‘ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮ ಆರಂಭವಾಗಿ 9 ವಾರಗಳು ಉರುಳಿ 10ನೇ ವಾರ ಚಾಲ್ತಿಯಲ್ಲಿದೆ. ವಾರ ವಾರ ನಾಮಿನೇಷನ್ ಪ್ರಕ್ರಿಯೆ ವಿಭಿನ್ನವಾಗಿಯೇ ನಡೆಯುತ್ತಿದೆ. ಆದರೆ, ಸೋಮವಾರ ತಪ್ಪಿದ್ರೆ ಮಂಗಳವಾರ ಮುಗಿಯಬೇಕಿದ್ದ ನಾಮಿನೇಷನ್ ಪ್ರಕ್ರಿಯೆ ಇತ್ತೀಚೆಗಂತೂ ತುಂಬಾ ಲ್ಯಾಗ್ ಆಗುತ್ತಿದೆ. ನಾಮಿನೇಷನ್ ಪ್ರಕ್ರಿಯೆಯನ್ನ ತೀರಾ ಎಳೆದು, ಎಪಿಸೋಡ್ ಲೆಕ್ಕದಲ್ಲಿ ಪ್ರಸಾರ ಮಾಡಲಾಗುತ್ತಿದೆ. ಈ ವಾರ ಆಗಲೇ ಇಂದು ಗುರುವಾರ! ನಾಮಿನೇಷನ್ ಪ್ರಕ್ರಿಯೆಯನ್ನ ಇನ್ನೂ ಸಂಪೂರ್ಣವಾಗಿ ಪ್ರಸಾರ ಮಾಡಿಲ್ಲ. ಹಾಗಾದ್ರೆ, ಈ ವಾರ ಎಲಿಮಿನೇಷನ್ ಇರಲ್ವಾ?
‘ಬಿಗ್ ಬಾಸ್’ ಮನೆಯೊಳಗೆ 10ನೇ ವಾರದ ನಾಮಿನೇಷನ್ ಪ್ರಕ್ರಿಯೆ ಪೂರ್ಣಗೊಂಡಿದೆ. ಆದರೆ, ಅದನ್ನ ಇನ್ನೂ ಸಂಪೂರ್ಣವಾಗಿ ಪ್ರಸಾರ ಮಾಡಿಲ್ಲ. ಬೆನ್ನಿಗೆ ಖಡ್ಗಗಳನ್ನ ಚುಚ್ಚುವ ಮುಖಾಂತರ ಸ್ಪರ್ಧಿಗಳು ನಾಮಿನೇಷನ್ ಪ್ರಕ್ರಿಯೆ ನಡೆಸಬೇಕಿತ್ತು. ಮಧ್ಯದಲ್ಲಿ ವಾದ – ವಾಗ್ವಾದಕ್ಕೂ ಅವಕಾಶ ಮಾಡಿಕೊಡಲಾಗಿತ್ತು. ಹೀಗಾಗಿ, ನಾಮಿನೇಷನ್ ಪ್ರಕ್ರಿಯೆ ಸುಧೀರ್ಘವಾಗಿ ನಡೆದಿದ್ದು, ಇಂದಿನ ಸಂಚಿಕೆಯಲ್ಲೂ ಅದು ಪ್ರಸಾರವಾಗಲಿದೆ.
ನಾಮಿನೇಷನ್ ಪ್ರಕ್ರಿಯೆ ಸಂಪೂರ್ಣವಾಗಿ ಪ್ರಸಾರವಾಗದೆ ವೋಟಿಂಗ್ ಲೈನ್ಸ್ ಓಪನ್ ಆಗಲ್ಲ. ಅಲ್ಲಿಗೆ, ಇಂದಿನ ಸಂಚಿಕೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ಪೂರ್ಣಗೊಂಡರೆ.. ಸಂಚಿಕೆ ಮುಕ್ತಾಯವಾದ ಬಳಿಕ ಜಿಯೋ ಸಿನಿಮಾ ಆಪ್ನಲ್ಲಿ ವೋಟಿಂಗ್ ಲೈನ್ಸ್ ಓಪನ್ ಆಗಲಿದೆ. ಆದರೆ, ಹೇಗೇ ಇದ್ದರೂ ಶುಕ್ರವಾರ ಮಧ್ಯರಾತ್ರಿ ಅಥವಾ ಶನಿವಾರ ಬೆಳಗ್ಗೆ ವೇಳೆ ವೋಟಿಂಗ್ ಲೈನ್ಸ್ ಬಂದ್ ಆಗೋದು ಖಚಿತ. ಇಷ್ಟು ಕಡಿಮೆ ಅವಧಿಗೆ.. ಅದೂ ಗಂಟೆಗಳ ಲೆಕ್ಕದಲ್ಲಿ ಮಾತ್ರ ವೋಟಿಂಗ್ ಲೈನ್ಸ್ ಓಪನ್ ಮಾಡಿ.. ಎಲಿಮಿನೇಷನ್ ನಡೆಸ್ತಾರಾ ‘ಬಿಗ್ ಬಾಸ್’ ಎಂಬುದೇ ಸದ್ಯದ ಪ್ರಶ್ನೆ.
ಇಂದಿನ ಸಂಚಿಕೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ಕಂಪ್ಲೀಟ್ ಆಗಿ ಪ್ರಸಾರ ಆಗುತ್ತಾ? ಸಂಚಿಕೆ ಮುಗಿದ ಕೂಡಲೆ ವೋಟಿಂಗ್ ಲೈನ್ಸ್ ಓಪನ್ ಆದರೆ ಎಲಿಮಿನೇಷನ್ ಇರಲಿದೆ. ಒಂದ್ವೇಳೆ ಇಲ್ಲ ಅಂದ್ರೆ ಇದು ನೋ ಎಲಿಮಿನೇಷನ್ ವೀಕ್ ಅಂತಲೇ ಅರ್ಥ. ಅದೇನೇ ಇದ್ದರೂ.. ಇಂದಿನ ಸಂಚಿಕೆಯಲ್ಲಿ ಕ್ಲಾರಿಟಿ ಸಿಗೋದಂತೂ ಪಕ್ಕಾ.