ಬಿಜೆಪಿಯಲ್ಲಿ ಹೆಚ್ಚಾಗಿರುವ ಬಣ ಬಡಿದಾಟ ಈಗ ಇನ್ನೊಂದು ಹಂತಕ್ಕೆ ತಲುಪಿದೆ. ಬಿಜೆಪಿಯ ಹಿಂದೂ ಹುಲಿ ಎಂದು ಹೆಸರಾಗಿದ್ದ ರೆಬಲ್ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಈಗ ಬಿಜೆಪಿ ಬಿಟ್ಟು ಹೊಸ ಪಕ್ಷ ಸ್ಥಾಪನೆ ಮಾಡ್ತಾರ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಹರಿದಾಡಿತ್ತು.
ಹೊಸ ಪಕ್ಷ ಸ್ಥಾಪನೆ ಬಗ್ಗೆ ಮಾತನಾಡಿರುವ ಯತ್ನಾಳ್, ನಾನು ಎಂದಿಗೂ ಹೊಸ ಪಕ್ಷ ಕಟ್ಟೋ ಮೂರ್ಖತನ ಮಾಡಲ್ಲ, ಹೊಸ ಪಕ್ಷ ಕಟ್ಟೋವಷ್ಟು ಮೂರ್ಖರೂ ಅಲ್ಲ..ದಡ್ಡರೂ ಅಲ್ಲ, ನನಗೆ ಯಾವುದೇ ಪ್ರಾದೇಶಿಕ ಪಕ್ಷ ಕಟ್ಟುವ ಯೋಚನೆ ಇಲ್ಲ, ವಂಶ ಪರಂಪರೆಯಿಂದ ಬಿಜೆಪಿ ಪಕ್ಷ ಮುಕ್ತ ಆಗಬೇಕು ಎಂದಿದ್ದಾರೆ.
ಹೈಕಮಾಂಡ್ ಮುಂದೆ ವೈಯಕ್ತಿಕ ಬೇಡಿಕೆ ಏನೂ ಇಟ್ಟಿಲ್ಲ ಎಂದಿರುವ ಯತ್ನಾಳ್, ಯಾರು ಪಕ್ಷ ಕಟ್ಟಿ, ಸೋತು ಸುಣ್ಣವಾದವರ ಬಗ್ಗೆ ಚರ್ಚೆ ಆಗಬೇಕು, ನಮ್ಮಂಥ ದೇಶಭಕ್ತರ ಬಗ್ಗೆ ಇಷ್ಟೆಲ್ಲಾ ಚರ್ಚೆ ಆಗಬೇಕಿಲ್ಲ, ನಮಗೆ ಇರೋದು ಒಂದೇ ಆಶಾಕಿರಣ..ಅದು ಬಿಜೆಪಿ ಮಾತ್ರ ಎಂದು ದೆಹಲಿಯಲ್ಲಿ ಬಿಜೆಪಿ ಶಾಸಕ ಯತ್ನಾಳ್ ಹೇಳಿಕೆ ನೀಡಿದ್ದಾರೆ.