ಬೆಂಗಳೂರು: ಬೆಂಗಳೂರಿನಲ್ಲಿ ಇಂದಿನ (ಮಾರ್ಚ್ 8) ಪೆಟ್ರೋಲ್ ದರ ಪ್ರತಿ ಲೀಟರ್ ₹102.92 ಆಗಿದ್ದು, ಡೀಸೆಲ್ ಬೆಲೆ ₹88.99 ಇದೆ. ಇಂಧನ ದರದಲ್ಲಿ ಇತ್ತೀಚೆಗೆ ಸ್ಥಿರತೆ ಕಂಡುಬಂದಿದ್ದು, ಮುಂದಿನ ದಿನಗಳಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಯುವ ನಿರೀಕ್ಷೆ ಇದೆ. ಇತರ ಮಹಾನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳ ಬಗ್ಗೆ ತಿಳಿಯಿರಿ.
ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ:
- ನವದೆಹಲಿ: ಪೆಟ್ರೋಲ್ ₹94.77 | ಡೀಸೆಲ್ ₹87.67
- ಚೆನ್ನೈ: ಪೆಟ್ರೋಲ್ ₹100.80 | ಡೀಸೆಲ್ ₹92.39
- ಮುಂಬೈ: ಪೆಟ್ರೋಲ್ ₹103.50 | ಡೀಸೆಲ್ ₹90.03
- ಕೋಲ್ಕತ್ತಾ: ಪೆಟ್ರೋಲ್ ₹103.50 | ಡೀಸೆಲ್ ₹90.03
ಬೆಲೆ ಇಳಿಕೆಯ ಸಾಧ್ಯತೆ:
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಮುಂದಿನ ದಿನಗಳಲ್ಲಿ ಕುಸಿಯಲಿವೆ ಎಂಬ ತಜ್ಞರ ಅಂದಾಜು ರಿಟೇಲ್ ದರಗಳ ಮೇಲೂ ಪರಿಣಾಮ ಬೀರಬಹುದು. ಹೀಗಾಗಿ, ಪೆಟ್ರೋಲ್-ಡೀಸೆಲ್ ಬೆಲೆಗಳಲ್ಲಿ ಸ್ವಲ್ಪ ಇಳಿಕೆ ಆಗುವ ಸಾಧ್ಯತೆ ಇದೆ ಎಂದು ವರದಿಗಳೂ ಹೇಳಿವೆ. ತೈಲ ಸುಂಕ ಸಮರ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯ ಪರಿಸ್ಥಿತಿಗಳು ಭಾರತದ ರಿಟೇಲ್ ದರಗಳನ್ನು ನೇರವಾಗಿ ಪ್ರಭಾವಿಸುತ್ತವೆ.