IPL-2024; ಮೇ 18 ರಂದು ನಡೆಯುವ ಹೈ-ವೋಲ್ಟೇಜ್ RCB v/s CSK ಪಂದ್ಯ ರಣರೋಚಕವಾಗಿದ್ದು ಫಾಫ್ ಪಡೆ 18 ರನ್ ಗಳ ಅಂತರದಿಂದ ರುತುರಾಜ್ ಗಾಯಕ್ವಾಡ್ ಟೀಮ್ ಅನ್ನು ಸದೆಬಡಿಯಬೇಕಿದೆ.
ಆದರೆ ಪ್ಲೇ ಆಫ್ಗೆ ಎಂಟ್ರಿ ಕೊಡೊಕೆ ಆರ್ಸಿಬಿ ಇರೋ ಅವಕಾಶ ತುಂಬಾ ಕಡಿಮೆ ಎಂದು ಹೇಳಲಾಗುತ್ತಿದೆ. ಈ ಕುರಿತು 2024ರ ಐಪಿಎಲ್ ಬ್ರಾಡ್ಕಾಸ್ಟ್ ಸ್ಟಾರ್ ಸ್ಪೋರ್ಟ್ಸ್ ಶೇಕಡಾವಾರು ಫಲಿತಾಂಶವನ್ನು ಹೇಳಿದೆ.
ಕಾರಣ ಈಗಾಗಲೇ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ ರಾಯಲ್ಸ್ ಪಾಯಿಂಟ್ ಪಟ್ಟಿಯಲ್ಲಿ ಪಸ್ಟ್ & ಸೆಕೆಂಡ್ ಸ್ಥಾನಗಳನ್ನ ಪಡೆದುಕೊಂಡಿವೆ. ಆದರೆ ಉಳಿದ 3 ಮತ್ತು 4ನೇ ಸ್ಥಾನಕ್ಕಾಗಿ ಒಟ್ಟು 5 ಟೀಮ್ಗಳು ಪೈಪೋಟಿವೆ.
ಇದರಲ್ಲಿ ಯಾವ ತಂಡ ನೆಟ್ ರನ್ ರೇಟ್ನಲ್ಲಿ ಆಡುತ್ತದೆಯೋ ಆ 2 ಟೀಮ್ಗಳು ಉಳಿದ 3, 4ನೇ ಸ್ಥಾನಗಳನ್ನು ಪಡೆದುಕೊಳ್ಳಲಿವೆ. ಇದರಲ್ಲಿ ಪ್ರಮುಖವಾಗಿ ಹೈದರಾಬಾದ್ ಮತ್ತು ಚೆನ್ನೈಗೆ ಹೆಚ್ಚಿನ ಅವಕಾಶ ಇದೆ ಎಂದು ಸ್ಟಾರ್ ಸ್ಪೋರ್ಟ್ಸ್ ಮಾಡಿರುವ ಟ್ವಿಟರ್ ಮಾಹಿತಿ ನೀಡುತ್ತದೆ.\