ಕನ್ನಡ ಬಿಗ್ಬಾಸ್ ಸೀಸನ್ 11ರ ಸ್ಪರ್ಧಿಯಾಗಿದ್ದ ಚೈತ್ರಾ ಕುಂದಾಪುರ ಏಕಾಏಕಿ ಬಾತ್ ರೂಂನಲ್ಲೇ ಕುಸಿದು ಬಿದ್ದಿದ್ದಾರೆ. ಹೌದು, ಬಿಗ್ಬಾಸ್ ಮನೆಯ ಬಾತ್ ರೂಂನಲ್ಲಿ ನಿಂತುಕೊಂಡಿದ್ದರು. ಆಗ ಕೂಡಲೇ ನಿಂತುಕೊಂಡ ಜಾಗದಲ್ಲೇ ಕುಸಿದು ಬಿದ್ದಿದ್ದಾರೆ.
ಇದನ್ನು ನೋಡಿದ ಬಿಗ್ ಬಾಸ್ ಮೋಕ್ಷಿತಾ ಪೈ ಮತ್ತು ಗೌತಮಿ ಜಾದವ್ ಸಹಾಯ ಮಾಡುವಂತೆ ಹೇಳಿದ್ರು. ಓಡೋಡಿ ಹೋದ ಇಬ್ಬರು. ಚೈತ್ರಾ ಕುಂದಾಪುರ ಬಿದ್ದಿದ್ದನ್ನು ಕಂಡು ಗಾಬರಿಯಾಗಿದ್ದಾರೆ. ಬಳಿಕ ಬಿಗ್ ಬಾಸ್ ಮನೆಯ ಎಲ್ಲಾ ಸದಸ್ಯರು ಓಡಿ ಬಂದು ಚೈತ್ರಾ ಅವರನ್ನು ಎಬ್ಬಿಸುವ ಪ್ರಯತ್ನ ಮಾಡಿದ್ದಾರೆ. ಎಷ್ಟು ಪ್ರಯತ್ನಿಸಿದರೂ ಕೂಡ ಚೈತ್ರಾ ಅವರಿಗೆ ಪ್ರಜ್ಞೆ ಬಂದಿಲ್ಲ. ಜೋಡಿ ಟಾಸ್ಕ್ ಮುಗಿದ ಬಳಿಕ ಚೈತ್ರಾ ಕುಂದಾಪುರ ಕುಸಿದು ಬಿದ್ದಿದ್ದಾರೆ. ಚೈತ್ರಾ ಕುಂದಾಪುರ ಅವರ ಮುಖದ ಮೇಲೆ ನೀರು ಚಿಮುಕಿಸಿದ್ರೂ ಎಚ್ಚರಗೊಳ್ಳಲಿಲ್ಲ. ಚೈತ್ರಾ ಸ್ಥಿತಿ ನೋಡಿ ಮನೆ ಮಂದಿ ಕೂಡ ಶಾಕ್ ಆದ್ರು.
ಕೂಡಲೇ ಅವರನ್ನು ಕನ್ಫೆಷನ್ ರೂಮಿಗೆ ಕರೆದುಕೊಂಡು ಬರುವಂತೆ ಬಿಗ್ ಬಾಸ್ ಆದೇಶಿಸಿದ್ರು. ತ್ರಿವಿಕ್ರಮ್ ಅವರೇ ಚೈತ್ರಾ ಅವರನ್ನು ಎತ್ತಿಕೊಂಡು ಬಂದು ಕನ್ಫೆಷನ್ ರೂಮ್ ನಲ್ಲಿ ಮಲಗಿಸಿದರು. ಎತ್ತಿಕೊಂಡು ಬರುವಾಗ ಚೈತ್ರಾ ಕಣ್ಣು ಬಿಟ್ಟಿರಲಿಲ್ಲ. ಇದ್ದಕ್ಕಿದ್ದಂತೆ ಚೈತ್ರಾಗೆ ಏನಾಯ್ತು ಎಂದು ಸ್ಪರ್ಧಿಗಳು ಗಾಬರಿಯಲ್ಲಿದ್ದಾರೆ.