ಗಂಡ ಹೆಂಡತಿ ಜಗಳ ಉಂಡು ಮಲಗೋವರೆಗೂ ಅನ್ನೊ ಮಾತಿದೆ. ಆದರೆ ಇಲ್ಲೊಂದರ ಕೇಸ್ ನಲ್ಲಿ, ಈಗ ಪತಿ-ಪತ್ನಿಯ ಜಗಳ ಇಡೀ ಜಗತ್ತಿಗೆ ಗೊತ್ತಾಗೋ ರೀತಿ ಮಾಡಿಕೊಂಡಿದ್ದಾರೆ. ಇಲ್ಲೊಬ್ಬ ಭೂಪ ತನ್ನ ಹೆಂಡತಿಯನ್ನೇ ಕಾಲ್ ಗರ್ಲ್ ಅಂತ ಬಿಂಬಿಸುವ ಮಟ್ಟಕ್ಕೆ ಹೋಗಿದ್ದಾನೆ. ಜಸ್ಟ್ ಹೇಳೋದು ಮಾತ್ರವಲ್ಲ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಶೇರ್ ಮಾಡಿ ವಿಕೃತಿ ಮೆರೆದಿದ್ದಾನೆ. ಹೌದು ಹೆಂಡತಿ ಡಿವೋರ್ಸ್ಗೆ ಕೊಡುವುದಕ್ಕೆ ಮುಂದಾದಾಗ ಕೋಪಗೊಂಡ ಗಂಡ ಸಾಮಾಜಿಕ ಜಾಲತಾಣಗಳಲ್ಲಿ ಕಾಲ್ಗರ್ಲ್ ಬೇಕಾದರೆ ಸಂಪಕಿಸಿ ಅಂತ ಫೋನ್ ನಂಬರ್ ಹಾಕಿದ್ದಾನೆ.
![](https://guaranteenews.com/wp-content/uploads/2024/04/BNG_NANDINI_LAYOUT.jpg)
ಫೋಟೋ ಹಾಕಿ ಪೋಸ್ಟ್ ಶೇರ್ ಮಾಡಿರುವ ಘಟನೆ ನಂದಿನಿ ಲೇಔಟ್ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕರಿ ಸತ್ಯನಾರಾಯಣ ರೆಡ್ಡಿ ಎನ್ನುವ ವ್ಯಕ್ತಿಯು ಕಲಾಶಶಿ ಎಂಬ ಫೇಸ್ಬುಕ್ ಪೇಜ್ ಕ್ರಿಯೇಟ್ ಮಾಡಿ ತನ್ನ ಹೆಂಡತಿಯ ಫೋನ್ ನಂಬರ್ ಮತ್ತು ಫೋಟೋ ಶೇರ್ ಮಾಡಿ ಕಾಲ್ಗರ್ಲ್ ಬೇಕಿದ್ರೆ ಕರೆ ಮಾಡಿ ಅಂತಾ ಫೋಸ್ಟ್ ಶೇರ್ ಮಾಡಿದ್ದಾನೆ. ಇದನ್ನನೋಡಿದ ಮೇಲೆ ಈತನ ಹೆಂಡತಿಗೆ ನಿರಂತರ ಫೋನ್ ಕಾಲ್ಸ್ ಬರಲು ಪ್ರಾರಂಭಿಸಿವೆ. ಸದ್ಯ ಈ ಘನಕಾರ್ಯ ಮಾಡಿದ ಪತಿರಾಯ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ. ಈ ಸಂಬಂಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ತನಿಖೆ ಮುಂದುವರೆಸಿದ್ದಾರೆ.