ಕಾಂಗ್ರೆಸ್ ಸರ್ಕಾರದ ಅಸ್ಥಿರ ಗ್ಯಾರಂಟಿಗಳ ಯೋಜನೆಗಳ ಅಸಲಿ ಬಂಡವಾಳ ಒಂದೊಂದಾಗಿ ಬಯಲಾಗುತ್ತಿವೆ ಅಂತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಿಡಿಕಾರಿದ್ದಾರೆ. ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿ.ವೈ. ವಿಜಯೇಂದ್ರ, ‘ಯುವನಿಧಿ ಯೋಜನೆಗೆ, ಶೇ 46.65 ರಷ್ಟು ಯುವಜನರು ಅನರ್ಹರು’ ಎಂಬ ಅವೈಜ್ಞಾನಿಕ ಸಮೀಕ್ಷಾ ವರದಿ ಬಯಲಾಗಿದೆ. ಕಾಂಗ್ರೆಸ್ ನಂಬಿ ಮತ ನೀಡಿದ್ದ ರಾಜ್ಯದ ನಿರುದ್ಯೋಗಿ ಯುವಜನರಿಗೆ ಆಕಾಶದಲ್ಲಿ ನಕ್ಷತ್ರ ತೋರಿಸುವ ಆಟವಾಡುತ್ತಿದ್ದಾರೆ. ಯುವ ಸಮುದಾಯದ ನಡುವೆ ಸುಳ್ಳಿನ ಆಮಿಷವನ್ನೊಡ್ಡಿ ಮತ ಪಡೆದು ಈಗ ಅದೇ ಯುವ ಸಮುದಾಯದ ಕಣ್ಣಿಗೆ ಮಣ್ಣೆರಚಿರುವ ಕಾಂಗ್ರೆಸ್ ಸರ್ಕಾರಕ್ಕೆ ಈ ಚುನಾವಣೆಯಲ್ಲಿ ಯುವ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ. ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.