ಇಂಧನ ದರದ ದಿನನಿತ್ಯದ ಬದಲಾವಣೆಗಳು ಜನಸಾಮಾನ್ಯರ ಜೀವನಶೈಲಿಗೆ ಬಹುಮಟ್ಟಿಗೆ ಪರಿಣಾಮ ಬೀರುತ್ತವೆ. ಇತ್ತೀಚಿನ ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಏರಿಕೆಗಿಂತಲೂ ಹೆಚ್ಚು ಗಮನ ಸೆಳೆಯುತ್ತಿರುವುದು ಪೆಟ್ರೋಲ್ ಮತ್ತು ಡೀಸೆಲ್ ದರಗಳು ಏರಿಳಿತವಾಗುತ್ತವೆ. ನಿತ್ಯ ಬಳಕೆಯ ಇಂಧನವಾದ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಕಾಣಿಸುತ್ತಿರುವ ಸಣ್ಣಪುಟ್ಟ ಬದಲಾವಣೆಗಳು ಕೂಡ ವಾಹನ ಸವಾರರು ಹಾಗೂ ಸಾರಿಗೆ ವ್ಯಾಪಾರಿಗಳಿಗೆ ತಲೆನೋವು ಉಂಟು ಮಾಡಿದೆ.
ಇಂದು ದೇಶದ ಪ್ರಮುಖ ಮಹಾನಗರಗಳ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಗಮನಿಸಿದರೆ, ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ ರೂ.94.77 ಹಾಗೂ ಡೀಸೆಲ್ ದರ ರೂ.87.67 ಆಗಿದೆ. ಮುಂಬೈನಲ್ಲಿ ಪೆಟ್ರೋಲ್ ದರ ರೂ.103.50 ಆಗಿದ್ದು, ಡೀಸೆಲ್ ದರ ರೂ.90.03 ಆಗಿದೆ. ಕೊಲ್ಕತ್ತಾದಲ್ಲಿ ಪೆಟ್ರೋಲ್ ರೂ.105.01 ಹಾಗೂ ಡೀಸೆಲ್ ರೂ.91.82 ಆಗಿದೆ. ಚೆನ್ನೈನಲ್ಲಿ ಪೆಟ್ರೋಲ್ ರೂ.101.03 ಮತ್ತು ಡೀಸೆಲ್ ರೂ.92.61 ಎಂಬ ದರದಲ್ಲಿ ಮಾರಾಟವಾಗುತ್ತಿದೆ.
ಬೆಂಗಳೂರು ನಗರದಲ್ಲಿ ಪೆಟ್ರೋಲ್ ದರ ರೂ.102.92 ಹಾಗೂ ಡೀಸೆಲ್ ದರ ರೂ.90.99 ಆಗಿದ್ದು, ಈ ದರವು ಸ್ಥಿರವಾಗಿದೆ. ಆದರೆ ಕರ್ನಾಟಕದ ಇತರೆ ಜಿಲ್ಲೆಗಳ ಇಂಧನ ದರದಲ್ಲಿ ಸ್ವಲ್ಪ ಮಟ್ಟದ ಏರಿಕೆ ಹಾಗೂ ಇಳಿಕೆ ಕಂಡು ಬಂದಿದೆ.
ಕರ್ನಾಟಕದ ಪ್ರಮುಖ ಜಿಲ್ಲೆಗಳ ಇಂಧನ ದರ ಹೀಗಿದೆ:
-
ಬೆಂಗಳೂರಿನಲ್ಲಿ ಪೆಟ್ರೋಲ್ ರೂ.102.92 ಮತ್ತು ಡೀಸೆಲ್ ರೂ.90.99.
-
ಮಂಡ್ಯದಲ್ಲಿ ಪೆಟ್ರೋಲ್ ರೂ.102.92 (46 ಪೈಸೆ ಇಳಿಕೆ) ಮತ್ತು ಡೀಸೆಲ್ ರೂ.90.99.
