ಮಗನ ಹುಟ್ಟುಹಬ್ಬದ ಆಸೆ ಈಡೇರಿಸಲು ಹೋಗಿ ಈಗ ದಂಪತಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ದ್ವಿಚಕ್ರ ವಾಹನದ ಫುಟ್ರೆಸ್ಟ್ನಲ್ಲಿ ದಂಪತಿ ತಮ್ಮ ಮಗನನ್ನು ನಿಲ್ಲಿಸಿಕೊಂಡು ವಾಹನ ಚಲಾಯಿಸಿದ್ದರು. ಹೆಲ್ಮೆಟ್ ಕೂಡ ಧರಿಸಿರಲಿಲ್ಲ. ಇದನ್ನ ಹಿಂಬದಿಯಿಂದ ಬಂದ ಪ್ರಯಾಣಿಕರೊಬ್ಬರು ವಿಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು. ಈ ವಿಡಿಯೋ ವೈರಲ್ ಆದ ನಂತರ ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಇವರು ಕೇರಳ ಮೂಲದ ದಂಪತಿ ಅಂತ ತಿಳಿದು ಬಂದಿದೆ. ಮಹದೇವಪುರ ಸಂಚಾರಿ ಠಾಣೆ ಪೊಲೀಸರು ದಂಪತಿ ವಿರುದ್ಧ ಮಂಗಳವಾರ ಎಫ್ಐಆರ್ ದಾಖಲಿಸಿದ್ದಾರೆ.