ರಾಜ್ಯದಲ್ಲಿ ಒಂದೆಡೆ ಬಿಸಿಲಿನ ಕಾವು, ದಿನೇ ದಿನೇ ತಾಪಮಾನ ಹೆಚ್ಚುತ್ತಿದೆ. ಶಾಖದ ಶಾಕ್ ಮಧ್ಯೆ ಕರ್ನಾಟಕಕ್ಕೆ ಮನುಷ್ಯನ ಜೀವ ಉಳಿಸುವ “ರಕ್ತಕ್ಕೂ ಬರಗಾಲ” ಬಂದಿದೆ. ಹೌದು…ರಾಜ್ಯದಲ್ಲಿ ಪ್ರತಿನಿತ್ಯ ಸಾವಿರಾರು ಯೂನಿಟ್ ರಕ್ತದ ಅಭಾವ ಎದುರಾಗ್ತಿದೆ. 43 ಸರ್ಕಾರಿ ಮತ್ತು 200ಕ್ಕೂ ಹೆಚ್ಚು ಸರ್ಕಾರೇತರ ರಕ್ತನಿಧಿ ಕೇಂದ್ರಗಳಿವೆ, ಆದರೆ ಕಳೆದ ಒಂದು ತಿಂಗಳಿಂದ “ನೆತ್ತರ ನೆರವು” ಇಲ್ಲದೆ ಕರ್ನಾಟಕ ಅಕ್ಷರಶಃ ಕಂಗಾಲಾಗಿದೆ. ಲೋಕಸಭಾ ಚುನಾವಣೆ ಘೋಷಣೆಯಾದ ಬಳಿಕ ರಕ್ತದ ಅಭಾವ ಹೆಚ್ಚಾಗುತಲೇ ಇದೆ.
] ಪ್ರತಿ ಜಿಲ್ಲೆಯಲ್ಲಿ ಕನಿಷ್ಠ 100 ಯೂನಿಟ್ ನಷ್ಟು ರಕ್ತದ ಕೊರತೆ ಆಗುತ್ತಿದೆ. ರಾಜ್ಯದಲ್ಲಿ ಪ್ರತಿದಿನ 3 ಸಾವಿರರಕ್ಕೂ ಅಧಿಕ ಯೂನಿಟ್ ರಕ್ತದ ಅಭಾವ ಇದೆ. ಬಿಸಿಲಿನ ತಾಪ, ಕಾಲೇಜುಗಳಿಗೆ ರಜೆ, ಪರೀಕ್ಷೆ ಇರುವ ಹಿನ್ನೆಲೆಯಲ್ಲಿ ರಕ್ತದಾನಿಗಳ ಕೊರತೆಗೆ ಮೂಲ ಕಾರಣವಾಗಿದೆ. ಸ್ವಯಂಪ್ರೇರಿತವಾಗಿ ರಕ್ತದಾನ ಮಾಡುವರ ಸಂಖ್ಯೆ ಕಡಿಮೆ ಆದ ಹಿನ್ನಲೆ ರಕ್ತದ ಅಭಾವ ಹೆಚ್ಚಾಗುತ್ತಿದೆ.