ಗರ್ಭಿಣಿಯರಿಗೆ ಬಯಕೆ ಇರೋದು ಸಾಮಾನ್ಯ…ಸಿಹಿ-ಹುಳಿ ತಿನ್ನೋರು ಒಂದ್ ಕಡೆ ಆದ್ರೆ, ಬಗೆಬಗೆಯ ಭೋಜನ ತಿನ್ನೋರು ಇನ್ನೊಂದ್ ಕಡೆ, ಆದ್ರೆ ನಾವ್ ಹೇಳಲು ಹೊರಟಿರುವ ಗರ್ಭಿಣಿಯ ಬಯಕೆಯೇ ವಿಭಿನ್ನ. ಆ ಒಂದ್ ಬಯಕೆ ಇವತ್ತು ಕಣ್ಣೀರಾಗಿ ಮಾರ್ಪಾಡಾಗಿದೆ. ಹೌದು ತಲೆ ಅಲ್ಲಿ ಕೂದಲಿಲ್ಲ, ತಲೆ ಕೂದಲು ಉದುರುತ್ತೆ ಅಂತ ಚಿಂತೆ ಮಾಡೋರ ಮಧ್ಯೆ, ಇಲ್ಲೊಂದು ಕಥೆ ಫುಲ್ ಡಿಫರೆಂಟ್. ಮನುಷ್ಯರಿಗೆ ದೇಹದ ಕೆಲವು ಭಾಗಗಳಲ್ಲಿ ಕೂದಲು ಬೆಳೆಯುವುದು ಸಾಮಾನ್ಯ. ಆದ್ರೆ ಇಲ್ಲೊಂದು ಮಗುವಿಗೆ ಮೈ ಹಾಗೂ ಮುಖದ ತುಂಬೆಲ್ಲಾ ದಟ್ಟವಾದ ಕೂದಲು ಬೆಳೆದಿದ್ದು, ಗರ್ಭಿಣಿಯಾಗಿದ್ದಾಗ ಮಗುವಿನ ತಾಯಿ ಬೆಕ್ಕಿನ ಮಾಂಸವನ್ನು ತಿಂದಿದ್ದೇ ಇದಕ್ಕೆ ಕಾರಣ ಅಂತ ಸ್ವತಃ ತಾಯಿಯೆ ಹೇಳಿಕೊಂಡಿದ್ದಾಳೆ. ಇನ್ನು ಈ ಘಟನೆ ಫಿಲಿಪಿನ್ಸ್ ಅಲ್ಲಿ ನಡೆದಿದ್ದು, ಇಲ್ಲಿನ ಜರೆನ್ ಎಂಬ ಎರಡು ವರ್ಷದ ಬಾಲಕ ಮುಖದ ತುಂಬಾ ದಟ್ಟವಾದ ಕೂದಲುಗಳನ್ನು ಹೊಂದಿದ್ದಾನೆ.
ಇದಕ್ಕೆ ಕಾರಣ “ವೆರ್ವುಲ್ಫ್ ಸಿಂಡ್ರೋಮ್ʼ. ಈ ಸಮಸ್ಯೆಯಿಂದ ಬಳಲುತ್ತಿರುವವರಿಗೆ ದೇಹದ ತುಂಬ ಕೂದಲು ಬೆಳೆಯುತ್ತದೆ. ಆದರೆ ನನ್ನ ಮಗನ ಈ ಸ್ಥಿತಿಗೆ ಗರ್ಭಿಣಿಯಾಗಿದ್ದಾಗ ನಾನು ಕಾಡು ಬೆಕ್ಕಿನ ಮಾಂಸವನ್ನು ತಿಂದಿದ್ದೇ ಕಾರಣ ಎಂದು ಜರೆನ್ ನ ತಾಯಿ ಅಲ್ಮಾ ಗಮೊಂಗನ್ ಅಳಲನ್ನ ತೋಡಿಕೊಂಡಿದ್ದಾರೆ. ಗರ್ಭಿಣಿಯಾಗಿದ್ದಾಗ ಅಲ್ಮಾ ಅವರಿಗೆ ಕಾಡು ಬೆಕ್ಕಿನ ಮಾಂಸವನ್ನು ತಿನ್ನುವ ಬಯಕೆ ಆಗಿತ್ತಂತೆ , ಹಾಗಾಗಿ ಆಕೆ ಹಳ್ಳಿಯವರಿಗೆ ಹೇಳಿ ಕಾಡು ಬೆಕ್ಕಿನ ಮಾಂಸವನ್ನು ತರಿಸಿ, ಅದನ್ನು ಅಡುಗೆ ಮಾಡಿ ತಿಂದು, ತನ್ನ ಗರ್ಭಿಣಿ ಬಯಕೆಯನ್ನು ಈಡೇರಿಸಿಕೊಂಡಿದ್ದಳಂತೆ.
ಈ ಕಾಡು ಬೆಕ್ಕಿನ ಮಾಂಸವನ್ನು ತಿಂದ ಕಾರಣ ನನ್ನ ಮಗನಿಗೆ ಶಾಪ ತಟ್ಟಿದೆ, ಅದರಿಂದ ಮಗುವಿನ ಮೈ ತುಂಬಾ ಕೂದಲು ಬೆಳೆದಿದೆ ಎಂದು ಅಲ್ಮಾ ತನ್ನನ್ನು ತಾನು ವಿಷಾಧಿಸಿದ್ದಾರೆ. ಆದರೆ ಈ ಮಗು ವೆರ್ ವುಲ್ಫ್ ಅಥವಾ ಹೈಪರ್ಟೀಕೋಸಿಕ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದು, ಈ ಕಾರಣದಿಂದ ಮುಖದಲ್ಲಿ ದಟ್ಟವಾಗಿ ಕೂದಲು ಬೆಳೆಯುತ್ತದೆ.
ಇದಕ್ಕೂ ಬೆಕ್ಕಿನ ಮಾಂಸ ಸೇವಿಸದ್ದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಅಲ್ಮಾ ಅವರನ್ನು ವೈದ್ಯರು ಸಮಧಾನ ಪಡಿಸಿದ್ದಾರೆ. ಇನ್ನು ಮಗುವಿನ ಈ ಪರಿಸ್ಥಿತಿಗೆ ಕಾರಣ ನೋಡೋದಾದ್ರೆ, ಸುಮಾರು ಒಂದು ಬಿಲಿಯನ್ ಜನರಲ್ಲಿ ಒಬ್ಬರಿಗೆ ಕಾಣಿಸಿಕೊಳ್ಳುವ ಸಿಂಡ್ರೋಮ್ ಇದು. ಈ ರೋಗಕ್ಕೆ ಯಾವುದೇ ಚಿಕಿತ್ಸೆ ಇಲ್ಲ ಅಂತ ವೈದ್ಯರು ಹೇಳಿದ್ದಾರೆ.