‘ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮ ಶುರುವಾಗಿ 10 ವಾರಗಳು ಉರುಳಿವೆ. 11ನೇ ವಾರ ಚಾಲ್ತಿಯಲ್ಲಿದೆ. ಈವರೆಗೂ ಇಷ್ಟು ವಾರಗಳ ಕಾಲ ಉಗ್ರಂ ಮಂಜು – ಗೌತಮಿ ಜಾಧವ್ ಮಧ್ಯೆ ಆತ್ಮೀಯತೆ, ಗೆಳೆತನ ಇತ್ತು. ಆದರೆ, ಅದ್ಯಾವಾಗ ಗೌತಮಿ ಜಾಧವ್ ಕ್ಯಾಪ್ಟನ್ ಆದ್ರೋ.. ಮಂಜು – ಗೌತಮಿ ಗೆಳೆತನದಲ್ಲಿ ಬಿರುಕು ಮೂಡಿದೆ. ‘ಇನ್ಮೇಲೆ ಗೆಳೆಯ – ಗೆಳತಿ, ಗೆಳೆತನ ಇರಲ್ಲ. ಮುಗಿಸ್ತಾ ಇದ್ದೀನಿ’ ಎಂಬ ಮಾತು ಗೌತಮಿ ಜಾಧವ್ ಬಾಯಿಂದ ಬಂದಿದೆ.
‘ಸೂಪರ್ ಸಂಡೆ ವಿತ್ ಸುದೀಪ’ ಸಂಚಿಕೆಯಲ್ಲಿ ಟಿಆರ್ಪಿ ಚಟುವಟಿಕೆ ಕೊಡಲಾಗಿತ್ತು. ಇದರಲ್ಲಿ ಮಂಜು ತಮಗೆ ತಾವು ಹೆಚ್ಚಿನ ಟಿಆರ್ಪಿ ಕೊಟ್ಟುಕೊಂಡರು. ಗೌತಮಿ ಜಾಧವ್ಗೆ ಕೊಂಚ ಕಡಿಮೆ ಟಿಆರ್ಪಿ ಕೊಟ್ಟರು. ಇದರಿಂದ ಗೌತಮಿಗೆ ಬೇಸರವಾಗಿದ್ಯಾ? ಯಾಕಂದ್ರೆ, ಉತ್ತಮ – ಕಳಪೆ ವಿಷಯದಲ್ಲಿ ತಮ್ಮಿಬ್ಬರಲ್ಲೇ ಉತ್ತಮ ಕೊಟ್ಟುಕೊಳ್ಳುತ್ತಿದ್ದವರು ಗೌತಮಿ – ಮಂಜು! ಇಂತಿಪ್ಪ ಗೌತಮಿ – ಮಂಜು ಮಧ್ಯೆ ಈಗ ಫ್ರೆಂಡ್ಶಿಪ್ ಕಟ್ ಆಗುವ ಸಾಧ್ಯತೆ ಹೆಚ್ಚಿದೆ.
ನಿನ್ನೆಯ ಎಪಿಸೋಡ್ನಲ್ಲಿ ಗೌತಮಿ ಗೆಳೆಯ ಮಂಜುಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಪ್ರತಿ ವಿಚಾರಕ್ಕೂ ಮಂಜಣ್ಣ ಮೇಲೆ ಕೋಪಗೊಳ್ಳುತ್ತಿದ್ದಾರೆ. ಕ್ಯಾಪ್ಟನ್ ಪಟ್ಟ ಸಿಗುತ್ತಿದ್ದಂತೆ ಗೌತಮಿ ಬದಲಾಗಿ ಬಿಟ್ರಾ ಎಂಬ ಅನುಮಾನ ವಿಕ್ಷಕರಿಗೆ ಶುರುವಾಗಿದೆ. ಮುಂದೆ ಗೌತಮಿ ಮಂಜು ಅವರನ್ನು ಬಿಟ್ಟು ತಮ್ಮ ಆಟ ಶುರು ಮಾಡಿ ಕಮಾಲ್ ಮಾಡ್ತಾರಾ ಅಂತ ಕಾದು ನೋಡಬೇಕಿದೆ.
ಈಗ ನನ್ನ ಆಟ ತೋರಿಸುವ ಸಮಯ ಬಂದಿದೆ. ಈಗ ಮೇಲೆ ಇದ್ದೇನೆ. ಕೆಳಗೆ ಬರೋ ಮಾತೇ ಇಲ್ಲ. ನಿಮ್ಮ ಆಟ ನೀವು ಆಡಿ ಅಂತ ಮಂಜುಗೆ ವಾರ್ನ್ ಮಾಡಿದ್ದಾರೆ ಗೌತಮಿ. ಸದ್ಯ ಮುಂದಿನ ದಿನಗಳಲ್ಲಿ ಗೌತಮಿ ಆಟ ಚೇಂಚ್ ಆಗುತ್ತಾ ಅಥವಾ ಮತ್ತೆ ಗೆಳೆಯ ಅಂತ ಮಂಜು ಅವರ ಹಿಂದೆ ಹೋಗುತ್ತಾರಾ ಅಂತ ಆಟದ ಮೂಲಕ ತಿಳಿದುಕೊಳ್ಳಬೇಕಿದೆ.