ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11 ದಿನಕ್ಕೊಂದು ತಿರುವು ಪಡೆದುಕೊಂಡು ಮುನ್ನುಗ್ಗುತ್ತಿದೆ. ಈಗಾಗಲೇ ಬಿಗ್ಬಾಸ್ ಶುರುವಾಗಿ 70ದಿನ ಕಳೆದಿದೆ. ಈ ಕಳೆದ 89 ದಿನಗಳಲ್ಲಿ ಬಿಗ್ಬಾಸ್ ಮನೆಯಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಬಿಗ್ಬಾಸ್ ಶುರುವಾಗಿ ಎರಡೇ ವಾರಕ್ಕೆ ವೈರ್ಲ್ಡ್ ಕಾರ್ಡ್ ಸ್ಪರ್ಧಿ ಆಗಮನ ಆಗಿತ್ತು.
ಬಿಗ್ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಗಾಯಕ ಹನುಮಂತ ಎಂಟ್ರಿ ಕೊಟ್ಟಿದ್ದರು. ವೈಲ್ಡ್ ಕಾರ್ಡ್ ಎಂಟ್ರಿ ಆಗಮನವಾಗುತ್ತಿದ್ದಂತೆ ಮನೆಯ ಎಲ್ಲಾ ಸ್ಪರ್ಧಿಗಳು ಶಾಕ್ ಆಗಿದ್ದರು. ಬಿಗ್ಬಾಸ್ ಮನೆಗೆ ಬಂದ ಮೊದಲ ದಿನವೇ ತಮ್ಮ ಹಾಡಿನ ಮೂಲಕವೇ ಎಲ್ಲರಿಂದ ಮೆಚ್ಚುಗೆ ಪಡೆದುಕೊಂಡರು.
ಬಿಗ್ಬಾಸ್ ಮನೆಗೆ ಮೂರನೇ ವಾರಕ್ಕೆ ಬಂದಿದ್ದ ಗಾಯಕ ಹನುಮಂತ ಸದ್ಯ ಬಿಗ್ಬಾಸ್ ಮನೆಯಲ್ಲಿ ಹಾಟ್ ಟಾಪಿಕ್ ಆಗಿದ್ದಾರೆ. ನಾಮಿನೇಷನ್ ವಿಚಾರಕ್ಕೆ ರಜತ್ಗೆ ಶಾಕ್ ಕೊಟ್ಟ ಹನುಮಂತ ಇನ್ಮುಂದೆ ಆಟ ಶುರುಮಾಡ್ತೀನಿ ಅಂತ ಹೇಳಿದ್ದಾರೆ.
ಅಷ್ಟೇ ಅಲ್ಲದೆ ನಿನ್ನೆ ನಡೆದ ಎಪಿಸೋಡ್ನಲ್ಲಿ ಹನುಮಂತನಿಗೆ ತ್ರಿವಿಕ್ರಮ್ ನೇರವಾಗಿ ನೊಮಿನೇಟ್ ಮಾಡಿದ್ದಾರೆ. ನೀವು ಇನ್ನು ಎಲ್ಲರ ಜೊತೆ ಮಾತನಾಡಬೇಕು ನೀವು ಯಾವಾಗಲೂ ಧನು ಅವರ ಜೊತೆ ಇರ್ತಿರಾ ಆದ್ದರಿಂದ ನಿಮ್ಮನ್ನ ನೊಮಿನೇಟ್ ಮಾಡ್ತಿದ್ದಿನಿ ಎಂದು ತ್ರಿವಿಕ್ರಮ್ ಹನುಮಂತನಿಗೆ ಹೇಳಿದ್ದಾರೆ. ಇದಕ್ಕೆ ಹನುಮಂತು ನಾನು ಯಾರಿಗೂ ಇಲ್ಲಿ ಮೆಚ್ಚಿಸೋಕೆ ಬಂದಿಲ್ಲ ನನ್ನ ಆಟ ಜನ ಮೆಚ್ಚಕೊಂಡರೆ ಸಾಕು ಎಂದು ತ್ರಿವಿಕ್ರಮ್ಗೆ ಟಾಂಗ್ ಕೊಟ್ಟಿದ್ದಾರೆ.
ಈ ಮೂಲಕ ಮುಂದಿನ ದಿನಗಳಲ್ಲಿ ಬಿಗ್ಬಾಸ್ ಮನೆಯಲ್ಲಿ ಹನುಮಂತನ ಮತ್ತೊಂದು ಅವತಾರವನ್ನು ವೀಕ್ಷಕರು ನೋಡಲಿದ್ದಾರೆ. ಏಕೆಂದರೆ ಬಿಗ್ಬಾಸ್ ಮನೆಯಲ್ಲಿ ಎಲ್ಲರ ಜೊತೆಗೆ ತಮಾಷೆ ಮಾಡಿಕೊಂಡು, ಟಾಸ್ಕ್ಗಳ ಮೂಲಕ ವೀಕ್ಷಕರಿಗೆ ಮನರಂಜನೆ ನೀಡುತ್ತಾರೆ. ಹಾಡುಗಳ ಮೂಲಕವೇ ಬಿಗ್ಬಾಸ್ ವೀಕ್ಷಕರನ್ನು ಸೆಳೆದುಕೊಂಡಿದ್ದಾರೆ ಎಂಬೆಲ್ಲಾ ಮಾತಗಳು ಕೇಳಿ ಬಂದಿದ್ದವು. ಹೀಗಾಗಿ ಮುಂದಿನ ದಿನಗಳಲ್ಲಿ ಹನುಮಂತ ರೆಬೆಲ್ ಆಟ ಆಡ್ತಾರಾ ಅಂತ ಕಾದು ನೋಡಬೇಕಿದೆ.