ಧನರಾಜ್ ಆಚಾರ್ ನೇತೃತ್ವದ ‘ಎಂಎಂ ಟಿವಿ’ ಮತ್ತು ಗೋಲ್ಡ್ ಸುರೇಶ್ ನೇತೃತ್ವದ ‘ಡಿಡಿ ಟಿವಿ’ ಮಧ್ಯೆ ಈ ವಾರ ‘ಬಿಗ್ ಬಾಸ್’ ಮನೆಯಲ್ಲಿ ಫೈಟ್ ಶುರುವಾಗಿತ್ತು. ಕ್ಯಾಪ್ಟನ್ಸಿ ರೇಸ್ಗೆ ಅರ್ಹತೆ ಪಡೆದುಕೊಳ್ಳಲು ಎರಡೂ ತಂಡಗಳು ಭಾರಿ ಪೈಪೋಟಿ ಮಾಡಿದ್ದವು. ಅಂತಿಮವಾಗಿ ಧನರಾಜ್ ಆಚಾರ್ ನೇತೃತ್ವದ ‘ಎಂಎಂ ಟಿವಿ’ ಗೆದ್ದಿದೆ. ಆ ವಾಹಿನಿಯ ಸದಸ್ಯರು ಕ್ಯಾಪ್ಟನ್ಸಿ ರೇಸ್ಗೆ ಅರ್ಹತೆ ಪಡೆದುಕೊಂಡಿದ್ದರು.
ಆದರೆ ಕ್ಯಾಪ್ಟನ್ಸಿ ರೇಸ್ಗೆ ಅರ್ಹತೆ ಪಡೆದುಕೊಂಡ ಸ್ಪರ್ಧಿಗಳಿಗೆ ಬಿಗ್ ಬಾಸ್ ಒಂದು ಟ್ವಿಸ್ಟ್ ನೀಡಿದ್ದರು. “ಕ್ಯಾಪ್ಟನ್ಸಿ ಓಟದಲ್ಲಿರುವ ಸ್ಪರ್ಧಿಗಳು.. ಮನೆಯ ಉಳಿದ ಸ್ಪರ್ಧಿಗಳನ್ನ ತಮ್ಮ ಸಹಾಯಕರಾಗಿ ಆಡುವಂತೆ ಮನವೊಲಿಸಬೇಕು..” ಎಂಬ ಆದೇಶವನ್ನು ‘ಬಿಗ್ ಬಾಸ್’ ನೀಡಿದ್ದರು. ಇದಾದ್ಮೇಲೆ ಎಲ್ಲರೂ ಅವರವರ ಸಹಾಯಕರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಹನುಮಂತು ಪರವಾಗಿ ಮಂಜು, ರಜತ್ ಪರವಾಗಿ ತ್ರಿವಿಕ್ರಮ್, ಶಿಶಿರ್ ಪರವಾಗಿ ಭವ್ಯಾ ಅವರು ಆಡುತ್ತಿದ್ದಾರೆ. ಆದರೆ ಮೋಕ್ಷಿತಾಗೆ ಉಳಿದಿರೋದು ಗೌತಮಿ ಮಾತ್ರ!
ಮೋಕ್ಷಿತಾ ಪೈ ಮಾತ್ರ “ನಾನು ಗೌತಮಿ ಬಳಿ ಹೋಗಿ ಕೇಳಲ್ಲ” ಅಂತ ಹಠ ಮಾಡಿದ್ದಾರೆ. “ಗೌತಮಿ ಅವರಿಂದ ನಾನು ಕ್ಯಾಪ್ಟನ್ ಆಗಬೇಕು ಅಂದ್ರೆ ನಾನು ಆಗೋದೇ ಇಲ್ಲ. ನನ್ನ ಆತ್ಮಗೌರವದ ಮುಂದೆ ಇನ್ಯಾವುದೂ ದೊಡ್ಡದಲ್ಲ. ನನ್ನನ್ನ ಕಳಿಸಿದರೆ ನಾಳೆಯೇ ಕಳಿಸಲಿ” ಎಂದು ಕಠಿಣ ಮಾತುಗಳನ್ನೇ ಮೋಕ್ಷಿತಾ ಪೈ ಹೇಳಿದ್ದಾರೆ.ಇದಕ್ಕೆ ಬಿಗ್ಬಾಸ್ ನೀವು ಜನರು ಹಾಕಿದ ಮತವನ್ನು ಒದೆಯುತ್ತಿದ್ದೀರಿ ಎಂದು ಬಿಗ್ಬಾಸ್ ಎಚ್ಚರಿಕೆಯನ್ನು ನೀಡುತ್ತಾರೆ ಆದ್ರೂನು ಮೋಕ್ಷಿತಾ ಮಾತ್ರ ಬಿಗ್ಬಾಸ್ ಇದೇ ನನ್ನ ಕಡೆ ನಿರ್ಧಾರ ಎಂದು ಮೋಕ್ಷಿತಾ ಹೇಳಿದ್ದಾರೆ.
