ಕೆಲವೊಮ್ಮೆ ನಾವು ಸೇವಿಸುವ ಆಹಾರಗಳೇ ವಿಷವಾಗುತ್ತವೆ. ಅದರಲ್ಲೂ ಸಿಹಿ ಮತ್ತು ಉಪ್ಪು ಮಿತವಾಗಿದಷ್ಟೂ ನಮ್ಮ ಆರೋಗ್ಯಕ್ಕೆ ಉತ್ತಮ. ಇವುಗಳ ಪ್ರಮಾಣ ಜಾಸ್ತಿಯಾದರೆ ಮಧುಮೇಹ, ರಕ್ತದೊತ್ತಡವನ್ನು ನಾವೇ ಆಹ್ವಾನಿಸದಂತಾಗುತ್ತದೆ. ಸಕ್ಕರೆ ಪ್ರಮಾಣವನ್ನಾದರೂ ನಿಯಂತ್ರಿಸಬಹುದು. ಆದ್ರೆ ಉಪ್ಪು ನಮ್ಮ ಆಹಾರದಲ್ಲಿ ಎಷ್ಟಿ ಅನ್ನುವುದು ಮುಖ್ಯ.
ಅಧಿಕ ಸೋಡಿಯಂ ಸೇವನೆಯು ಅಧಿಕ ರಕ್ತದೊತ್ತಡ ಮತ್ತು ಇತರ ಹೃದಯ ರಕ್ತನಾಳದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಸೋಡಿಯಂ ಸೇವನೆಯನ್ನು ಕಡಿಮೆ ಮಾಡುವುದು ರಕ್ತದೊತ್ತಡವನ್ನು ನಿಯಂತ್ರಿಸಲು ಇರುವ ಕೆಲವೊಂದು ಸರಳ ದಾರಿ ಇಲ್ಲಿವೆ
1. ಸಂಸ್ಕರಿಸಿದ ಆಹಾರಗಳನ್ನು ಖರೀದಿಸುವಾಗ ಸೋಡಿಯಂ ಎಷ್ಟಿದೆ ಅಂತಾ ತಿಳಿಯಿರಿ, ಇದಕ್ಕಾಗಿ ಲೇಬಲ್ ಓದುವ ಅಭ್ಯಾಸ ಮಾಡಿಕೊಳ್ಳಿ
2. ಮನೆ ಅಡುಗೆಯಲ್ಲಿ ಉಪ್ಪಿನ ಪ್ರಮಾಣವನ್ನು ಕಡಿಮೆ ಮಾಡಬಹುದು
3. ರೆಡಿಮೇಡ್ / ಸಂಸ್ಕರಿಸಿದ ಆಹಾರಗಳಿಂದ ದೂರವಿರಿ
4. ತಾಜಾ ಹಣ್ಣು ತರಕಾರಿ, ಮಾಂಸ ಮತ್ತು ಧಾನ್ಯಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಿ
5. ಪ್ಯಾಕ್ ಮಾಡಿರುವ ತರಕಾರಿ, ಮಾಂಸ, ಹಣ್ಣುಗಳನ್ನು ಬಳಸುವ ಮುನ್ನ ನೀರಿನಲ್ಲಿ ತೊಳೆಯಿರಿ
6. ಬೀದಿ ಬದಿ, ಹೊಟೇಲ್, ರೆಸ್ಟೋರೆಂಟ್ಗಳ ಆಹಾರವನ್ನು ಕಡಿಮೆ ಮಾಡಿ