ಯುವಕನೊಬ್ಬ ವ್ಹಿಲಿಂಗ್ ಮಾಡುತ್ತ ಜಲಮಂಡಳಿ ತೋಡಿದ್ದ ಗುಂಡಿಯಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ. ಇನ್ನು ಇಬ್ಬರು ಯುವಕರಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ನಿನ್ನೆ ರಾತ್ರಿ ಕೆಂಗೇರಿ ಬಳಿಯ ಕೊಮ್ಮಘಟ್ಟ ಸರ್ಕಲ್ನಲ್ಲಿ ಘಟನೆ ನಡೆದಿದೆ. ಸದ್ದಾಂ ಪಾಷಾ ಮೃತ ದುರ್ದೈವಿ, ಉಮ್ರಾನ್ ಪಾಷಾ ಮತ್ತು ಮುಬಾರಕ್ ಪಾಷಾ ಗಂಭೀರವಾಗಿ ಗಾಯಗೊಂಡಿದ್ದಾರೆ.
ಜಗಜೀವನರಾಂ ನಗರದ ನಿವಾಸಿಗಳಾದ ಇವರು ಒಂದೇ ಸ್ಕೂಟರಿನಲ್ಲಿ ಸಂಚರಿಸುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಜಲ ಮಂಡಳಿಯು ನೀರಿನ ಪೈಪ್ ಅಳವಡಿಸಲು ಗುಂಡಿ ತೋಡಲಾಗಿತ್ತು. ಕೊಮ್ಮಘಟ್ಟ ಸರ್ಕಲ್ ಬಳಿ ಬರುವಾಗ ಬ್ಯಾರಿಕೇಡ್ ನಡುವಿನ ಸಣ್ಣ ಜಾಗದಲ್ಲಿ ವೇಗವಾಗಿ ದ್ವಿಚಕ್ರ ವಾಹನ ಚಲಾಯಿಸಿ ಗುಂಡಿಯೊಳಗೆ ಬಿದಿದ್ದಾರೆ. ಇದರ ಪರಿಣಾಮ ಸವಾರ ಸದ್ದಾಂ ಪಾಷಾ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾನೆ. ಕೂಡಲೇ ನೆರವಿಗೆ ಆಗಮಿಸಿದ ಸ್ಥಳೀಯರು ಗಾಯಾಳುಗಳನ್ನು ಗುಂಡಿಯಿಂದ ಮೇಲಕ್ಕೆ ಎತ್ತಿ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ.