ಕೇಂದ್ರ ಸರ್ಕಾರದ ಭಾರತ್ ಬ್ರ್ಯಾಂಡ್ ಯೋಜನೆಯಡಿ ಹುಬ್ಬಳ್ಳಿಯಲ್ಲಿ ಅಗ್ಗದ ದರದಲ್ಲಿ ಆಹಾರ ಉತ್ಪನ್ನಗಳ ವಿತರಣೆ ಇಂದಿನಿಂದ ಆರಂಭವಾಗುತ್ತಿದೆ. ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರು ತೊಂದರೆ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಈ ಯೋಜನೆ ಪ್ರಾರಂಭಿಸಲಾಗಿದೆ. ಹುಬ್ಬಳ್ಳಿಯಲ್ಲಿ ಮೂರುಸಾವಿರ ಮಠದ ಶಾಲಾ ಆವರಣದಲ್ಲಿ ಈ ವಿತರಣೆ ಕಾರ್ಯ ನಡೆಯುತ್ತಿದೆ.
ಬೆಲೆ ಏರಿಕೆ ಹಿನ್ನೆಲೆಯಲ್ಲಿ ಜನಸಾಮಾನ್ಯರ ನೆರವಿಗಾಗಿ ಕೇಂದ್ರ ಸರ್ಕಾರ ಕೈಗೊಂಡಿರುವ ನೇರ ಆಹಾರ ಉತ್ಪನ್ನ ಪೂರೈಕೆ, ಈಗ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ತವರು ಕ್ಷೇತ್ರದಲ್ಲಿ ಆರಂಭಗೊಂಡಿದೆ. ಅಗತ್ಯ ಆಹಾರೋತ್ಪನ್ನಗಳ ಬೆಲೆ ನಿಯಂತ್ರಣಕ್ಕೆ ಮುಂದಾದ ಕೇಂದ್ರ ಸರ್ಕಾರ ಮೊದಲಿಗೆ ದೆಹಲಿಯಲ್ಲಿ 29 ರೂ. ದರದಲ್ಲಿ 10 ಕೆಜಿ ಪ್ಯಾಕೆಟ್ ಭಾರತ್ ಅಕ್ಕಿ ಬಿಡುಗಡೆ ಮಾಡಿತ್ತು. ನಂತರ ಮೊಬೈಲ್ ವಾಹನಗಳ ಮೂಲಕ ದೇಶಾದ್ಯಂತ ಹಂಚಿತು. ಕ್ರಮೇಣ, ಭಾರತ್ ಅಕ್ಕಿ ಜತೆಗೆ ಆಯಾ ರಾಜ್ಯ ಮತ್ತು ಪ್ರದೇಶವಾರು ಬೇಡಿಕೆಗೆ ತಕ್ಕಂತೆ ಕಡಿಮೆ ಬೆಲೆಯಲ್ಲಿ ಭಾರತ್ ಬೇಳೆ, ಭಾರತ್ ಗೋಧಿ, ಭಾರತ್ ಹಿಟ್ಟು ವಿತರಣೆ ಆರಂಭಿಸಿದೆ.
ಇದನ್ನು ಓದಿ: ಭಾರತ-ಸೌತ್ ಆಫ್ರಿಕಾ ನಡುವಿನ 2ನೇ ಟಿ20 ಪಂದ್ಯ!
ರಾಜ್ಯದಲ್ಲಿ ದೆಹಲಿ, ಬೆಂಗಳೂರು ಬಳಿಕ ಈಗ ಚೋಟಾ ಮುಂಬೈ ಎಂದೇ ಖ್ಯಾತಿಯಾದ ಪ್ರಮುಖ ವಾಣಿಜ್ಯ ನಗರಿ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಸಹ ಭಾರತ್ ಬ್ರ್ಯಾಂಡ್ ಅಡಿ ನೇರ ಗ್ರಾಹಕರಿಗೆ ಆಹಾರೋತ್ಪನ್ನ ವಿತರಿಸಲು ಕೇಂದ್ರ ಆಹಾರ ಪೂರೈಕೆ ಸಚಿವ ಪ್ರಲ್ಹಾದ್ ಜೋಶಿ ಕ್ರಮ ಕೈಗೊಂಡಿದ್ದಾರೆ.