ಬಿಗ್ ಬಾಸ್ ಮನೆಗೆ ಕಾರ್ತಿಕ್ ಮತ್ತು ನಮ್ರತಾ ರೀ-ಎಂಟ್ರಿ ನೀಡಿದ್ದು, ನಾಮಿನೇಷನ್ ಪ್ರಕ್ರಿಯೆ ಮತ್ತಷ್ಟು ಗರಿಗೆದರಿಸಿದೆ. ಅವರ ಆಗಮನದಿಂದ ಮನೆಗೆ ಹೊಸ ಚೈತನ್ಯ ಸೇರಿದರೂ, ಸ್ಪರ್ಧಿಗಳ ನಡುವೆ ಜಗಳಗಳು ಜಾಸ್ತಿಯಾಗಿವೆ. ಇತ್ತ ಧನರಾಜ್ ಆಚಾರ್ ಮತ್ತು ರಜತ್ ಕಿಶನ್ ನಡುವೆ ನಡೆದ ಅಸಹನೀಯ ಜಗಳ ಉಗ್ರಮಟ್ಟಕ್ಕೆ ತಲುಪಿದಾಗ, ಉಗ್ರಂ ಮಂಜು ಎಂಟ್ರಿ ನೀಡಿ ಅವರನ್ನ ಸಮಧಾನಪಡಿಸಿದ್ದಾರೆ.
ಈ ನಡುವೆ, ಮನೆಯೊಳಗಿನ ಗ್ರೋಸರಿ ಟಾಸ್ಕ್ನಲ್ಲಿ ಗೆಲುವುದಕ್ಕೆ ತ್ರಿವಿಕ್ರಮ್, ರಜತ್ ಕಿಶನ್ ಕಾರಣವೆಂದರೂ, ಧನರಾಜ್ ಇದರಿಂದ ಬೇಸರಗೊಂಡು ತಕ್ಷಣವೇ ರಜತ್ ವಿರುದ್ಧ ನಾಮಿನೇಷನ್ ಪ್ರಕ್ರಿಯೆ ಪ್ರಾರಂಭಿಸಿದ್ದಾರೆ. ಇಬ್ಬರ ನಡುವೆ ಮಾತಿನ ಚಕಮಕಿ ಪ್ರಾರಂಭಗೊಂಡು, ರಜತ್ ಧನರಾಜ್ ಅವರನ್ನ “ಮಗು” ಎಂದಾಗ, ಧನರಾಜ್ ತಾಳ್ಮೆ ಕಳೆದುಕೊಂಡು ತೀವ್ರ ವಿರೋಧ ವ್ಯಕ್ತಪಡಿಸುತ್ತಾರೆ. ಈ ಭಯಂಕರ ಜಗಳದ ನಡುವೆ, ಕ್ಯಾಪ್ಟನ್ ಗೌತಮಿ ಮತ್ತು ಉಗ್ರಂ ಮಂಜು ಮಧ್ಯಪ್ರವೇಶಿಸಿ ಶಾಂತಿ ಕಾಪಾಡುವ ಪ್ರಯತ್ನ ಮಾಡುತ್ತಾರೆ.
ಬಿಗ್ ಬಾಸ್ ಈ ಸೀಸನ್ಲ್ಲಿ ಹಿರಿಯ ಸ್ಪರ್ಧಿಗಳ ಮರು ಪ್ರವೇಶದಿಂದ, ಮನೆಯಲ್ಲಿ ಇದ್ದವರನ್ನು ಬೂಸ್ಟ್ ಮಾಡಿದೆ. ತೂಕಾಲಿ ಸಂತು, ವರ್ತೂರ್ ಸಂತೋಷ, ಡ್ರೋನ್ ಪ್ರತಾಪ್ ಮತ್ತು ತನಿಷಾ ಮೊದಲೇ ಪ್ರೇಕ್ಷಕರ ಗಮನ ಸೆಳೆದಿದ್ದರು. ಇದೀಗ, ಕಾರ್ತಿಕ್ ಮತ್ತು ನಮ್ರತಾ ಬಿಗ್ ಬಾಸ್ ಮನೆಗೆ ಆಗಮಿಸಿದ್ದಾರೆ. ಈ ಸೀಸನ್ ಪ್ರತಿ ಕ್ಷಣ ರೋಚಕವಾಗಿದ್ದು, ಸ್ಪರ್ಧಿಗಳ ಜಗಳ ಮತ್ತು ಸ್ನೇಹಗಳ ನಡುವಿನ ಡ್ರಾಮಾ ಪ್ರೇಕ್ಷಕರಿಗೆ ಒಳ್ಳೆ ಮನರಂಜನೆ ನೀಡುತ್ತಿದೆ. ಈ ಎಲ್ಲ ಕ್ಷಣಗಳಿಗಾಗಿ ಇಂದಿನ ಎಪಿಸೋಡ್ನಲ್ಲಿ ಕಾದುನೋಡಬೇಕಿದೆ.