ಡ್ರೋನ್ ಪ್ರತಾಪ್ ನೀರಿನೊಳಗೆ ಕೆಮಿಕಲ್ ಹಾಕಿ ಬ್ಲಾಸ್ಟ್ ಮಾಡಿರುವ ವಿಡಿಯೋ ಪರಿಸರ ಪ್ರೇಮಿಗಳ ಕಣ್ಣು ಕೆಂಪಾಗಿಸಿದೆ. ವೈಜ್ಞಾನಿಕ ಪ್ರಯೋಗದ ಹೆಸರಿನಲ್ಲಿ ಮಾಡಿರುವ vedio ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟ ಕಾರಣ ಅದು ಸಾಮಾಜಿಕವಾಗಿ ವಿರೋಧದ ಹೊರೆ ಎಳೆದುಕೊಂಡಿದೆ. ನೀರಿನೊಳಗೆ ಸೋಡಿಯಮ್ ಕೆಮಿಕಲ್ ಹಾಕಿ ಸೃಷ್ಟಿಸಿದ ಸ್ಫೋಟವು, ಬಾಂಬ್ ಬ್ಲಾಸ್ಟ್ನಂತೆ ಭಾಸವಾಗಿದ್ದು, ಪರಿಸರ ಸಂರಕ್ಷಣೆಯ ಪ್ರಾಮುಖ್ಯತೆಯನ್ನು ನಿತ್ಯ ಪ್ರಚಾರ ಮಾಡುವವರನ್ನು ಕೋಪಕ್ಕೆ ಗುರಿಮಾಡಿದೆ.
ಈ ಘಟನೆಗೆ ಸಂಬಂಧಿಸಿದಂತೆ, ಡೋನ್ ಮೂಲಕ ಪ್ರಸಿದ್ಧರಾದ ಪ್ರತಾಪ್, ಈ ವಿಡಿಯೋದಲ್ಲಿ ನೋಡುತ್ತಾ ನಕ್ಕಿದ್ದು ತೀವ್ರ ಟೀಕೆಗೆ ಗುರಿಯಾಗಿದೆ. ಮುಂಚೆ ಹಲವಾರು ವಿವಾದಗಳಿಗೆ ಕಾರಣರಾಗಿದ್ದ ಪ್ರತಾಪ್, ಬಿಗ್ ಬಾಸ್ ಮನೆಯಲ್ಲಿದ್ದಾಗ ತನ್ನ ಅಭಿಮಾನಿ ಬಳಗವನ್ನು ಹೆಚ್ಚಿಸಿಕೊಂಡಿದ್ದರು. ಆದರೆ ಈ ಘಟನೆಯಿಂದ ಅವರ ಇಮೇಜ್ ಮೇಲೆ ನೆಗಿಟಿವ್ ಆಗಿ ಪರಿಣಾಮ ಬೀರಬಹುದಾಗಿದೆ.