ಬೆಂಗಳೂರಿನ ಐತಿಹಾಸಿ ಕರಗ ಶಕ್ತ್ಯೋತ್ಸವ ಏಪ್ರಿಲ್ 15 ರಿಂದ ಆರಂಭಗೊಳ್ಳಲಿದೆ. ಏಪ್ರಿಲ್ 15-23 ರ ವರೆಗೆ ನಡೆಯುವ ಕರಗ ಉತ್ಸವ 23ರ ಚೈತ್ರ ಪೌರ್ಣಮಿಯಂದು ಕರಗ ಮಹೋತ್ಸವ ಕೊನೆಗೊಳ್ಳಲಿದೆ. ಈಗಾಗಲೇ ಆಡಳಿತ ಮಂಡಳಿ ಪ್ರತಿ ವರ್ಷದಂತೆ ಕರಗ ಮಹೋತ್ಸವವನ್ನು ಅದ್ದೂರಿಯಾಗಿ ನೆರವೇರಿಸಲು ಧರ್ಮರಾಯಸ್ವಾಮಿ ದೇವಾಲಯದಲ್ಲಿ ಸಕಲ ಸಿದ್ಧತೆ ಮಾಡಿಕೊಂಡಿದೆ. ಈ ಬಾರಿಯೂ ಕರಗವನ್ನು ಪೂಜಾರಿ ಎ.ಜ್ಞಾನೇಂದ್ರ ಅವರೆ ಹೊರಲಿದ್ದಾರೆ. ಜ್ಞಾನೇಂದ್ರ ಅವರು 13ನೇ ಬಾರಿ ಕರಗ ಹೊರಲಿರುವುದು ವಿಶೇಷ.
ಕರಗ ಕಾರ್ಯಕ್ರಮಗಳ ವಿವರ
ಏ.15 – ಬೆಳಗ್ಗೆ 10 ಗಂಟೆಗೆ ರಥೋತ್ಸವ ಹಾಗೂ ಧ್ವಜಾರೋಹಣ
ಏ.16 -19 ವರೆಗೆ ಪ್ರತಿ ದಿನ ವಿಶೇಷ ಪೂಜೆ ಮತ್ತು ಮಂಗಳಾರತಿ
ಏ.21 – ಹಸಿ ಕರಗ ನೆರವೇರಲಿದೆ
ಏ.23 – ಕರಗ ಶಕ್ತ್ಯೋತ್ಸವ ಹಾಗೂ ಧರ್ಮರಾಯ ರಥೋತ್ಸವ
ಏ.24 – ದೇವಸ್ಥಾನದಲ್ಲಿ ಗಾವು ಪೂಜೆ ನೆರವೇರುವುದು
ಏ.25 – ವಸಂತೋತ್ಸವ ಧ್ವಜಾರೋಹಣ