ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ನವರು ರಾಜಕೀಯ ಮಾಡ್ತಿದ್ದಾರೆ , ಇಂತಹ ಸಣ್ಣ ಬುದ್ದಿಯ ರಾಜಕೀಯ ನಿಮಗೆ ಶೋಭೆ ತರೋದಿಲ್ಲ , ಗ್ಯಾರಂಟಿ ಬಿಟ್ಟು ಕೇವಲ ಪೆನ್ ಡ್ರೈವ್ ಪ್ರಕರಣದಲ್ಲೇ ಗೆಲ್ಲುತ್ತೇವೆ ಅನ್ನೋ ಉಮೇದಿನಲ್ಲಿದ್ದಾರೆ , ಜನ ನಿಮಗೆ ತಕ್ಕ ಪಾಠ ಕಲಿಸ್ತಾರೆ ಅಂತ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಬೆಳಗಾವಿಯ ಬಾಳೇಕುಂದ್ರಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ .
ಅಪಪ್ರಚಾರ ಮತ್ತು ಗ್ಯಾರಂಟಿಗಳ ಮೇಲೆ ಭರವಸೆ ಇಟ್ಟುಕೊಂಡು ಕಾಂಗ್ರೆಸ್ ನವರು 20ಕ್ಕೂ ಹೆಚ್ಚಿನ ಕ್ಷೇತ್ರ ಗೆಲ್ಲುವ ಭ್ರಮೆಯಲ್ಲಿದ್ದಾರೆ , ಆದರೆ ಮತದಾರರು ಇವರ ಅಪಪ್ರಚಾರಕ್ಕೆ ತಲೆ ಕೆಡಿಸಿಕೊಂಡಿಲ್ಲ , ಹೀಗಾಗಿ ಬಿಜೆಪಿ 28 ಕ್ಷೇತ್ರ ಗೆಲ್ಲುತೇವೆ ಎಂದು ತಿರುಗೇಟು ನೀಡಿದ್ದಾರೆ .