ಶಿಶಿರ್ ಅವರು ಚೈತ್ರಾ ಅವರು ತಮ್ಮಿಂದ ಜೋಡಿಯಾಗಲು ಹಿಂದೇಟು ಹಾಕಿದ ವಿಚಾರಕ್ಕೆ ಗರಂ ಆಗಿದ್ದಾರೆ. ನಾನು ನನ್ನದು ಎನ್ನುವವರ ಜತೆ ನಾನು ಇರಲು ಇಷ್ಟಪಡಲ್ಲ. ನಾಮಿನೇಷನ್ ಅಂಥ ಬಂದಾಗ ಅಯ್ಯೋ ಅಯ್ಯೋ ಅಂಥ ಆಳ್ತಾ ಬರುತ್ತಾರೆ. ಇಷ್ಟು ವರ್ಷ ಇರುವವರು ನಾವಲ್ಲ ಆ್ಯಕ್ಟರ್, ಇವರು ಆ್ಯಕ್ಟರ್ ಎಂದು ಶಿಶಿರ್ ಆಕ್ರೋಶ ವ್ಯಕ್ತಪಡಿಸಿದ್ದರು ಇದೆಲ್ಲವುದರ ಮಧ್ಯೆ ನಿನ್ನೆ ಬಿಗ್ಬಾಸ್ ಮನೆಗೆ ಹೊಸ ಅತಿಥಿಗಳು ಬಂದಿದ್ದಾರೆ.
ಬಿಗ್ ಬಾಸ್ ಮನೆಗೆ ‘ರಾಮಾಚಾರಿ’ ಧಾರಾವಾಹಿ ಖ್ಯಾತಿಯ ಚಾರು ಹಾಗೂ ರಾಮಾಚಾರಿ ಅತಿಥಿಯಾಗಿ ಬಂದಿದ್ದಾರೆ. ಹನುಮಂತು ಅವರು ಚಾರು ಅವರಿಗಾಗಿ ಹಾಡೊಂದನ್ನು ಹಾಡಿ, ಗುಲಾಬಿ ಹೂವನ್ನು ನೀಡಿದ್ದಾರೆ.
ಮಕ್ಕಳ ದಿನಾಚರಣೆ ಪ್ರಯುಕ್ತ ಸ್ಪರ್ಧಿಗಳ ಹಳೆಯ ಪೋಟೋಗಳನ್ನು ಟಿವಿಯಲ್ಲಿ ಹಾಕಲಾಗಿದೆ. ಫೋಟೋಗಳನ್ನು ನೋಡಿ ಸ್ಪರ್ಧಿಗಳು ಆ ದಿನಗಳನ್ನು ಸ್ಮರಿಸಿದ್ದಾರೆ. ಇನ್ನು ಬಿಗ್ಬಾಸ್ ಕೊನೆಯ ಟಾಸ್ಕ್ ನೀಡಿದ್ದು ಇದರಲ್ಲಿ ಜೋಡಿಗಳು ಡ್ಯಾನ್ಸ್ ಅಭ್ಯಾಸ ಮಾಡಿ ಅದನ್ನು ಪ್ರದರ್ಶನ ಮಾಡಿದ್ದಾರೆ.
ಇದನ್ನು ಓದಿ: ಬಾಲ್ಯದ ನೆನಪಲ್ಲಿ ಮಿಂದೆದ್ದ ಬಿಗ್ಬಾಸ್ ಮಂದಿ..!
ರಕ್ಕಮ್ಮ ಹಾಡಿಗೆ ಧರ್ಮ – ಐಶ್ವರ್ಯಾ ಅವರು ಸಕಥ್ ಆಗಿ ಸ್ಟೆಪ್ ಹಾಕಿದ್ದಾರೆ. ಚೈತ್ರಾ ಮತ್ತು ಶಿಶಿರ ಜೋಡಿ ಅಣ್ಣ ತಂಗಿ ಮದುವೆ ಕಾನ್ಸೆಪ್ಟ್ ಮಾಡಿದ್ದರು. ಅದರಂತೆ ಅಣ್ಣನಾಗಿ ಶಿಶಿರ ತಂಗಿ ಚೈತ್ರಾಳ ಮದುವೆಯನ್ನು ಧರ್ಮ ಜೊತೆ ಮಾಡಿಸಿದ್ದಾರೆ. ಶಿವರಾಜ್ ಕುಮಾರ್ ಅಭಿನಯದ ಮುತ್ತಣ್ಣ ಚಿತ್ರದ ಹಾಡಿಗೆ ಮಾಡಿದ ಈ ಕಾರ್ಯಕ್ರಮ ಎಲ್ಲರನ್ನು ಭಾವುಕರನ್ನಾಗಿಸಿದೆ. ಮಂಜು ಅವರು ಇದನ್ನು ನೋಡಿ ಕಣ್ಣೀರಿಟ್ಟಿದ್ದಾರೆ. ಮಂಜು ಅವರು ತಮ್ಮ ಮೂವರು ತಂಗಿಯರನ್ನು ನೆನೆದು ಕಣ್ಣೀರಿಟ್ಟಿದ್ದಾರೆ. ತೀರ್ಪುಗಾರರಾಗಿ ಚಾರು- ರಾಮಾಚಾರಿ ಅಂಕಗಳನ್ನು ನೀಡಿದ್ದಾರೆ.