ಬಿಗ್ ಬಾಸ್ ಸೀಸನ್ 11ರಲ್ಲಿ ಈಗ ಉಳಿದಿರೋದು 12 ಸ್ಪರ್ಧಿಗಳು. 12ರಲ್ಲಿ ಈ ವಾರ ಒಬ್ಬರಲ್ಲ, ಇಬ್ಬರಿಗೆ ಗೇಟ್ಪಾಸ್ ಸಿಕ್ಕರೂ ಅಚ್ಚರಿಯಿಲ್ಲ. ಕಳೆದ ವಾರ ಇಬ್ಬರನ್ನು ಸೀಕ್ರೆಟ್ ರೂಮ್ಗೆ ಕಳುಹಿಸಿದ್ದ ಬಿಗ್ ಬಾಸ್ ಹೊಸ ಟ್ವಿಸ್ಟ್ ಕೊಟ್ಟಿತ್ತು. ಐಶ್ವರ್ಯ, ಚೈತ್ರಾ ಕುಂದಾಪುರ ಅವರಿಗೆ ಲೈಫ್ ಲೈನ್ ಸಿಕ್ಕಿದ್ದು, ಈ ವಾರದಲ್ಲಿ ನಡೆಯೋ ನಾಮಿನೇಷನ್ ಹಾಗೂ ಎಲಿಮಿನೇಷನ್ ಕುತೂಹಲಕ್ಕೆ ಕಾರಣವಾಗಿದೆ.
ಸೀಸನ್ 10ರ ವಿನ್ನರ್ ಕಾರ್ತಿಕ್ ಹಾಗೂ ಮಾಜಿ ಬಿಗ್ ಬಾಸ್ ಸ್ಪರ್ಧಿ ನಮ್ರತಾ ಅವರು ಮನೆಯ ಸದಸ್ಯರಿಗೆ ನಾಮಿನೇಷನ್ ಟಾಸ್ಕ್ ಕೊಟ್ಟಿದ್ದಾರೆ. ಕಾರ್ತಿಕ್ ಹಾಗೂ ನಮ್ರತಾ ಎಂಟ್ರಿಯಿಂದ ನಾಮಿನೇಷನ್ ಕಿಚ್ಚು ಇನ್ನೂ ಹೆಚ್ಚಾಗಿದೆ.
ಬಿಗ್ ಬಾಸ್ ಸೀಸನ್ 11ರ ಈ ವಾರದ ನಾಮಿನೇಷನ್ನಲ್ಲಿ ಕುತೂಹಲ ಕೆರಳಿಸಿರೋದು ಮೋಕ್ಷಿತಾ ಹಾಗೂ ಗೌತಮಿ ಅವರ ಜಗಳ. ರಜತ್, ತ್ರಿವಿಕ್ರಮ್, ಮಂಜು, ಧನರಾಜ್, ಹನುಮಂತು ಅವರ ಆಟ ಒಂದು ಕಡೆಯಾದ್ರೆ ಮೋಕ್ಷಿತಾ, ಗೌತಮಿ ಅವರ ಗೇಮ್ ಪ್ಲಾನ್ ವಿಭಿನ್ನವಾಗಿದೆ. ಸದ್ಯ ನಾಮಿನೇಷನ್ ಫೈಟ್ನಲ್ಲಿ ಮೋಕ್ಷಿತಾ ಮೇಲೆ ಮಸಿ ಸುರಿದಿರುವ ಗೌತಮಿ ಅವರು ತಮ್ಮ ಸೇಡಿನ ಹೋರಾಟ ಮುಂದುವರಿಸಿದ್ದಾರೆ. ನಾಮಿನೇಷನ್ ಪ್ರಕ್ರಿಯೆಯ ಜಿದ್ದಾಜಿದ್ದಿ ರೋಚಕವಾಗಿದೆ. ಕೊನೆಗೆ ಯಾರು, ಯಾರನ್ನ ಬಿಗ್ ಬಾಸ್ ಮನೆಯಿಂದ ಆಚೆ ಹೋಗುವಂತೆ ಮಾಡುತ್ತಾರೆ ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ.