ಕೇಂದ್ರ ಸರ್ಕಾರವು 2025ರ ಫೆಬ್ರುವರಿ 1ರಂದು ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿ ಆದಾಯ ತೆರಿಗೆಯ ಸ್ಲ್ಯಾಬ್ ದರಗಳನ್ನು ಪರಿಷ್ಕರಿಸಿ ಸಂಬಳದಾರರಿಗೆ ಭರ್ಜರಿ ಸಿಹಿ ಸುದ್ದಿಯನ್ನು ನೀಡಿದೆ. ಏಪ್ರಿಲ್ 1, 2025ರಿಂದ ಜಾರಿಗೆ ಬಂದಿರುವ ಹೊಸ ಟ್ಯಾಕ್ಸ್ ರಿಜೈಮ್‌ನಿಂದ ನಿಮ್ಮ ಕೈಗೆ ಸಿಗುವ ಸಂಬಳದಲ್ಲಿ ಗಣನೀಯ ಏರಿಕೆಯಾಗುವ ಸಾಧ್ಯತೆಯಿದೆ. ಹೇಗೆ ಎಂಬುದನ್ನು ವಿವರವಾಗಿ ತಿಳಿಯಿರಿ.
ಹೊಸ ಟ್ಯಾಕ್ಸ್ ಸ್ಲ್ಯಾಬ್ ದರಗಳು (2025-26)
2025-26ರ ಆರ್ಥಿಕ ವರ್ಷಕ್ಕೆ ಅನ್ವಯವಾಗುವ ಪರಿಷ್ಕೃತ ಆದಾಯ ತೆರಿಗೆ ದರಗಳು ಈ ಕೆಳಗಿನಂತಿವೆ:
ಆದಾಯದ ಮಿತಿ (ರೂ.) | ತೆರಿಗೆ ದರ (%) |
---|---|
4 ಲಕ್ಷದವರೆಗೆ | ತೆರಿಗೆ ಇಲ್ಲ |
4-8 ಲಕ್ಷ | 5% |
12-16 ಲಕ್ಷ | 15% |
16-20 ಲಕ್ಷ | 20% |
20-24 ಲಕ್ಷ | 25% |
24 ಲಕ್ಷಕ್ಕಿಂತ ಹೆಚ್ಚು | 30% |
12 ಲಕ್ಷದವರೆಗೆ ತೆರಿಗೆ ರಿಬೇಟ್!
ಹೊಸ ಟ್ಯಾಕ್ಸ್ ರಿಜೈಮ್‌ನಲ್ಲಿ 12 ಲಕ್ಷ ರೂಪಾಯಿಗಳವರೆಗಿನ ಆದಾಯಕ್ಕೆ ತೆರಿಗೆ ರಿಬೇಟ್ ಲಭ್ಯವಿದೆ. ಅಂದರೆ, ಈ ಮೊತ್ತದ ಆದಾಯಕ್ಕೆ ಯಾವುದೇ ತೆರಿಗೆ ಇರುವುದಿಲ್ಲ. ಇದರ ಜೊತೆಗೆ, ಸಂಬಳದಾರರಿಗೆ 75,000 ರೂಪಾಯಿಗಳ ಸ್ಟ್ಯಾಂಡರ್ಡ್ ಡಿಡಕ್ಷನ್ ಸೌಲಭ್ಯವೂ ಇದೆ. ಒಟ್ಟಾರೆಯಾಗಿ, ನಿಮ್ಮ ವಾರ್ಷಿಕ ಸಂಬಳ 12,75,000 ರೂಪಾಯಿಗಳವರೆಗೆ ಇದ್ದರೆ ಯಾವುದೇ ತೆರಿಗೆ ಬಾಧ್ಯತೆ ಇರುವುದಿಲ್ಲ.
ನಿಮ್ಮ ಸಂಬಳದಲ್ಲಿ ಎಷ್ಟು ಉಳಿತಾಯ?
ಹೊಸ ಟ್ಯಾಕ್ಸ್ ರಿಜೈಮ್‌ನಿಂದ ಸಂಬಳದಾರರಿಗೆ ಗಣನೀಯ ತೆರಿಗೆ ಉಳಿತಾಯವಾಗಲಿದೆ. ಕೆಲವು ಉದಾಹರಣೆಗಳ ಮೂಲಕ ಇದನ್ನು ಅರ್ಥಮಾಡಿಕೊಳ್ಳೋಣ:
- ವಾರ್ಷಿಕ ಸಂಬಳ 12 ಲಕ್ಷ ರೂ: ಹಿಂದಿನ ಟ್ಯಾಕ್ಸ್ ರಿಜೈಮ್ಗೆ ಹೋಲಿಸಿದರೆ, ಹೊಸ ರಿಜೈಮ್‌ನಲ್ಲಿ ವರ್ಷಕ್ಕೆ 80,000 ರೂ ತೆರಿಗೆ ಉಳಿತಾಯವಾಗುತ್ತದೆ. ಅಂದರೆ, ಮಾಸಿಕ ಸಂಬಳದಲ್ಲಿ 6,650 ರೂ ಹೆಚ್ಚುವರಿಯಾಗಿ ಕೈಗೆ ಸಿಗುತ್ತದೆ.
- ವಾರ್ಷಿಕ ಸಂಬಳ 20 ಲಕ್ಷ ರೂ: ವರ್ಷಕ್ಕೆ 90,000 ರೂ ತೆರಿಗೆ ಉಳಿತಾಯವಾಗುತ್ತದೆ. ಇದರಿಂದ ಮಾಸಿಕವಾಗಿ 7,500 ರೂ ಹೆಚ್ಚುವರಿಯಾಗಿ ಉಳಿಯುತ್ತದೆ.
- ವಾರ್ಷಿಕ ಸಂಬಳ 25 ಲಕ್ಷ ರೂ: ವರ್ಷಕ್ಕೆ 1.10 ಲಕ್ಷ ರೂ ತೆರಿಗೆ ಉಳಿತಾಯವಾಗುತ್ತದೆ. ಇದರಿಂದ ಮಾಸಿಕವಾಗಿ 9,150 ರೂ ಹೆಚ್ಚುವರಿಯಾಗಿ ಕೈಗೆ ಸಿಗುತ್ತದೆ.
ಕಡಿಮೆ ಟಿಡಿಎಸ್ ಕಡಿತ, ಹೆಚ್ಚು ಸಂಬಳ
ಹೊಸ ಟ್ಯಾಕ್ಸ್ ಸ್ಲ್ಯಾಬ್ ದರಗಳಿಂದಾಗಿ ಕಂಪನಿಗಳು ಉದ್ಯೋಗಿಗಳ ಸಂಬಳದಿಂದ ಕಡಿಮೆ ಟಿಡಿಎಸ್ (ಟ್ಯಾಕ್ಸ್ ಡಿಡಕ್ಟೆಡ್ ಅಟ್ ಸೋರ್ಸ್) ಕಡಿತಗೊಳಿಸುತ್ತವೆ. ಇದರಿಂದ ನಿಮ್ಮ ಕೈಗೆ ಸಿಗುವ ಮಾಸಿಕ ಸಂಬಳದಲ್ಲಿ ಗಣನೀಯ ಏರಿಕೆಯಾಗುತ್ತದೆ.
ಹೊಸ ಟ್ಯಾಕ್ಸ್ ರಿಜೈಮ್‌ನಿಂದ ಸಂಬಳದಾರರು ವರ್ಷಕ್ಕೆ 1,10,000 ರೂಪಾಯಿಗಳವರೆಗೆ ತೆರಿಗೆ ಉಳಿತಾಯ ಮಾಡಬಹುದು. ಈ ಸೌಲಭ್ಯವು ಸಂಬಳದಾರರಿಗೆ ಆರ್ಥಿಕ ಒತ್ತಡವನ್ನು ಕಡಿಮೆ ಮಾಡಿ, ಹೆಚ್ಚಿನ ಉಳಿತಾಯ ಅಥವಾ ಹೂಡಿಕೆಗೆ ಅವಕಾಶ ನೀಡುತ್ತದೆ. ಈ ಬದಲಾವಣೆಯಿಂದ ನಿಮ್ಮ ಆರ್ಥಿಕ ಯೋಜನೆಗಳಿಗೆ ಹೆಚ್ಚಿನ ಬಲ ದೊರೆಯುವುದರಲ್ಲಿ ಸಂಶಯವಿಲ್ಲ.