ಲೋಕಸಭಾ ಚುನಾವಣೆಯ ಕಾವು ಜೋರಾಗುತ್ತಿದೆ. ಈ ಮಧ್ಯೆ ಗರಿಗರಿ ನೋಟಿನ ಅಕ್ರಮ ವಹಿವಾಟು ಕೂಡ ಎಗ್ಗಿಲ್ಲದೆ ನಡೆಯುತ್ತಿದೆ. ತಮಿಳುನಾಡು ರಾಜಧಾನಿ ಚೆನ್ನೈನ ತಾಂಬರಮ್ ರೈಲು ನಿಲ್ದಾಣದಲ್ಲಿ, 4 ಕೋಟಿ ನಗದನ್ನ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಹಣ ಸಾಗಿಸುತ್ತಿದ್ದ ಮೂವರು ಬಿಜೆಪಿ ಕಾರ್ಯಕರ್ತರನ್ನ ಪೊಲೀಸರು ಬಂಧಿಸಿದ್ದಾರೆ. ಬಿಜೆಪಿ ಕಾರ್ಯಕರ್ತರು ಎನ್ನಲಾದ ಸತೀಶ್, ಆತನ ತಮ್ಮ ನವೀನ್ ಮತ್ತು ಕಾರ್ ಡ್ರೈವರ್ ಪೆರುಮಾಳ್ ರನ್ನ ವಶಕ್ಕೆ ಪಡೆಯಲಾಗಿದ್ದು. ಬಂಧಿತರ ಬಳಿ 6 ಬ್ಯಾಗ್ಗಳಲ್ಲಿದ್ದ 4 ಕೋಟಿ ನಗದನ್ನು ವಶಪಡಿಸಿಕೊಳ್ಳಲಾಗಿದೆ.ಈ ಮೂವರು ರೈಲಿನಲ್ಲಿ ತಿರುನಲ್ವೇಲಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ರೈಲ್ವೆ ಪೊಲೀಸರ ಕೈಯಿಗೆ ಸಿಕ್ಕಿ ಬಿದ್ದಿದ್ದಾರೆ. ಬಿಜೆಪಿ ಸಂಸದ ನೈನಾರ್ ನಾಗೇಂದ್ರನ್ ಅವರ ಸೂಚನೆಯಂತೆ ನಡೆದುಕೊಂಡಿರುವುದಾಗಿ ಈಗಾಗಲೇ ಸತೀಶ್ ತಪ್ಪೊಪ್ಪಿಕೊಂಡಿದ್ದಾನೆ.