ಬಿಗ್ ಬಾಸ್ ಮನೆಯಲ್ಲಿ ಜೋಡಿ ಆಟ ಶುರು ಆಗಿದೆ. ಮನೆಯ ಸದಸ್ಯರನ್ನ ಜೋಡಿ ಮಾಡಿದ ಬಿಗ್ ಬಾಸ್, ಇದೀಗ ಟಾಸ್ಕ್ ಕೊಟ್ಟಿದ್ದಾರೆ. ಸದಾ ಅಂಟಿಕೊಂಡೇ ಇರೊ ಟಾಸ್ಕ್ ಇದಾಗಿದೆ. ಜೋಡಿ ಜೋಡಿಯಾಗಿಯೇ ಟಾಸ್ಕ್ ಆಡೋ ಅತಿ ದೊಡ್ಡ ಕಿರಿಕಿರಿ ಟಾಸ್ಕ್ ಇದಾಗಿದೆ. ಬಿಗ್ ಬಾಸ್ ಮನೆಯ ಸರಣಿಗಳಲ್ಲಿ ಜೋಡಿ ಆಟ ಇದ್ದೇ ಇರುತ್ತದೆ. ಈ ಕಾನ್ಸೆಪ್ಟ್ ಅನ್ನ ಸೀಸನ್ ಒಂದರಿಂದಲೂ ನೋಡಿಕೊಂಡು ಬಂದಿದ್ದೇವೆ. ಅದು ಸೀಸನ್ 11 ಕ್ಕೂ ಮುಂದುವರೆದಿದೆ. ಜೋಡಿ ಜೋಡಿಯಾಗೇ ಇರೋದು ಈ ಟಾಸ್ಕ್ನ ಮೊದಲ ಕಿರಿಕಿರಿಯಾಗಿದೆ. ಬಾತ್ ರೂಮ್ ಸೇರಿ ಎಲ್ಲೇ ಹೋದ್ರೂನೂ ಜೋಡಿ ಆಗಿಯೇ ಎಲ್ಲರೂ ಎಲ್ಲೆಡೆ ಓಡಾಡಬೇಕಾಗುತ್ತದೆ. ಈ ಟಾಸ್ಕ್ನ ಮೂಲ ನಿಯಮ.
ಗೌತಮಿ ಮತ್ತು ಹನುಮಂತ ಇಲ್ಲಿ ಜೋಡಿ ಆಗಿದ್ದಾರೆ. ಹನುಮಂತ ಸ್ನಾನವನ್ನೆ ಮಾಡೋದಿಲ್ಲ. ಅದು ಗೌತಮಿಗೆ ಎಷ್ಟು ಕಿರಿಕಿರಿ ಆಗುತ್ತದೆ ಅನ್ನೋ ಪ್ರಶ್ನೆ ಇದೆ. ಮನೆಯ ಇತರ ಜೋಡಿ ಲೆಕ್ಕ ಬಂದ್ರೆ, ಧರ್ಮ ಕೀರ್ತಿರಾಜ್ ಹಾಗೂ ಐಶ್ವರ್ಯ ಇಲ್ಲಿ ಜೋಡಿ ಆಗಿದ್ದಾರೆ. ಚೈತ್ರಾ ಕುಂದಾಪುರ-ಶಿಶಿರ್, ಧರ್ಮ-ಐಶ್ವರ್ಯ, ಭವ್ಯ-ಉಗ್ರಂ ಮಂಜು, ಧನರಾಜ್-ಮೋಕ್ಷಿತಾ, ಅನುಷಾ-ಸುರೇಶ್ ಜೋಡಿಯಾದಂತೆ ಕಾಣ್ತಿದೆ. ಈ ಒಂದು ಆಟದಲ್ಲಿ ಯಾರು ಗೆಲ್ಲುತ್ತಾರೆ ಅನ್ನುವ ಕುತೂಹಲ ಕೂಡ ಇದೆ. ಹಾಗೆ ಈ ದಿನದ ಮೊದಲ ಪ್ರೋಮೋದಲ್ಲಿ ಈ ಎಲ್ಲ ವಿಷಯ ರಿವೀಲ್ ಆಗಿದೆ ಅಂತಲೂ ಹೇಳಬಹುದು.
ಇದನ್ನು ಓದಿ: ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರ ಸಂಕ್ಷಿಪ್ತ ಪರಿಚಯ..!
ಜೋಡಿ ಟಾಸ್ಕ್ನ ಮೊದಲ ಮಜಾನೆ ಇದಾಗಿದೆ. ಹಾಗಾಗಿಯೇ ನೋಡುಗರಿಗೆ ಮತ್ತು ಟಾಸ್ಕ್ನಲ್ಲಿರೋರಿಗೂ ಇದು ಅಷ್ಟೇ ಮಜಾ ಕೊಡುತ್ತದೆ. ಹೀಗಾಗಿ ಈ ವಾರ ಬಿಗ್ಬಾಸ್ ನೀಡುವ ಟಾಸ್ಕ್ಗಳು ಏನಾಗಿರುತ್ತವೆ? ಎಪಿಸೋಡ್ಗಳಲ್ಲಿ ಏನೆಲ್ಲ ನೋಡಬಹುದು ಅನ್ನೋ ಚರ್ಚೆಯಲ್ಲಿ ಬಿಗ್ಬಾಸ್ ಅಭಿಮಾನಿಗಳು ಮುಳುಗಿದ್ದಾರೆ.