳಿ. ಬೆಂಗಳೂರಿನ ಬಿಟಿಎಂ ಲೇಔಟ್ನಲ್ಲಿ ವೃದ್ಧರೊಬ್ಬರು ನಡೆದುಕೊಂಡು ಹೋಗ್ತಿರುವಾಗ…ಹಿಂದಿನಿಂದ ಬಂದ ಗೂಳಿ ಗುಮ್ಮಿ..ಎತ್ತಿ ಬಿಸಾಕಿದೆ. ಸ್ವಲ್ಪದರಲ್ಲೇ ವೃದ್ಧ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಿಕ್ಕಾಪಟ್ಟೆ ಬಿಸಿಲಿನ ಕಾರಣಕ್ಕೆ ಗೂಳಿಗಳು ಒರಟಾಗಿ ವರ್ತಿಸುತ್ತಿವೆ ಎನ್ನಲಾಗುತ್ತಿದೆ.
ದಿನೇ ದಿನೇ ಗೂಳಿ ಅಟ್ಯಾಕ್ ಕೇಸ್ಗಳು ಹೆಚ್ಚಾಗುತ್ತಿದೆ. ಬಿಬಿಎಂಪಿಗೂ ಕಂಪ್ಲೇಂಟ್ ಗಳ ಸುರಿಮಳೆ ಆಗ್ತಿದೆ. ಹೀಗಾಗಿ ಎಚ್ಚೆತ್ತುಕೊಂಡಿರೋ ಬಿಬಿಎಂಪಿ ಮತ್ತು ಪಶುಸಂಗೋಪನೆ ಇಲಾಖೆ “ಆಪರೇಷನ್ ಬುಲ್”ಗೆ ಮುಂದಾಗಿದೆ. ನಗರದಲ್ಲಿ ಗೂಳಿ ಕಾಟದ 4 ಪ್ರಕರಣಗಳು ಬೆಳಕಿಗೆ ಬಂದಿದ್ದು, 1200 ಅಪಾಯಕಾರಿ ಗೂಳಿಗಳನ್ನ ಸ್ಥಳಾಂತರ ಮಾಡಲು ಬಿಬಿಎಂಪಿ ಮತ್ತು ಪಶುಸಂಗೋಪನೆ ಇಲಾಖೆ ಸಿಬ್ಬಂದಿ ಫೀಲ್ಡ್ಗಿಳಿದಿದ್ದಾರೆ.