-
ಮೈಸೂರು – ಪೆಟ್ರೋಲ್ ರೂ.102.90 (9 ಪೈಸೆ ಏರಿಕೆ), ಡೀಸೆಲ್ ರೂ.90.97
-
ಬಳ್ಳಾರಿ – ಪೆಟ್ರೋಲ್ ರೂ.104.09 (9 ಪೈಸೆ ಏರಿಕೆ), ಡೀಸೆಲ್ ರೂ.92.22
-
ಕೊಪ್ಪಳ – ಪೆಟ್ರೋಲ್ ರೂ.104.08 (3 ಪೈಸೆ ಏರಿಕೆ), ಡೀಸೆಲ್ ರೂ.92.23
-
ಶಿವಮೊಗ್ಗ – ಪೆಟ್ರೋಲ್ ರೂ.103.90 (2 ಪೈಸೆ ಇಳಿಕೆ), ಡೀಸೆಲ್ ರೂ.91.87
-
ತುಮಕೂರು – ಪೆಟ್ರೋಲ್ ರೂ.103.88 (58 ಪೈಸೆ ಏರಿಕೆ), ಡೀಸೆಲ್ ರೂ.91.88
-
ಉಡುಪಿ – ಪೆಟ್ರೋಲ್ ರೂ.102.34 (56 ಪೈಸೆ ಇಳಿಕೆ), ಡೀಸೆಲ್ ರೂ.90.41
-
ಉತ್ತರ ಕನ್ನಡ – ಪೆಟ್ರೋಲ್ ರೂ.103.80 (81 ಪೈಸೆ ಏರಿಕೆ), ಡೀಸೆಲ್ ರೂ.91.77
ಇನ್ನು ಕೆಲವು ಜಿಲ್ಲೆಗಳಲ್ಲಿ ಇಂಧನದ ದರ ಸ್ಥಿರವಾಗಿದ್ದರೆ, ಕೆಲವೊಂದರಲ್ಲಿ ಪೈಸೆಗಳ ಮಟ್ಟಿನಲ್ಲಿ ಬದಲಾವಣೆ ಕಂಡು ಬಂದಿದೆ. ಉದಾಹರಣೆಗೆ, ವಿಜಯನಗರ, ರಾಯಚೂರು, ಕೊಡಗು ಜಿಲ್ಲೆಗಳಲ್ಲಿ ಪೆಟ್ರೋಲ್ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ಇದೇ ವೇಳೆ ಚಾಮರಾಜನಗರ, ಬೀದರ್, ಕಲಬುರಗಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪೆಟ್ರೋಲ್ ದರ ಇಳಿಕೆಯಾಗಿದೆ.
ಇಂಧನದ ಈ ಬದಲಾವಣೆಗಳ ಪೈಕಿ ಬಹುತೇಕವು ಪೈಸೆಗಳ ಮಟ್ಟದಲ್ಲಿ ಇದ್ದರೂ, ತೈಲ ಕಂಪನಿಗಳಿಂದ ದಿನನಿತ್ಯ ಸಣ್ಣ ಬದಲಾವಣೆಗಳು ಬರುತ್ತಿರುವುದು ಸ್ಪಷ್ಟವಾಗಿದೆ. ಇವುಗಳು ದೂರದ ಪ್ರಯಾಣ, ವ್ಯಾಪಾರ, ಸಾರಿಗೆ ಖರ್ಚುಗಳು, ದಿನಸಿ ಸಾಮಗ್ರಿಗಳ ಬೆಲೆಗೂ ಪರಿಣಾಮ ಬೀರುತ್ತವೆ.
ಪೆಟ್ರೋಲ್ ಮತ್ತು ಡೀಸೆಲ್ ನಂತಹ ಇಂಧನಗಳು ನವೀಕರಿಸಲಾಗದ ಶಕ್ತಿಯ ರೂಪಗಳಾಗಿದ್ದು, ಅವುಗಳ ಜವಾಬ್ದಾರಿಯುತ ಬಳಕೆ ಅತ್ಯಂತ ಅವಶ್ಯಕವಾಗಿದೆ. ಮುಂದಿನ ದಿನಗಳಲ್ಲಿ ಪರಿಸರ ಸ್ನೇಹಿ ಇಂಧನದತ್ತ ಜನರು ಮುಖಮಾಡುವುದು ಅನಿವಾರ್ಯವಾಗಲಿದೆ. ಇದರಿಂದ ನೀವೂ ಹಣದ ಉಳಿತಾಯ ಮಾಡಬಹುದು, ಪರಿಸರಕ್ಕೂ ಕೊಡುಗೆ ನೀಡಬಹುದು.