ಕೇರಳ : ಬೆಂಗಳೂರಿನಲ್ಲಿ ಕುದುರೆಯಲ್ಲಿ ಗ್ಲಾಂಡರ್ಸ್ ರೋಗ ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು. ಈಗ ಪಕ್ಕದ ರಾಜ್ಯ ಕೇರಳದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು, ವೇಗವಾಗಿ ಹರಡುತ್ತಿದೆ. ಕೇರಳದ ಅಲಪ್ಪುವಾ ಜಿಲ್ಲೆಯ ಎಡತ್ವ ಮತ್ತು ಚೆರುತನ ಗ್ರಾಮದಲ್ಲಿ ಸಾಕಿರುವ ಬಾತುಕೋಳಿಗಳಲ್ಲಿ ಹಕ್ಕಿ ಜ್ವರ ದೃಢಪಟ್ಟಿದೆ. ಇದನ್ನ ಅಲ್ಲಿಯ ಸ್ಥಳೀಯ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಹಕ್ಕಿ ಜ್ವರದ ಲಕ್ಷಣಗಳು ಕಂಡು ಬಂದ ಹಿನ್ನಲೆ ಮಾದರಿಗಳನ್ನು ಪರೀಕ್ಷೆಗಾಗಿ ಭೋಪಾಲ್ನ ಲ್ಯಾಬ್ಗೆ ಕಳುಹಿಸಲಾಗಿತ್ತು. ಈಗ ಪರೀಕ್ಷಾ ವರದಿ ಬಂದಿದ್ದು, ವರದಿಯಲ್ಲಿ ಏವಿಯನ್ ಇನ್ಫ್ಲುಯೆನ್ಸ (H5N1) ರೋಗ ಇದೆ ಎಂದು ದೃಢಪಟ್ಟಿದೆ.
ರಿಪೋರ್ಟ್ ಬರ್ತಿದ್ದಂತೆ ಎಚ್ಚೆತ್ತುಕೊಂಡ ಜಿಲ್ಲಾಡಳಿತ ರ್ಯಾಪಿಡ್ ಆಕ್ಷನ್ ಫೋರ್ಸ್ ತಂಡವನ್ನು ರಚಿಸಿ, ಸೂಕ್ತ ಕ್ರಮಗಳನ್ನ ಕೈಗೊಂಡಿದೆ. ಇನ್ನು ಕೇರಳದಲ್ಲಿ ಹಕ್ಕಿ ಜ್ವರ ಪತ್ತೆ ಆಗ್ತಿದ್ದಂತೆ ಕೇರಳಕ್ಕೆ ಹೊಂದಿಕೊಂಡಿರುವ ರಾಜ್ಯದ ಗಡಿಗಳಲ್ಲೂ ಹೈಅಲರ್ಟ್ ವಹಿಸಲಾಗಿದೆ.