ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11, 11ನೇ ವಾರಕ್ಕೆ ಕಾಲಿಡಲು ಸಜ್ಜಾಗಿದೆ. ಸದ್ಯ ಬಿಗ್ಬಾಸ್ ಮನೆಯಲ್ಲಿ ಒಟ್ಟು 12 ಮಂದಿ ಉಳಿದುಕೊಂಡಿದ್ದಾರೆ. ಇದೇ ಹೊತ್ತಲ್ಲಿ 10ನೇ ವಾರದಲ್ಲಿ ಬಿಗ್ಬಾಸ್ ಮನೆಯ ಕ್ಯಾಪ್ಟನ್ ಆಗಿ ಗೌತಮಿ ಜಾಧವ್ ಹೊರ ಹೊಮ್ಮಿದ್ದಾರೆ.
‘ಬಿಗ್ ಬಾಸ್’ ಮನೆಯಲ್ಲಿ ವಾರದ ಕಳಪೆ ಯಾರೆಂದು ಘೋಷಣೆ ಮಾಡಲಾಗಿದೆ. ಚೈತ್ರಾ ಕುಂದಾಪುರ ಅವರಿಗೆ ಮನೆಯ ಐವರು ಸದಸ್ಯರು ಚೈತ್ರಾರನ್ನು ಕಳಪೆ ಎಂದು ಕರೆದಿದ್ದಾರೆ. ಹಾಗಾಗಿ, ಎರಡನೇ ಬಾರಿಗೆ ಜೈಲಿಗೆ ಹೋಗಬೇಕಾದ ಅನಿವಾರ್ಯತೆ ಚೈತ್ರಾ ಕುಂದಾಪುರಗೆ ಬಂದಿದೆ. ಅಂದಹಾಗೆ, ಜೈಲಿನೊಳಕ್ಕೆ ಹೆಜ್ಜೆ ಇಡುವಾಗಲೇ ಕಳೆದ ವಾರ ಎಲಿಮಿನೇಟ್ ಆದ ಸ್ಪರ್ಧಿ ಶೋಭಾ ಶೆಟ್ಟಿ ಅವರನ್ನು ನೆನಪು ಮಾಡಿಕೊಂಡಿದ್ದಾರೆ ಚೈತ್ರಾ ಕುಂದಾಪುರ.
ಕಳಪೆ ಪಟ್ಟವನ್ನು ಕೊಟ್ಟಿದ್ದಕ್ಕೆ ಏಕಾಏಕಿ ಕೋಪಗೊಂಡ ಚೈತ್ರಾ ಉಳಿದ ಸ್ಪರ್ಧಿಗಳ ಮೇಲೆ ಕೂಗಾಡಿದ್ದಾರೆ. ನಾನು ನಿಮಗೆಲ್ಲಾ ಈಸಿಯಾಗಿ ಟಾರ್ಗೆಟ್ ಆಗಿದ್ದೀನಿ ಅಲ್ವಾ ಅಂತ ತಮ್ಮ ಮಾತನ್ನು ಶುರು ಮಾಡಿದ್ರು, ಆ ಕೂಡಲೇ ಮಂಜಣ್ಣ ಹೆಚ್ಚು ಮಾತನಾಡದೇ ಕಳಪೆಗೆ ರಿಸನ್ ಹೇಳಿ ಅಲ್ಲಿಂದ ಹೊರಟು ಹೋಗಿದ್ದಾರೆ.
ಇದಾದ ಬಳಿಕ ಮನೆಯ ಸ್ಪರ್ಧಿಗಳು ಒಬ್ಬೊಬ್ಬರಾಗಿ ಬಂದು ತಮ್ಮ ಅಭಿಪ್ರಯಾವನ್ನು ವ್ಯಕ್ತಪಡಿಸಿದ್ದಾರೆ. ಅದಕ್ಕೂ ಸುಮ್ಮನಿರದ ಚೈತ್ರಾ ಕುಂದಾಪುರ ಜೋರಾಗಿ ಗಲಾಟೆ ಮಾಡುತ್ತಲೇ ಕಳಪೆ ಪಟ್ಟವನ್ನು ಸ್ವೀಕರಿಸಿ ಜೈಲಿಗೆ ಹೋಗಿದ್ದಾರೆ. ಇದು ಎರಡನೇ ಬಾರಿಗೆ ಚೈತ್ರಾ ಕುಂದಾಪುರ ಅವರು ಬಿಗ್ಬಾಸ್ ಮನೆಯ ಜೈಲು ಪಾಲಾಗಿದ್ದಾರೆ. ಜೈಲಿಗೆ ಹೋದ ಕೂಡಲೇ ಚೈತ್ರಾ, ಮೋಕ್ಷಿತಾ ಹಾಗೂ ಐಶ್ವರ್ಯಾ ಮುಂದೆ ಮಂಜಣ್ಣ ತಮ್ಮ ಟೀಮ್ಗೆ ಕಣ್ ಸನ್ನೆ ಮಾಡಿದ್ರು ಅಂತ ಹೇಳಿದ್ದಾರೆ. ಅದಕ್ಕೆ ಐಶ್ವರ್ಯಾ ಶಾಕ್ ಆಗಿದ್ದಾರೆ.
ಆದರೆ ಈ ಬಾರಿ ಅವರಿಗೆ ಕಳಪೆ ಪಟ್ಟ ನೀಡಿರುವುದು ಚೈತ್ರಾ ಅವರಿಗೆ ಸುತಾರಾಂ ಹಿಡಿಸಿಲ್ಲ. ಉಗ್ರಂ ಮಂಜು ಹಾಗೂ ಕೆಲವರ ಪಿತೂರಿಯಿಂದಲೇ ತಮಗೆ ಕಳಪೆ ದೊರೆತಿದೆ ಎಂದು ಚೈತ್ರಾ ಆರೋಪಿಸಿದ್ದಾರೆ.