ಆದ್ದರಿಂದ ಬಿಗ್ಬಾಸ್ ಮೋಕ್ಷಿತಾ ಅವರನ್ನು ಕ್ಯಾಪ್ಟನ್ಸಿ ಆಟದಿಂದ ಹೊರಗೆ ಇಟ್ಟಿದ್ದಾರೆ. ಈ ಅವಕಾಶ ವನ್ನು ಸಿಕ್ಕಿದೆ ಚಾನ್ಸ್ ಅಂತಾ ಗೌತಮಿ ಜಾಧವ್ ಅವರ ಪಾಲಾಗಿದೆ. . ಜನರೇ ಆಯ್ಕೆ ಮಾಡಿದ್ದ ಮೋಕ್ಷಿತಾ ತಮ್ಮ ಈಗೋ ಪ್ರಾಬ್ಲಂನಿಂದ ಅದನ್ನ ಒದ್ದಿದ್ದಾರೆ. ಆ ಒಂದು ಅವಕಾಶ ಗೌತಮಿಯನ್ನ ಹುಡುಕಿಕೊಂಡು ಹೋಗಿದೆ. ಅದನ್ನ ಅಷ್ಟೇ ಪ್ರೀತಿಯಿಂದಲೇ ಸ್ವೀಕರಿಸಿದ ಗೌತಮಿ ಜಾಧವ್ ಧನರಾಜ್ ಆಚಾರ್ ಸಹಾಯದಿಂದ ಇದೀಗ ಕ್ಯಾಪ್ಟನ್ ಆಗಿದ್ದಾರೆ.
ಆದರೆ, ಅವಕಾಶವನ್ನೆ ಒದ್ದ ಮೋಕ್ಷಿತಾ ಪೈ ಈಗ ಮನೆಯಲ್ಲಿ ತಮ್ಮ ಅದೇ ಸೊಕ್ಕಿನಿಂದಲೇ ಓಡಾಡ್ತಿದ್ದಾರೆ. ಅದಕ್ಕೇನೆ ಇದೀಗ ಮನೆಯಲ್ಲಿ ಒಂದು ಕಡೆ ಸಂಭ್ರಮ ಇದೆ. ಮತ್ತೊಂದು ಕಡೆಗೆ ಸಂಘರ್ಷ ಕೂಡ ಇದೆ.
ಮೋಕ್ಷಿತಾ ಪೈಗೆ ಕ್ಯಾಪ್ಟನ್ ಆಗೋ ಚಾನ್ಸ್ ಇತ್ತು. ಕ್ಯಾಪ್ಟನ್ಶಿ ಆಟದಲ್ಲಿ ಭಾಗಿ ಆಗೋ ಅವಕಾಶ ಇತ್ತು. ಆದರೆ, ಅದನ್ನ ತಾವೇ ಹಾಳು ಮಾಡಿಕೊಂಡಿದ್ದಾರೆ. ಆಟ ಅಂತ ಬಂದ್ರೆ, ಅದು ಆಟವೇ ಆಗಿರುತ್ತದೆ. ಕಳೆದವಾರವೇ ಸುದೀಪ್ ಹೇಳಿದ್ದರು. ವೈಯುಕ್ತಿಕ ಆಟವನ್ನೆ ಆಡಿ ಅಂತಲೇ ಹೇಳಿದ್ದರು.ಆದರೆ, ಈ ಸಲ ಈಗೋ ಪ್ರಾಬ್ಲಂನಿಂದಲೇ ಮೋಕ್ಷಿತಾ ಒಳ್ಳೆ ಅವಕಾಶ ಮಿಸ್ ಮಾಡಿಕೊಂಡಿದ್ದಾರೆ. ಇದರಿಂದ ಗೌತಮಿ ಜಾದವ್ ಇದೀಗ ಮನೆಯ ಕ್ಯಾಪ್ಟನ್ ಆಗಿದ್ದಾರೆ.