ಬಿಗ್ಬಾಸ್ ಮನೆಯಲ್ಲಿ ಮಣ್ಣಿನ ಆಟ ಶುರುವಾಗಿದೆ. ಕಳೆದ ಸೀಸನ್ನಲ್ಲಿ ಈ ಆಟ ಆಡಿದಾಗಲೇ ಮನೆಯಲ್ಲಿ ಭಾರಿ ದೊಡ್ಡ ಜಗಳ ನಡೆದಿತ್ತು. ಈ ಸೀಸನ್ನಲ್ಲಿಯೂ ಸಹ ಮಣ್ಣಿನ ಆಟದಿಂದ ಭಾರಿ ದೊಡ್ಡ ಜಗಳ ಮನೆಯಲ್ಲಿ ನಡೆದಂತೆ ತೋರುತ್ತಿದೆ. ಉಗ್ರಂ ಮಂಜು ಹಾಗೂ ರಜತ್ ನಡುವೆ ಮಾತಿನ ಚಕಮಕಿ ತುಸು ಜೋರಾಗಿಯೇ ನಡೆದಿದೆ. ಎರಡು ತಂಡಗಳು ಮಣ್ಣಿನ ಉಂಡೆಗಳಿಗಾಗಿ ಮೈ ಮೇಲೆ ಬಿದ್ದು ಎಳೆದಾಡಿ, ಹೊಡೆದಾಡಿ ಜಗಳ ಮಾಡಿಕೊಂಡಿವೆ. ಕೆಲವರಂತೂ ಚೈತ್ರಾ ಕುಂದಾಪುರ ಮೇಲೂ ಬಿದ್ದು ಎಳೆದಾಡಿದ್ದಾರೆ. ಈ ವೇಳೆ ರಜತ್ ರೌಡಿ ಧ್ವನಿಯಲ್ಲಿ ಬುರುಡೆ ಒಡೆಯುತ್ತೇನೆ ಎಂದಿದ್ದು, ಉಗ್ರಂ ಮಂಜು ಆಕ್ರೋಶಕ್ಕೆ ಕಾರಣವಾಗಿದೆ. ಅದರ ಪ್ರೋಮೋ ಇಲ್ಲಿದೆ ನೋಡಿ..!